• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್‌ಬಿಐ ಮೀಸಲು ನಿಧಿ 1.96 ಲಕ್ಷ ಕೋಟಿ ರೂಪಾಯಿಗೆ ಕುಸಿತ

|

ನವದೆಹಲಿ, ಆಗಸ್ಟ್ 30: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2019ನೇ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಇರಿಸಿರುವ ಮೀಸಲು ನಿಧಿಯ ಪ್ರಮಾಣ 1.96 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು ನೀಗಿಸಲು ಆರ್‌ಬಿಐ 1.76 ಲಕ್ಷ ಕೋಟಿ ರೂ. ಮೊತ್ತವನ್ನು ವರ್ಗಾಯಿಸಲು ಒಪ್ಪಿಗೆ ಸೂಚಿಸಿತ್ತು. ಅದರ ಬೆನ್ನಲ್ಲೇ ಜೂನ್ 30ರ ವೇಳೆಗೆ ಆರ್‌ಬಿಐ ಮೀಸಲು ಇರಿಸಿದ್ದ ನಿಧಿಯ ಮೊತ್ತವು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಸರ್ಕಾರಕ್ಕೆ 1.76 ಲಕ್ಷ ಕೋಟಿ ಹಣ ಆರ್‌ಬಿಐನಿಂದ ವರ್ಗಾವಣೆ

2018ರ ಜೂನ್ 30ಕ್ಕೆ ಹೋಲಿಸಿದರೆ 2,32,108 ಕೋಟಿ ರೂಪಾಯಿಯಷ್ಟಿದ್ದ ಮೀಸಲು ನಿಧಿಯ ಪ್ರಮಾಣವು 2019ರ ಜೂನ್ 30ಕ್ಕೆ 1,96,344 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ವಾರ್ಷಿಕ ವರದಿ ಹೇಳಿದೆ.

ವರ್ಗಾವಣೆ ಮೊತ್ತ ಮೂರು ಪಟ್ಟು ಅಧಿಕ

ವರ್ಗಾವಣೆ ಮೊತ್ತ ಮೂರು ಪಟ್ಟು ಅಧಿಕ

ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ವರ್ಗಾವಣೆ ಮಾಡಿದ 1,76,501 ಕೋಟಿ ರೂ.ದಲ್ಲಿ 2018-19ನೇ ಸಾಲಿನ 1,23,414 ಕೋಟಿ ರೂ. ಹೆಚ್ಚುವರಿ ಮೊತ್ತವೂ ಸೇರಿದೆ. ಸೋಮವಾರ ನಡೆದ ಕೇಂದ್ರ ಮಂಡಳಿ ಸಭೆಯಲ್ಲಿ ಪರಿಷ್ಕೃತ ಬಂಡವಾಳ ಚೌಕಟ್ಟನ್ನು (ಇಸಿಎಫ್) ಅಳವಡಿಸಿಕೊಳ್ಳಲಾಗಿದ್ದು, ಇದರಲ್ಲಿ 52,637 ಕೋಟಿ ಹೆಚ್ಚುವರಿ ನಿಯೋಜನೆಯನ್ನು ಗುರುತಿಸಲಾಗಿದೆ. ವರ್ಗಾವಣೆಯಾದ ಮೊತ್ತವು ಐದು ವರ್ಷಗಳ ಸರಾಸರಿಯಾದ 53,000 ಕೋಟಿಗೆ ಮೂರು ಪಟ್ಟು ಅಧಿಕವಾಗಿದೆ.

ವಂಚನೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ

ವಂಚನೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ

ಇದರ ಜತೆಗೆ ಬ್ಯಾಂಕ್ ವಂಚನೆಯ ಪ್ರಮಾಣ ಕೂಡ ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕ್ ವಂಚನೆ ಮಾಡುವ ಪ್ರಕರಣಗಳು ಶೇ 15ರಷ್ಟು ಏರಿಕೆಯಾಗಿವೆ. ಈ ವಂಚನೆಯ ಮೊತ್ತದ ಪ್ರಮಾಣ ಶೇ 73.8ರಷ್ಟು ಹೆಚ್ಚಾಗಿವೆ. 2019ರ ಹಣಕಾಸು ವರ್ಷದಲ್ಲಿ 71,542.93 ಕೋಟಿ ರೂ. ವಂಚನೆಯ 6,801 ಪ್ರಕರಣಗಳು ಪತ್ತೆಯಾಗಿವೆ. 2017-2018ರಲ್ಲಿ 5,916 ಪ್ರಕರಣಗಳು ವರದಿಯಾಗಿದ್ದು, 41,167.04 ಕೋಟಿ ರೂ. ಮೊತ್ತದ ಹಣ ವಂಚಿಸಲಾಗಿತ್ತು.

