ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 11,300 ಕೋಟಿ ವಂಚನೆ

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 14: ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮುಂಬೈನ ವಿವಿಧ ಶಾಖೆಯಲ್ಲಿ 177 ಕೋಟಿ ಅಮೆರಿಕನ್ ಡಾಲರ್ ಮೋಸದ ವ್ಯವಹಾರ ನಡೆದಿದೆ. "ಕೆಲವು ಖಾತೆದಾರರ ಅನುಕೂಲಕ್ಕಾಗಿ ಈ ವ್ಯವಹಾರ ಮಾಡಲಾಗಿದೆ" ಎಂದು ಬ್ಯಾಂಕ್ ತಿಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದಲ್ಲೇ ಎರಡನೇ ಅತಿ ದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್.

ಆಸ್ತಿ ಮೌಲ್ಯದ ಆಧಾರದ ಮೇಲೆ ದೇಶದ ನಾಲ್ಕನೇ ದೊಡ್ಡ ಬ್ಯಾಂಕ್. ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾರ ಹೆಸರನ್ನೂ ಬಹಿರಂಗ ಪಡಿಸಿಲ್ಲ. ಆದರೆ ಈ ಬಗ್ಗೆ ತನಿಖಾ ಸಂಸ್ಥೆಗಳಿಗೆ ದೂರು ನೀಡಲಾಗಿದೆ. ಈ ವ್ಯವಹಾರದಲ್ಲಿ ಬ್ಯಾಂಕ್ ನ ಜವಾಬ್ದಾರಿ ಏನು ಎಂಬ ಬಗ್ಗೆ ಮೌಲ್ಯಮಾಪನ ನಡೆಯಲಿದೆ.

ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಮಾರಾಟಕ್ಕಿದೆ, ಜಸ್ಟ್ 500

ಪಂಜಾಬ್ ನ್ಯಾಷನಲ್ ಬ್ಯಾಕ್ ನಿಂದ ಹಣ ವರ್ಗಾವಣೆ ಆದ ನಂತರ ಇತರೆ ಬ್ಯಾಂಕ್ ನವರೂ ಅವೇ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವ್ಯವಹಾರದ ಸ್ವರೂಪ ಹಾಗೂ ಒಟ್ಟಾರೆ ವಿಶ್ಲೇಷಣೆ ಮಾಡಿದ ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಜವಾಬ್ದಾರಿ ಏನು ಎಂಬುದು ಗೊತ್ತಾಗಲಿದೆ.

Punjab National Bank detects $1.77 billion worth of fraudulent transactions

ಅಕ್ರಮ ವ್ಯವಹಾರಗಳ ಆರೋಪಗಳನ್ನು ಈಗಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎದುರಿಸುತ್ತಿದೆ. ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ನೀರವ್ ಮೋದಿ ಅವರ ವಿರುದ್ಧ ಇದೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 44 ಮಿಲಿಯನ್ ಅಮೆರಿಕ ಡಾಲರ್ ನಷ್ಟು ಮೊತ್ತ ಮೋಸ ಮಾಡಿದ ಆರೋಪ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ನ ಹತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಸಿಬಿಐ ತನಿಖೆ ಆರಂಭಿಸಿದೆ. ಇದರಿಂದ ಬ್ಯಾಂಕ್ ನ ಸದ್ಯದ ಪರಿಸ್ಥಿತಿ ಬಗ್ಗೆ ಸರಕಾರಕ್ಕೆ ಮಾಹಿತಿ ಗೊತ್ತಾಗಲಿದೆ. ಇತರ ಬ್ಯಾಂಕ್ ಗಳಿಗೆ ಸಹ 'ಸ್ವಚ್ಛತಾ' ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian state-run Punjab National Bank said on Wednesday it had detected some "fraudulent and un authorised" transactions worth about $1.77 billion at one of its branches in Mumbai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