ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ಮೊಕದ್ದಮೆ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 26: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವರದಿ ಪ್ರಕಟಿಸಿದ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ರು ಮೊಕದ್ದಮೆಯನ್ನು ಹೂಡಿರುವುದಾಗಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಸಂಸ್ಥೆ ಹೇಳಿದೆ.

ಕಾಂಗ್ರೆಸ್ ವಕ್ತಾರ ಶಕ್ತಿಸಿನ್ಹಾ ಗೋಹಿಲ್ ಅವರು ರಫೆಲ್ ಫೈಟರ್ ಜೆಟ್ ಮತ್ತು ಅನಿಲ್ ಅಂಬಾನಿ ವಿರುದ್ಧ ನಿರಂತರ ಆರೋಪ ಮಾಡಿದ್ದರು. ನ್ಯಾಷನಲ್ ಹೆರಾಲ್ಡ್ ನ ಪಬ್ಲಿಷರ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್, ಸಂಪಾದಕ ಝಾಫರ್ ಆಗಾ, ಲೇಖನ ಬರೆದ ವಿಶ್ವದೀಪಕ್ ವಿರುದ್ಧವೂ ಮೊಕದ್ದಮೆ ಹೂಡಲಾಗಿದೆ.

 58 ಸಾವಿರ ಕೋಟಿಯ ರಫೇಲ್ ಡೀಲ್, ಅದರ ಸುತ್ತ- ಮುತ್ತ, ಎತ್ತ? 58 ಸಾವಿರ ಕೋಟಿಯ ರಫೇಲ್ ಡೀಲ್, ಅದರ ಸುತ್ತ- ಮುತ್ತ, ಎತ್ತ?

ಸೆಪ್ಟೆಂಬರ್ 07ರೊಳಗೆ ಈ ಕುರಿತಂತೆ ಪ್ರತಿಕ್ರಿಯಿಸಿ, ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಜಡ್ಜ್ ಪಿಜೆ ತಮಕುವಾಲಾ ಅವರು ನೋಟಿಸ್ ಜಾರಿ ಮಾಡಿದ್ದಾರೆ.

Rafale row: Anil Ambani files Rs 5,000 crore defamation suit against National Heralad

ಕಾಂಗ್ರೆಸ್ ಮುಖಂಡರಾದ ಜೈವೀರ್ ಶೆರ್ಗಿಲ್, ರಣದೀಪ್ ಸುರ್ಜೇವಾಲಾ, ಅಶೋಕ್ ಚಾವಣ್, ಸಂಜಯ್ ನಿರುಪಮ್, ಅನುರಾಗ್ ನಾರಾಯಣ ಸಿಂಗ್, ಓಮನ್ ಚಾಂಡಿ, ಶಕ್ತಿ ಸಿನ್ಹಾ ಗೋಹಿಲ್, ಅಭಿಷೇಕ್ ಮನು ಸಿಂಘ್ವಿ, ಸುನಿಲ್ ಕುಮಾರ್ ಜಾಖರ್ ಮತ್ತು ಪ್ರಿಯಾಂಕಾ ಚತುರ್ವೇದಿ ಅವರಿಗೂ ರಿಲಯನ್ಸ್ ಖಡಕ್ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Anil Ambani's Reliance Group companies have filed a Rs 5,000-crore defamation suit against Congress-owned 'National Herald', claiming an article published in the newspaper regarding the Rafale fighter deal was "libelous and derogatory".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X