ಇನ್ಫೋಸಿಸ್ ನ ಹೊಸ ಸಾರಥಿ ಸಲಿಲ್ ಪರೇಖ್ ಪರಿಚಯ

Subscribe to Oneindia Kannada

ಬೆಂಗಳೂರು, ಡಿಸೆಂಬರ್ 2: ಐಟಿ ದೈತ್ಯ ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಲಿಲ್ ಎಸ್ ಪರೇಖ್ ನೇಮಕವಾಗಿದ್ದಾರೆ. ಯಾರು ಈ ಸಲಿಲ್ ಪರೇಖ್? ವಿವಿರ ಇಲ್ಲಿದೆ...

ಪರೇಖ್ ಈ ಹಿಂದೆ ಕ್ಯಾಪ್ಜೆಮಿನಿ ಎಂಬ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. 25 ವರ್ಷಗಳ ದೀರ್ಘ ಅವಧಿಗೆ ಇದೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ ಹೆಗ್ಗಳಿಗೆ ಅವರದ್ದು. ಪರೇಖ್ ಇತ್ತೀಚಿನವರೆಗೂ ಕಂಪನಿಯ ಕಾರ್ಯನಿರ್ವಹಣಾ ಮಂಡಳಿ ಸದಸ್ಯರಾಗಿದ್ದರು. ಜತೆಗೆ ಕಂಪನಿಯ ಉತ್ತರ ಅಮೆರಿಕಾ ವಿಭಾಗದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಹಿನ್ನಲೆಯನ್ನು ಹೊಂದಿದ್ದಾರೆ.

Profile of Infosys' new CEO and MD Salil S Parekh

2000ನೇ ಇಸವಿಯಲ್ಲಿ ಸಲಿಲ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಕ್ಯಾಪ್ಜೆಮಿನಿ ಕಂಪನಿ ಖರೀದಿಸುವ ಮೂಲಕ ಅವರು ಈ ಕಂಪನಿಗೆ ಕಾಲಿಟ್ಟಿದ್ದರು. ಅಲ್ಲಿಂದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಉನ್ನತ ಹುದ್ದೆಗೇರಿದ್ದರು.

ಇನ್ಫೋಸಿಸ್ ನ ನೂತನ ಎಂಡಿ, ಸಿಇಒ ಆಗಿ ಸಲಿಲ್ ಪರೇಖ್‌ ನೇಮಕ

ಅಲ್ಲಿಂದ ಇದೀಗ ಅವರು ಇನ್ಫೋಸಿಸ್ ಗೆ ಬಂದಿದ್ದಾರೆ. ಇದೇ 2018ರ ಜನವರಿ 2ರಿಂದ ಅವರ ಇನ್ಫೋಸಿಸ್ ಸಂಸ್ಥೆಯ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.

ಪಾರೇಕ್ ಶೈಕ್ಷಣಿಕ ವಿಷಯಗಳಿಗೆ ಬರುವುದಾದರೆ, ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಇಂಜಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದಲ್ಲದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯಿಂದ ಏರೋನಾಟಿಕಲ್ ಎಂಜಿನಿಯರಿಂಗ್ ನಲ್ಲೂ ಪದವಿ ಗಳಿಸಿದ್ದಾರೆ.

ಸಲಿಲ್ ನೇಮಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್ ಮಂಡಳಿ ಅಧ್ಯಕ್ಷ ನಂದನ್ ನಿಲೇಕಣಿ, "ಸಿಇಒ ಮತ್ತು ಎಂಡಿಯಾಗಿ ಸಲಿಲ್ ರನ್ನು ಪಡೆದಿರುವುದಕ್ಕೆ ನಾವು ಸಂತೋಷ ಪಡುತ್ತೇವೆ. ಐಟಿ ಸೇವಾ ಕ್ಷೇತ್ರದಲ್ಲಿ ಸಲಿಲ್ ಮೂರು ದಶಕಗಳಿಗೂ ಹೆಚ್ಚಿನ ಜಾಗತಿಕ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಉದ್ಯಮದ ಪರಿವರ್ತನೆಯ ಸಮಯದಲ್ಲಿ ಕಂಪನಿಯನ್ನು ಮುನ್ನಡೆಸಲು ಸಲಿಲ್ ಸೂಕ್ತ ವ್ಯಕ್ತಿ ಎಂದು ಸಂಸ್ಥೆಯ ಮಂಡಳಿ ನಂಬಿದೆ," ಎಂದಿದ್ದಾರೆ.

"ಅತ್ಯುತ್ತಮ ಸಾಮರ್ಥ್ಯ ಇರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರು (ಸಲಿಲ್) ಮೊದಲ ಆಯ್ಕೆಯಾಗಿದ್ದರು. ಅವರ ಅತ್ಯುತ್ತಮ ಹಿನ್ನಲೆ ಮತ್ತು ವಿಸ್ತಾರವಾದ ಅನುಭವದ ಮೇಲೆ ಇನ್ಫೋಸಿಸ್ ಮುನ್ನಡೆಸಲು ಇವರು ಸೂಕ್ತ ವ್ಯಕ್ತಿ ಎಂದು ನಾವು ನಂಬಿದ್ದೇವೆ," ಎಂದು ಸಂಸ್ಥೆಯ ನಾಮಿನೇಷನ್ ಮತ್ತು ರೆನುಮರೇಷನ್ ಸಮಿತಿಯ ಅಧ್ಯಕ್ಷರಾಗಿರುವ ಕಿರಣ್ ಮಜುಂಮ್ದಾರ್ ಷಾ ಹೇಳಿದ್ದಾರೆ.

ಹೀಗೆ ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್ ಕಂಪನಿಯ ಮುಖ್ಯಸ್ಥರಾಗಿ ಸಲಿಲ್ ಪರೇಖ್ ನೇಮಕವಾಗಿದ್ದು ಅವರ ಅವಧಿಯಲ್ಲಿ ಕಂಪನಿ ಯಾವ ರೀತಿಯಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Board of Directors of Infosys on Saturday announced the appointment of Salil S Parekh as Chief Executive Officer and Managing Director, effective from January 2 next year. Here is Salil S Parekh’s profile.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