10 ನೌಕರರಿರುವ ಸಂಸ್ಥೆಗೂ ಪಿಎಫ್ ಕಡ್ಡಾಯ

Subscribe to Oneindia Kannada

ನವದೆಹಲಿ, ಫೆಬ್ರವರಿ, 01: ಕಾರ್ಮಿರರ ಪರ ನಿಲುವು ತಾಳಿರುವ ಕೇಂದ್ರ ಸರ್ಕಾರ 10 ಅಥವಾ ಅದಕ್ಕಿ೦ತ ಹೆಚ್ಚು ನೌಕರರನ್ನು ಹೊ೦ದಿರುವ ಸ೦ಸ್ಥೆಗಳೂ ಪಿಎಫ್ ಸೌಲಭ್ಯ ನೀಡಬೇಕು ಎ೦ಬ ನಿಯಮ ಜಾರಿಗೆ ಮುಂದಾಗಿದೆ.

ಹೊಸ ನಿಯಮ ಜಾರಿಯಾದರೆ 50 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಈಗಿರುವ ಕಾನೂನಿನ ಪ್ರಕಾರ, 20 ಹಾಗೂ ಅದಕ್ಕಿ೦ತ ಹೆಚ್ಚಿನ ನೌಕರರನ್ನು ಹೊ೦ದಿರುವ ಸ೦ಸ್ಥೆಗಳು ಮಾತ್ರ ಕಾಮಿ೯ಕರ ಭವಿಷ್ಯ ನಿಧಿ ಸ೦ಘಟನೆ(ಇಪಿಎಫ್ಒ) ಮೂಲಕ ಪಿಎಫ್ ಸೌಲಭ್ಯ ಒದಗಿಸುತ್ತಿವೆ.[ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]

money

ಅಲ್ಲದೇ ಕಾಮಿ೯ಕ ಕಾಯ್ದೆಯಲ್ಲಿನ ಕೆಲ ಅಂಶಗಳಿಗೂ ತಿದ್ದುಪಡಿ ತರುವ ಕುರಿತೂ ಸಕಾ೯ರ ಚಿ೦ತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ ಅಥವಾ ಮೇನಲ್ಲಿ ನಿಯಮ ಜಾರಿಗೆ ಬರಲಿದೆ ಎಂದು ಕಾಮಿ೯ಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.[20 ದಿನದಲ್ಲೇ ಪಿಎಫ್ ಮಾಹಿತಿ ಪಡೆಯಿರಿ]

ಪಿಎಫ್ ಹಣವನ್ನು ಆನ್‌ಲೈನ್ ಮೂಲಕ ಹಿಂಪಡೆಯುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹಿಂದೆಯೇ ತಿಳಿಸಿತ್ತು. ಮೊಬೈಲ್ ನಲ್ಲಿಯೇ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವ್ಯವಸ್ಥೆಯನ್ನು ಸಹ ನೀಡಲಾಗಿತ್ತು. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರ ಪರವಾದ ಅನೇಕ ನೀತಿಗಳ ಜಾರಿಗೆ ಮುಂದಾಗಿದ್ದು ಇವುಗಳ ಅನುಷ್ಠಾನ ಯಾವ ರೀತಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a bid to provide social security to an additional 50 lakh workers under retirement fund body EPFO, the labour ministry has decided to halve the threshold for the coverage of firms to 10 workers through an executive order.
Please Wait while comments are loading...