ಮಲ್ಯ ನೀಡಿದ ರಾಜೀನಾಮೆ ತಿರಸ್ಕಾರವಾಗಿದ್ದೇಕೆ?

Posted By:
Subscribe to Oneindia Kannada

ನವದೆಹಲಿ, ಮೇ 04: ಉದ್ಯಮಿ ವಿಜಯ್ ಮಲ್ಯ ಅವರು ರಾಜ್ಯಸಭೆ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ತಿರಸ್ಕರಿಸಿದ್ದಾರೆ.

ಸಂಸತ್​ನ ಸದಾಚಾರ ಸಮಿತಿ ವರದಿ ಆಧಾರದಲ್ಲಿ ಅನ್ಸಾರಿ ಈ ಕ್ರಮ ಕೈಗೊಂಡಿದ್ದಾರೆ. ಸಾಲ ಮರುಪಾವತಿ ವಿಚಾರದಲ್ಲಿ ಮಲ್ಯ ಅವರು ನೀಡಿದ ಸ್ಪಷ್ಟನೆ ಸಂದೇಶವನ್ನು ತಿರಸ್ಕರಿಸಲಾಗಿದೆ. ಮಲ್ಯರಿಂದ ಸಂಸತ್ತಿನ ಗೌರವಕ್ಕೆ ಕುಂದುಂಟಾಗಿದ್ದು, ಸದಸ್ಯತ್ವವನ್ನು ರದ್ದುಗೊಳಿಸಲು ಸಮಿತಿ ಶಿಫಾರಸು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.[ಈಗ ಮಲ್ಯ ಮುಂದಿರುವ ಆಯ್ಕೆಗಳೇನು?]

Rajya Sabha chairman Rejects Vijay Mallya's Resignation

ರಾಜ್ಯಸಭೆಯ ನಿಯಮಾವಳಿ ಪ್ರಕಾರ ರಾಜೀನಾಮೆ ಪತ್ರವನ್ನು ಖುದ್ದಾಗಿ ಅಥವಾ ಅಧಿಕೃತ ವ್ಯಕ್ತಿಗಳ ಮೂಲಕ ರವಾನಿಸಬೇಕಾಗುತ್ತದೆ. ಆದರೆ ಮಲ್ಯ ಸ್ಕ್ಯಾನ್ ಮಾಡಿದ ಪತ್ರವನ್ನು ಇಮೇಲ್ ಮೂಲಕ ಕಳುಹಿಸಿದ್ದರು. ಹೀಗಾಗಿ ತಾಂತ್ರಿಕ ಕಾರಣಗಳಿಂದ ರಾಜೀನಾಮೆ ಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಸದಾಚಾರ ಸಮಿತಿ ಹೇಳಿದೆ. [100 ಕೋಟಿ ರು ಮೌಲ್ಯದ ಬಂಗಲೆಯಲ್ಲಿ ಮಲ್ಯ ನೆಲೆ]

ರಾಜ್ಯಸಭೆಯಿಂದ ಮಲ್ಯರನ್ನು ಉಚ್ಚಾಟಿಸಲು ನೀಡಿರುವ ಶಿಫಾರಸ್ಸಿಗೆ ಬೆಂಬಲ ಸಿಕ್ಕರೆ, ನಿಲುವಳಿ ಮಂಡಿಸಿ ಮತದಾನ ನಡೆಸಿದ ನಂತರ ಉಚ್ಚಾಟಿಸಲಾಗುತ್ತದೆ. [ಮಲ್ಯರನ್ನು ಯುಕೆಯಿಂದ ಗಡಿಪಾರು ಮಾಡಿ: ಭಾರತ]

'ನನ್ನನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಕರೆಯುವ ಮೊದಲು ಅಂಕಿ ಅಂಶಗಳನ್ನು ಪರಿಶೀಲಿಸಿ, ಆರ್ ಬಿಐ ಪಟ್ಟಿಯಲ್ಲಿರುವ ಸಾಲಗಾರರನ್ನು ನೋಡಿ' ಎಂದು ವಿಜಯ್ ಮಲ್ಯ ಅವರು ಟ್ವೀಟ್ ಮಾಡಿ ಭಾರತದ ಮಾಧ್ಯಮಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು.

ಒಂದು ಮೂಲದ ಪ್ರಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆ 7,686ರಷ್ಟಿದ್ದು 66,190 ಕೋಟಿ ರು ಬಾಕಿ ಬರಬೇಕಿದೆ. ಪರಿಸ್ಥಿತಿ ಹೀಗಿದ್ದರೂ ಮಲ್ಯರನ್ನು ಮಾತ್ರ ಟಾರ್ಗೆಟ್ ಮಾಡುತ್ತಿರುವುದೇಕೆ ಎಂಬ ಪ್ರಶ್ನೆ ಮಲ್ಯರ ಅಭಿಮಾನಿಗಳು ಕೇಳುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Troubles do not seem to end for liquor baron Vijay Mallya as his resignation was rejected by Rajya Sabha chairman Hamid Ansari on technical grounds.
Please Wait while comments are loading...