ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಸ್ಟ್ ಆಫೀಸ್ MIS ಯೋಜನೆಯಲ್ಲಿ 3 ಜನ ಸೇರಿ ಜಂಟಿ ಖಾತೆ ತೆರೆಯಬಹುದು; ಇಲ್ಲಿದೆ ಮಾಹಿತಿ

|
Google Oneindia Kannada News

ನೀವು ಷೇರು ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯದ ನಡುವೆ ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸಿದ್ದರೆ ನಿಮಗೆ ಈ ಮಾರ್ಗಗಿಂತಲೂ ಇನ್ನೊಂದು ಉತ್ತಮ ಮಾರ್ಗ ಏನೆಂದರೆ, ಅದು ಅಂಚೆ ಕಚೇರಿಯ ಎಂಐಎಸ್‌ ಯೋಜನೆ. ಹೌದು, ನಿಮಗೆ ಈ ಪೋಸ್ಟ್ ಆಫೀಸ್‌ನ ಸೂಪರ್‌ಹಿಟ್ ಸ್ಕೀಮ್ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ಈ ಯೋಜನೆಯಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ನೀವು ಖಾತರಿಯ ಮಾಸಿಕ ಬಡ್ಡಿ ದರದ ಆದಾಯವನ್ನು ಕೂಡ ಪಡೆಯಬಹುದು.

ಈ ಯೋಜನೆಯಲ್ಲಿ ಉತ್ತಮ ಮಾಸಿಕ ಆದಾಯ ಕೂಡ ಸಿಗಲಿದೆ. ಒಂದೇ ಖಾತೆಯಲ್ಲಿ ಒಂದು ಕುಟುಂಬ ಸದಸ್ಯೆರು ಜಂಟಿ ಖಾತೆಯನ್ನೂ ಸಹ ನೀವು ತೆರೆಯಬಹುದು. ಅಂಚೆ ಕಚೇರಿಯ ಈ ಮಾಸಿಕ ಆದಾಯ ಯೋಜನೆಯು ಸೂಪರ್‌ ಹಿಟ್ ಸಣ್ಣ ಉಳಿತಾಯ ಯೋಜನೆಯಾಗಿದೆ.

ಇದರಲ್ಲಿ ನೀವು ಒಮ್ಮೆ ಮಾತ್ರ ಹೂಡಿಕೆ ಮಾಡಬೇಕು. ತಿಂಗಳ ಆದಾಯ ಯೋಜನೆಯಡಿಯಲ್ಲಿ ಬರುವ ಈ ಖಾತೆಯ ಮೆಚ್ಯೂರಿಟಿ ಅವಧಿಯು 5 ವರ್ಷಗಳು ಆಗಿರುತ್ತದೆ. ಈ ಯೋಜನೆಯನ್ನು ನೀವು ಪಡೆದರೆ, ನೀವು ಮಾಸಿಕ ಆದಾಯವನ್ನು ಪಡೆಯಲು ಪ್ರಾರಂಭಿಸುತ್ತೀರಿ ಹಾಗೂ ಈ ಯೋಜನೆಯನ್ನು ಅಂಚೆ ಕಚೇರಿಯಲ್ಲಿ ಮಾಸಿಕ ಆಧಾಯ ನೀಡುವ ಯೋಜನೆ ಎಂದು ಕರೆಯಲಾಗುತ್ತದೆ.

 ಎಂಐಎಸ್‌ ಖಾತೆಯ ಪ್ರಯೋಜನಗಳು

ಎಂಐಎಸ್‌ ಖಾತೆಯ ಪ್ರಯೋಜನಗಳು

ಪಿಒಎಂಐಎಸ್‌ (POMIS) ಎಂದರೆ ಫೋಸ್ಟ್‌ ಆಫೀಸ್ ತಿಂಗಳ ಆಧಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀವು ಏಕ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು. ಇದರಲ್ಲಿ ನೀವು ಕನಿಷ್ಟ 1,000 ರೂಪಾಯಿ ಹೂಡಿಕೆಯೊಂದಿಗೆ ಖಾತೆಯನ್ನು ತೆರೆಯಬಹುದು. ಒಂದು ಖಾತೆಯಲ್ಲಿ ನೀವು ಗರಿಷ್ಠ 4.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ಹೂಡಿಕೆ ಮಿತಿ 9 ಲಕ್ಷ ರೂ.ವರಿಗೂ ನೀವು ಹಣವನ್ನು ವಾರ್ಷಿಕವಾಗಿ ತುಂಬಬಹುದು.