ನಿಧಿ ವರ್ಗಾವಣೆಯಿಂದ ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ : ಕಾಂಗ್ರೆಸ್ ಆರ್ಥಿಕ ತಜ್ಞ ರೇಣು

ಸರ್ಕಾರಿ ಬ್ಯಾಂಕುಗಳಲ್ಲಿ ವಂಚನೆ ಹೆಚ್ಚು

ಸರ್ಕಾರಿ ಬ್ಯಾಂಕುಗಳಲ್ಲಿ ವಂಚನೆ ಹೆಚ್ಚು

2018-19ನೇ ಸಾಲಿನಲ್ಲಿ ವಂಚನೆಯ ಪ್ರಮಾಣ ಹೆಚ್ಚಳವಾಗುವುದಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಹೊಣೆಗಾರರನ್ನಾಗಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ 3,766 ವಂಚನೆ ಪ್ರಕರಣಗಳು ಮತ್ತು 64,509.43 ಕೋಟಿ ರೂ. ಮೊತ್ತದ ವಂಚನೆ ವರದಿಯಾಗಿವೆ. ಕಳೆದ ಸಾಲಿನಲ್ಲಿ 38,260.8 ಕೋಟಿ ಮೊತ್ತ ವಂಚನೆಯ 2,885 ಪ್ರಕರಣಗಳು ದಾಖಲಾಗಿದ್ದವು. ಕುತೂಹಲಕಾರಿ ಅಂಶವೆಂದರೆ ಕಾರ್ಡ್, ಅಂತರ್ಜಾಲ ಮತ್ತು ಠೇವಣಿಗೆ ಸಂಬಂಧಿಸಿದ ಪ್ರಕರಣಗಳು ಕೇವಲ ಶೇ 0.3ರಷ್ಟು ವರದಿಯಾಗಿದೆ. ವಂಚನೆ ಮತ್ತು ನಕಲಿ ದಾಖಲೆಗಳೇ ಪ್ರಮುಖ ಮೋಸದ ಜಾಲಗಳಾಗಿವೆ.

ಆಂತರಿಕ ಮೂಲಗಳ ಆದಾಯ ಏರಿಕೆ

ಆಂತರಿಕ ಮೂಲಗಳ ಆದಾಯ ಏರಿಕೆ

ಆರ್‌ಬಿಐನ ಆಂತರಿಕ ಮೂಲಗಳ ಆದಾಯದ ಪ್ರಮಾಣವು ಶೇ 132.07ರಷ್ಟು, ಅಂದರೆ 1,18,078 ಕೋಟಿ ರೂ.ಗೆ ಹಿಗ್ಗಿದೆ. ಕಳೆದ ಸಾಲಿನಲ್ಲಿ ಇದು 50,880 ಕೋಟಿ ರೂ.ನಷ್ಟಿತ್ತು.

ಬ್ಯಾಂಕಿಂಗ್ ಮತ್ತು ನಾನ್ ಬ್ಯಾಂಕಿಂಗ್ ಎರಡೂ ವಲಯಗಳನ್ನು ಬಲಪಡಿಸಲು ಆರ್‌ಬಿಐ ಶಿಫಾರಸು ಮಾಡಿದೆ. ಮೂಲಸೌಕರ್ಯಗಳ ಮೇಲಿನ ವೆಚ್ಚ ಮತ್ತು ಕಾರ್ಮಿಕ ಕಾನೂನು ಹಾಗೂ ತೆರಿಗೆ ಪದ್ಧತಿಯನ್ನು ರಚನಾತ್ಮಕವಾಗಿ ಸುಧಾರಣೆ ಮಾಡಲು ಅದು ಸಲಹೆ ನೀಡಿದೆ. ಆರ್‌ಬಿಐ ತನ್ನ ಪ್ರಮುಖ ದರಗಳನ್ನು ಶೇ 1.10ರಷ್ಟು ಕಡಿತಗೊಳಿಸಿದೆ. ಇದು ಕಳೆದ ಒಂಬತ್ತು ವರ್ಷಗಳಲ್ಲಿಯೇ ಕಡಿಮೆಯಾಗಿದೆ. ನಾಲ್ಕು ಸತತ ಕಡಿತಗಳಲ್ಲಿ ಶೇ 5.4ರಷ್ಟು ದರ ಕಡಿತ ಮಾಡಲಾಗಿದೆ.

2000 ರುಪಾಯಿ ನೋಟುಗಳ ಚಲಾವಣೆ ಪ್ರಮಾಣದಲ್ಲಿ ಇಳಿಕೆ

English summary
RBI Annual report said, following the transfer of Rs 1.76 lakh crore fund to the government, its contingency fund has dipped to Rs 1.96 lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X