• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್‌ಗೆ 2ನೇ ತ್ರೈಮಾಸಿಕದಲ್ಲಿ ಭರ್ಜರಿ ನಿವ್ವಳ ಲಾಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 2021ನೇ ಸಾಲಿನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಬುಧವಾರ ಪ್ರಕಟವಾದ ವರದಿಯಂತೆ ಐಟಿ ಸಂಸ್ಥೆಗೆ ಈ ತ್ರೈಮಾಸಿಕದಲ್ಲಿ ಶೇ 11.9 ರಷ್ಟು ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ಶೇ 4.4 ರಷ್ಟು ಅಥವಾ 5,195 ಕೋಟಿ ರು ಹೆಚ್ಚಿನ ಲಾಭ ಪಡೆದುಕೊಂಡಿದೆ.

ಈ ಹಿಂದಿನ ತ್ರೈಮಾಸಿಕದಲ್ಲಿ 27,896 ಕೋಟಿ ರು ಆದಾಯ ಗಳಿಕೆಗೆ ಹೋಲಿಸಿದರೆ ಈ ಅವಧಿಯಲ್ಲಿ ಕ್ರೋಢಿಕೃತ ಆದಾಯವು 29,602 ಕೋಟಿ ರು ಗೆ ಏರಿಕೆಯಾಗಿದೆ., ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 6.1% ಅನುಕ್ರಮ ಬೆಳವಣಿಗೆ ಮತ್ತು 20.5% ಬೆಳವಣಿಗೆ ಜೊತೆಗೆ 24,570 ಕೋಟಿ ರು ಆದಾಯ ಗಳಿಸಿತ್ತು.

ಭೌಗೋಳಿಕ ಮತ್ತು ವಿಭಾಗಗಳಲ್ಲಿ ಬೆಳವಣಿಗೆಯು ವಿಶಾಲ-ಆಧಾರಿತವಾಗಿದೆ, ಉತ್ತರ ಅಮೇರಿಕ ಭಾಗದಲ್ಲಿ ಶೇ 23.1 ಮತ್ತು ದೊಡ್ಡ ವಿಭಾಗವಾದ ಹಣಕಾಸು ಸೇವೆಗಳು ಶೇ 20.5 ರಷ್ಟು ವರ್ಷ ದಿಂದ ವರ್ಷಕ್ಕೆ ಹೋಲಿಕೆಯಲ್ಲಿ ಹೆಚ್ಚಿನ ಪ್ರಗತಿ ಕಂಡಿವೆ.

"ನಮ್ಮ ಅದ್ಭುತ ಕಾರ್ಯಕ್ಷಮತೆ ಮತ್ತು ದೃಢವಾದ ಬೆಳವಣಿಗೆಯ ದೃಷ್ಟಿಕೋನವು ನಮ್ಮ ಕಾರ್ಯತಂತ್ರದ ಗಮನ ಮತ್ತು ನಮ್ಮ ಡಿಜಿಟಲ್ ಕೊಡುಗೆಗಳ ಬಲವನ್ನು ಪ್ರದರ್ಶಿಸುತ್ತಲೇ ಇದೆ. ಜಾಗತಿಕ ಉದ್ಯಮಗಳು ತಮ್ಮ ಡಿಜಿಟಲ್ ಪ್ರಯಾಣವನ್ನು ವೇಗವಾಗಿ ಹೆಚ್ಚಿಸುವುದರೊಂದಿಗೆ ನಾವು ಬಲವಾದ ಮಾರುಕಟ್ಟೆ ಅವಕಾಶವನ್ನು ನೋಡುತ್ತಿದ್ದೇವೆ, ಸಾಮರ್ಥ್ಯಗಳನ್ನು ವಿಸ್ತರಿಸುವತ್ತ ನಮ್ಮ ನಿರಂತರ ಹೂಡಿಕೆ ಇರಲಿದೆ" ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲೀಲ್ ಪರಿಖ್ ಪ್ರತಿಕ್ರಿಯಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಆದಾಯ ಗಳಿಕೆ ಹೆಚ್ಚಳ:
ಒಟ್ಟು ಆದಾಯಕ್ಕೆ ಡಿಜಿಟಲ್ ವ್ಯವಹಾರದಿಂದ ಬರುವ ಆದಾಯವು ಶೇ 56.1ರಷ್ಟು ಕೊಡುಗೆ ನೀಡಿದೆ ಮತ್ತು ವರ್ಷದಿಂದ ವರ್ಷಕ್ಕೆ ಆಧಾರದ ಮೇಲೆ ಶೇ 42.4 ರಷ್ಟು ಹೆಚ್ಚಾಗಿದೆ.

ಉದ್ಯೋಗಿಗಳ ಮೇಲಿನ ವೆಚ್ಚವು ಅನುಕ್ರಮವಾಗಿ ಶೇ 3.4 ಮತ್ತು ವರ್ಷದಿಂದ ವರ್ಷಕ್ಕೆ ಆಧಾರದ ಮೇಲೆ ಶೇ 17.5 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಂಪನಿಯ ಅಟ್ರಿಶನ್ ನಿಯಂತ್ರಿಸಲು ಸಾಧ್ಯವಾಗಿಲ್ಲ, ಶೇ 13.1 ರಷ್ಟಿದ್ದ ದರವು ಶೇ 20.1ಕ್ಕೆ ಜಿಗಿದಿದೆ.

