ಬೆಂಗಳೂರಲ್ಲಿ Rapido ರೆಂಟಲ್ ಸರ್ವೀಸಸ್‍ಗೆ ಚಾಲನೆ, ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಫೆಬ್ರವರಿ 22: ಭಾರತದ ಅತ್ಯಂತ ದೊಡ್ಡ ಬೈಕ್ ಟ್ಯಾಕ್ಸಿ ಪ್ಲಾಟ್‍ಫಾರಂ Rapido ಇಂದು ಬೆಂಗಳೂರು, ದೆಹಲಿ ಎನ್‍ಸಿಆರ್, ಹೈದರಾಬಾದ್, ಚೆನ್ನೈ, ಕೊಲ್ಕತಾ ಮತ್ತು ಜೈಪುರ ಒಳಗೊಂಡು ಭಾರತದ ಆರು ನಗರಗಳಲ್ಲಿ ಮೊಟ್ಟಮೊದಲ ಬಾರಿಗೆ Rapido ರೆಂಟಲ್ ಸರ್ವೀಸಸ್ ಆರಂಭಿಸಿದೆ.
2ಡಬ್ಲ್ಯೂ ಬೈಕ್ ಟ್ಯಾಕ್ಸಿ ರೆಂಟಲ್ ಸೇವೆಗಳ ಪರಿಕಲ್ಪನೆಯನ್ನು ಪರಿಚಯಿಸಿದ ಈ ಕಂಪನಿಯು ವಿವಿಧ ತಾಣಗಳಲ್ಲಿ ಹಲವು ಬುಕಿಂಗ್‍ಗಳ ಅಡೆತಡೆ ಮತ್ತು ರೈಡ್ ಬರಲು ಕಾಯುವ ತೊಂದರೆ ನಿವಾರಿಸಿ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಸೇವೆ ಒದಗಿಸುವ ಉದ್ದೇಶ ಹೊಂದಿದೆ.
Rapido ರೆಂಟಲ್ 1 ಗಂಟೆ, 2 ಗಂಟೆಗಳು, 3 ಗಂಟೆಗಳು, 4 ಗಂಟೆಗಳು ಮತ್ತು 6 ಗಂಟೆಗಳು ಹೀಗೆ ಆಯ್ದ ಪ್ಯಾಕೇಜ್ ಅವಧಿಗೆ ಬುಕ್ ಮಾಡಬಹುದು ಮತ್ತು ವಿಶೇಷವಾದ ಕ್ಯಾಪ್ಟನ್ (Rapido ಡ್ರೈವರ್ ಪಾರ್ಟ್‍ನರ್) ಇಡೀ ಟ್ರಿಪ್‍ನಾದ್ಯಂತ ಗ್ರಾಹಕರಿಗೆ ಲಭ್ಯವಿರುತ್ತಾನೆ. ಪ್ರತಿ ಕಾಪ್ಟನ್ ಕೂಡಾ ಈ ಸೇವೆಗೆ ಅರ್ಹರಾಗಿರುತ್ತಾರೆ ಮತ್ತು ಅದು ಪೂರ್ವನಿಯೋಜಿತವಾಗಿ ರೆಂಟಲ್‍ಗೆ ಸನ್ನದ್ಧವಾಗಿರುತ್ತದೆ. ಈ ವಿನೂತನ ಬಗೆಯ ಸೇವೆಯಿಂದ ಕಂಪನಿಯು ಗ್ರಾಹಕರಿಗೆ ಉನ್ನತ ಅನುಭವ ನೀಡುವ ಮತ್ತು ಕ್ಯಾಪ್ಟನ್‍ಗಳಿಗೆ ಉತ್ತಮ ಗಳಿಕೆಯ ಅವಕಾಶ ನೀಡುವ ಗುರಿ ಹೊಂದಿದೆ.
ಬೆಂಗಳೂರಲ್ಲಿ Rapido ರೆಂಟಲ್ ಸರ್ವೀಸಸ್‍ಗೆ ಚಾಲನೆ
ರೆಂಟಲ್ ಪ್ಯಾಕೇಜ್ ಬೆಲೆ ವಿವರಗಳು:
ಪ್ಯಾಕೇಜ್ ದರ (ರೂ.)--ಅವಧಿಯ ಮಿತಿ (ಗಂಟೆಗಳು)-- ದೂರದ ಮಿತಿ (ಕಿ.ಮೀ.ಗಳು)
ಪ್ಯಾಕೇಜ್ 1: 99 ರು; 1 ಗಂಟೆ;10 ಕಿ.ಮೀ
ಪ್ಯಾಕೇಜ್ 2: 199; 2 ; 20
ಪ್ಯಾಕೇಜ್ 3: 299; 3; 30
ಪ್ಯಾಕೇಜ್ 4: 399; 4; 40
ಪ್ಯಾಕೇಜ್ 5: 599; 6; 60
ಪ್ಯಾಕೇಜ್ ಅಲೋಯೆನ್ಸ್ ಮೀರಿ ಬಳಕೆ
ಪ್ರತಿ ಕಿ.ಮೀ.ಗೆ 10 ರು; ಪ್ರತಿ ನಿಮಿಷಕ್ಕೆ 1.5 ರು
ಗ್ರಾಹಕರು app ಡೌನ್‍ಲೋಡ್ ಮಾಡಬೇಕು, ಅವರ ಖಾತೆಗೆ ಲಾಗಿನ್ ಆಗಬೇಕು ಮತ್ತು Rapido ರೆಂಟಲ್ ರೈಡ್ ಅನ್ನು ಅವರ ಐಒಎಸ್/ಆಂಡ್ರಾಯಿಡ್ ಫೋನ್‍ಗಳಲ್ಲಿ ಬುಕ್ ಮಾಡಬೇಕು.