ಬಂಧನ್ ಬ್ಯಾಂಕ್ ನಿಂದ ಹೊಸ ಶಾಖೆ ಆರಂಭಿಸುವಂತಿಲ್ಲ ಎಂದ ಆರ್ ಬಿಐ

ಬಂಧನ್ ಬ್ಯಾಂಕ್ ನಿಂದ ಹೊಸ ಶಾಖೆಗಳನ್ನು ಆರಂಭಿಸುವಂತಿಲ್ಲ ಎಂದು ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಷೇರು ಹೊಂದಿರುವ ಪ್ರಮಾಣದ ನಿಯಮ ಪಾಲಿಸುವಲ್ಲಿ ವಿಫಲವಾಗಿರುವುದಕ್ಕೆ ಬ್ಯಾಂಕ್ ನ ಸಿಇಒ ವೇತನವನ್ನು ಈಗಿನ ಮಟ್ಟಕ್ಕೆ ತಡೆಹಿಡಿದಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸೂಚನೆ ನಂತರವೂ ಪರವಾನಗಿ ನಿಯಮದ ಪ್ರಕಾರ ನಾನ್ ಆಪರೇಟಿವ್ ಫೈನಾನ್ಷಿಯಲ್ ಕಂಪನಿ ಷೇರು ಪ್ರಮಾಣವನ್ನು ನಲವತ್ತು ಪರ್ಸೆಂಟ್ ಗೆ ಇಳಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಬಂಧನ್ ಬ್ಯಾಂಕ್ ನಿಂದ ಹೊಸ ಶಾಖೆ ಆರಂಭಿಸಲು ಸಾಮಾನ್ಯ ಅನುಮತಿ ಇಲ್ಲ. ಆದರೆ ಆರ್ ಬಿಐ ಪೂರ್ವಾನುಮತಿ ಪಡೆದು ಆರಂಭಿಸಬಹುದು.

ಬ್ಯಾಂಕ್ ನ ಎಂ.ಡಿ. ಹಾಗೂ ಸಿಇಒ ವೇತನನ್ನು ಮುಂದಿನ ಆದೇಶ ಬರುವ ತನಕ ಈ ಈಗಿರುವ ಮಟ್ಟದಲ್ಲೇ ಮುಂದುವರಿಸಬೇಕು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ ಎಂದು ಬಂಧನ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

RBI bars Bandhan Bank from opening new branches

ಪರವಾನಗಿ ನಿಯಮದ ಪ್ರಕಾರ ನಾನ್ ಆಪರೇಟಿವ್ ಫೈನಾನ್ಷಿಯಲ್ ಕಂಪನಿ ಷೇರು ಪ್ರಮಾಣವನ್ನು ನಲವತ್ತು ಪರ್ಸೆಂಟ್ ಗೆ ಇಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಹಾಗೂ ಈ ಸಂಬಂಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಸಂವಹನ ಮುಂದುವರಿಸುತ್ತದೆ ಎಂದು ಕೂಡ ಹೇಳಿಕೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+