ಉಪ-ಗುತ್ತಿಗೆದಾರರ ವೆಚ್ಚ ಹೆಚ್ಚಳಕ್ಕೆ ಪೂರೈಕೆ ಕಡೆಯಿಂದ ಉಂಟಾದ ಸಮಸ್ಯೆಗಳು ಕಾರಣವಾಯಿತು, ಇದು ಅನುಕ್ರಮವಾಗಿ ಶೇ 24.4 ರಷ್ಟು ಹೆಚ್ಚಳವನ್ನು ಮತ್ತು ವರ್ಷದಿಂದ ವರ್ಷಕ್ಕೆ ಆಧಾರದ ಮೇಲೆ ಶೇ 87 ರಷ್ಟು ಭಾರಿ ಏರಿಕೆಯನ್ನು ಕಂಡಿದೆ.

2.15 ಶತಕೋಟಿ ಡಾಲರ್ ಒಪ್ಪಂದ:

ಕಳೆದ ತ್ರೈಮಾಸಿಕದಲ್ಲಿ ಕಂಪನಿಯು 2.15 ಶತಕೋಟಿ ಡಾಲರ್ ನಷ್ಟು ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಿದೆ, ಇದು ಕಂಪನಿಗೆ ಡಿಜಿಟಲ್ ರೂಪಾಂತರದ ಜಾಗದಲ್ಲಿ ಈಗಾಗಲೇ ಅತ್ಯಂತ ಆರೋಗ್ಯಕರವಾದ ಪ್ರಗತಿಗೆ ಕಾರಣವಾಗಿದೆ.

ತೈಮಾಸಿಕ ವರದಿ ಉತ್ತಮವಾಗಿ ಫಲಿತಾಂಶ ಹೊರ ಬಂದಿರುವುದರಿಂದ ಕಂಪನಿಯು ಮಧ್ಯಂತರ ಲಾಭಾಂಶವನ್ನು 15 ರು / ಪ್ರತಿ ಷೇರು ಡಿವಿಡೆಂಡ್ ಘೋಷಿಸಿದೆ.

ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಆದಾಯ ಪ್ರಗತಿ ಮಾರ್ಗದರ್ಶಿ ಗುರಿಯನ್ನು ಶೇ 16 ರಿಂದ ಶೇ 16.5 -17.5ಕ್ಕೇರಿಸಲಾಗಿದೆ

ಬೆಂಗಳೂರು ಮೂಲದ ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಷೇರುಗಳು ಬಾಂಬೆ ಷೇರುಪೇಟೆಯಲ್ಲಿ ಇಂದು ಶೇ 1.43 ರಷ್ಟು ಅಥವಾ 24.05 ರು ಏರಿಕೆ ಕಂಡು 1,709.20 ರು ನಂತೆ ವಹಿವಾಟು ನಡೆಸಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಇನ್ಫೋಸಿಸ್ 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕ್ಲಬ್ಬಿಗೆ ಎಂಟ್ರಿ ಕೊಟ್ಟ ನಾಲ್ಕನೇ ಭಾರತೀಯ ಕಂಪನಿ ಎನಿಸಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ (ಮಾರುಕಟ್ಟೆ ಮೌಲ್ಯ 140 ಬಿಲಿಯನ್ ಡಾಲರ್), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್( 115 ಬಿಲಿಯನ್ ಡಾಲರ್), ಎಚ್ ಡಿ ಎಫ್ ಸಿ ಬ್ಯಾಂಕ್ (100.1 ಬಿಲಿಯನ್ ಡಾಲರ್ ) ಇತರೆ ಮೂರು ಕಂಪನಿಗಳಾಗಿವೆ.

ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಮುಖ ಐಟಿ ಕಂಪನಿಗಳು ಸುಮಾರು 1 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿ ಘೋಷಿಸಿವೆ. ಕಳೆದ ಆರ್ಥಿಕ ವರ್ಷದಲ್ಲಿ 21,00 ಫ್ರೆಶರ್ಸ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಇನ್ಫೋಸಿಸ್ ಪ್ರಕಟಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 25,000 ಹೊಸ ನೇಮಕಾತಿ ನಡೆಯಲಿದ್ದು, ಈ ಪೈಕಿ 24, 000 ಮಂದಿಯನ್ನು ಭಾರತದಲ್ಲೇ ನೇಮಕ ಮಾಡಲಾಗುತ್ತದೆ, ಕ್ಯಾಂಪಸ್ ಸಂದರ್ಶನ ಮೂಲಕ ಪದವೀಧರರನ್ನು ಆಯ್ಕೆ ಮಾಡಲಾಗುವುದು ಎಂದು ಪ್ರವೀಣ್ ರಾವ್ ಹೇಳಿದರು.

ಕೋವಿಡ್ 19 ಕಾಲದಲ್ಲಿ ತನ್ನ ಉದ್ಯೋಗಿಗಳು ಹಾಗೂ ಕುಟುಂಬಕ್ಕೆ ಲಸಿಕೆ ಕೊಡಿಸಲು ಕೊವಿನ್ ವೇದಿಕೆ ಜೊತೆಗೆ ಇನ್ಫೋಸಿಸ್ ತನ್ನದೇ ಪ್ರತ್ಯೇಕ ವೇದಿಕೆ ಒದಗಿಸಿದೆ.

English summary
Infosys has recorded a strong performance in second quarter of the financial year 2021-22 with a 19.4 percent increase in the year on year growth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X