ಎಸ್ ಬಿಐ ಅಧ್ಯಕ್ಷ ಸ್ಥಾನಕ್ಕೆ ರಜನೀಶ್ ಕುಮಾರ್ ನೇಮಕ
ಮುಂಬೈ, ಅಕ್ಟೋಬರ್ 05: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ)ನ ನೂತನ ಅಧ್ಯಕ್ಷರಾಗಿ ರಜನೀಶ್ ಕುಮಾರ್ ನೇಮಕವಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ರಜನೀಶ್ ಅವರ ನೇಮಕ ಮಾಡಲು ಒಪ್ಪಿಗೆ ನೀಡಿದೆ.
ಅರುಂಧತಿ ಭಟ್ಟಾಚಾರ್ಯ ಅವರ ಅಧಿಕಾರಾವಧಿ ಶುಕ್ರವಾರ(ಅಕ್ಟೋಬರ್ 06)ದಂದು ಕೊನೆಗೊಳ್ಳಲಿದೆ. ರಜನೀಶ್ ಅವರನ್ನು ಮೂರು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸದ್ಯ ಎಸ್‌ಬಿಐನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಜನೀಶ್ ಅಕ್ಟೋಬರ್ 7 ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಮಿತಿ Appointments Committee of the Cabinet (ACC) ತಿಳಿಸಿದೆ.
1980ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಎಸ್ ಬಿಐ ಸೇರಿದ ಕುಮಾರ್ ಅವರು 37 ವರ್ಷಗಳ ಅನುಭವ ಹೊಂದಿದ್ದಾರೆ. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಇವರಿಗೆ ಪ್ರವಾಸ, ಬಾಡ್ಮಿಂಟನ್ ಇಷ್ಟದ ಸಂಗತಿಗಳಾಗಿವೆ.
ಎಸ್‌ಬಿಐನ ಮೊದಲ ಮಹಿಳಾ ಅಧ್ಯಕ್ಷರಾಗಿ ಭಟ್ಟಾಚಾರ್ಯ ಅವರು 2013ರಲ್ಲಿ ನೇಮಕ ಆಗಿದ್ದರು. ಮೂರು ವರ್ಷಗಳ ಅವಧಿ ಮುಗಿದ ಬಳಿಕ 2016ರ ಅಕ್ಟೋಬರ್‌ನಲ್ಲಿ ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿತ್ತು.












Click it and Unblock the Notifications