ಬ್ಯಾಂಕ್ ಕೆಲಸ ಇದ್ರೆ ಜನವರಿ 11 ರವರೆಗೆ ಕಾಯಬೇಕು

Subscribe to Oneindia Kannada

ಬೆಂಗಳೂರು, ಜನವರಿ, 08: ಇಂದು, ನಾಳೆ ಮತ್ತು ನಾಡಿದ್ದು ಬ್ಯಾಂಕ್ ರಜಾ. ನಿಮ್ಮ ಹೊಸ ವರ್ಷದ ಆರಂಭದ ಹಣಕಾಸು ಕೆಲಸಕ್ಕೆ ಬ್ರೇಕ್. ಸೋಮವಾರ ಅಂದರೆ ಜನವರಿ 11 ರಂದು ಏಕಾಏಕಿ ಬ್ಯಾಂಕ್ ಗಳಿಗೆ ಗ್ರಾಹಕರು ನುಗ್ಗುವುದು ನಿಶ್ಚಿತ.

ಕಾರ್ಮಿಕರಿಗೆ ಸಂಬಂಧಿಸಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಜಾರಿ ಮಾಡಿರುವ ನೀತಿ ವಿರೋಧಿಸಿ, ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘವು (ಎಐಬಿಇಎ) ಜನವರಿ 8 ರಂದು ಮುಷ್ಕರ ನಡೆಸಲಿದೆ.[ಮೊಬೈಲ್ ಕರೆಗೆ ಓಗೊಟ್ಟು ಬ್ಯಾಂಕ್ ಮಾಹಿತಿ ಕೊಟ್ಟೀರಾ ಜೋಕೆ!]

protest-against-sbi-move-bank-employees-stage-protest

ತನ್ನ ಸೇವಾ ನಿಯಮಗಳಲ್ಲಿ ಮಾಡಿರುವ ಬದಲಾವಣೆಗಳನ್ನು ಸಹವರ್ತಿ ಬ್ಯಾಂಕ್‌ ಸಿಬ್ಬಂದಿ ಮೇಲೆ ಬಲವಂತದಿಂದ ಹೇರಲು ಹೊರಟಿದೆ ಎಂದು ‘ಎಐಬಿಇಎ' ಸಂಘಟನೆ ಆರೋಪ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರವಾಂಕೂರ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಮತ್ತು ಜೈಪುರಗಳನ್ನು ಎಸ್‌ಬಿಐನಿಂದ ಬೇರ್ಪಡಿಸಬೇಕು ಎನ್ನುವುದು ಇನ್ನೊಂದು ಬೇಡಿಕೆ.

ಇನ್ನು ಶನಿವಾರ ಮತ್ತು ಭಾನುವಾರ ಬ್ಯಾಂಕ್ ಗಳಿಗೆ ಎಂದಿನಂತೆ ರಜೆ. ಹಾಗಾಗಿ ಬ್ಯಾಂಕ್ ಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಸೋಮವಾರಕ್ಕೆ ಎತ್ತಿಟ್ಟುಕೊಳ್ಳಬೇಕಾಗುತ್ತದೆ.[ಪ್ರಕೃತಿ ಮುನಿಸಿಂದ ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು 5 ಉಪಾಯ]

2016 ಆರ್ಥಿಕ ಕುಸಿತದ ವರ್ಷವೇ?
2016ರಲ್ಲಿನ ಜಾಗತಿಕ ಆರ್ಥಿಕ ಪ್ರಗತಿಯನ್ನು ವಿಶ್ವಬ್ಯಾಂಕ್ ಕಡಿಮೆಗೊಳಿಸಿದೆ. ಚೀನಾ, ಬ್ರೆಜಿಲ್ ನಂಥ ದೇಶದಲ್ಲೇ ಆರ್ಥಿಕ ಪ್ರಗತಿ ಕುಸಿಯಲಿದೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೇ ಜನವರಿ ಆರಂಭದಿಂದಲೂ ಭಾರತದ ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲೇ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A section of bank employees, affiliated to All India Bank Employees Association (AIBEA), staged Protest Against SBI move. They claimed that State Bank of India had been trying to force ‘unfair' working conditions on the employees of its five subsidiary banks.
Please Wait while comments are loading...