 2 - 3 ಸದಸ್ಯರು ಏಕಕಾಲದಲ್ಲಿ ಜಂಟಿ ಖಾತೆಗೆ ಅವಕಾಶ

2 - 3 ಸದಸ್ಯರು ಏಕಕಾಲದಲ್ಲಿ ಜಂಟಿ ಖಾತೆಗೆ ಅವಕಾಶ

*ಎಂಐಎಸ್‌ (MIS) ಯೋಜನೆಯಲ್ಲಿ 2 ಅಥವಾ 3 ಜನ ಸದಸ್ಯರು ಏಕಕಾಲದಲ್ಲಿ ಜಂಟಿ ಖಾತೆಯನ್ನು ತೆರೆಯಬಹುದು.
*ಈ ಖಾತೆಗೆ ಬದಲಾಗಿ ಪಡೆದ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೆ ಸಮಾನವಾಗಿ ನೀಡಲಾಗುತ್ತದೆ.
*ನೀವು ಯಾವುದೇ ಸಮಯದಲ್ಲಿ ಜಂಟಿ ಖಾತೆಯನ್ನು ಒಂದೇ ಖಾತೆಗೆ ಪರಿವರ್ತಿಸಬಹುದು.
*ಒಂದೇ ಖಾತೆಯನ್ನು ಜಂಟಿ ಖಾತೆಯಾಗಿ ಪರಿವರ್ತಿಸಬಹುದು.
*ಖಾತೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಖಾತೆಯ ಎಲ್ಲಾ ಸದಸ್ಯರ ಜಂಟಿ ಅರ್ಜಿಯನ್ನು ಮಾಡಬೇಕು.
*ಯಾವುದೇ ಭಾರತೀಯ ನಾಗರಿಕರು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
*ಇಂಡಿಯಾ ಪೋಸ್ಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮಾಸಿಕ ಆದಾಯ ಯೋಜನೆಯು ವಾರ್ಷಿಕವಾಗಿ 6.6% ಬಡ್ಡಿಯನ್ನು ನೀಡಲಾಗುತ್ತಿದೆ. ಈ ಬಡ್ಡಿ ದರವನ್ನು ಇದನ್ನು ಪ್ರತಿ ತಿಂಗಳು ಪಾವತಿಸಲಾಗುತ್ತದೆ.

 MISನ ವಿಶೇಷತೆ ಏನು?

MISನ ವಿಶೇಷತೆ ಏನು?

ಪೋಸ್ಟ್ ಆಫೀಸ್ MISನ ಮುಕ್ತಾಯ ಅವಧಿಯು ಐದು ವರ್ಷಗಳು. ನೀವು ಬಯಸಿದರೆ, ಅದನ್ನು ಸಮಯಕ್ಕಿಂತ ಮುಂಚಿತವಾಗಿ ಮುಚ್ಚಬಹುದು. ಆದರೆ ಹೂಡಿಕೆಯ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಮಾತ್ರ ನೀವು ಹಣವನ್ನು ಹಿಂಪಡೆಯಬಹುದು. ನೀವು 1 ವರ್ಷದಿಂದ 3 ವರ್ಷಗಳ ನಡುವೆ ಹಣವನ್ನು ಹಿಂಪಡೆದರೆ, ನಂತರ ಠೇವಣಿ ಮೊತ್ತದ 2% ಮರುಪಾವತಿಸಲಾಗುತ್ತದೆ.

ಅಂಚೆ ಕಛೇರಿಯ ಈ ಯೋಜನೆಯು ಬಹಳ ವಿಶೇಷವಾಗಿದೆ, ಏಕೆಂದರೆ MIS ಖಾತೆಯನ್ನು ಒಂದು ಅಂಚೆ ಕಛೇರಿಯಿಂದ ಇನ್ನೊಂದು ಅಂಚೆ ಕಛೇರಿಗೆ ವರ್ಗಾಯಿಸಬಹುದು.
ಈ ಯೋಜನೆಯ ಮೆಚ್ಯೂರಿಟಿ ಅಂದರೆ ಐದು ವರ್ಷಗಳು ಪೂರ್ಣಗೊಂಡ ನಂತರ, ಅದನ್ನು ಇನ್ನೂ 5-5 ವರ್ಷಗಳವರೆಗೆ ವಿಸ್ತರಿಸಬಹುದು. MIS ಖಾತೆಯಲ್ಲಿ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ. ಈ ಯೋಜನೆಯ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ.

 ಪಿಒಎಂಐಎಸ್‌(POMIS) ಖಾತೆ ತೆರೆಯುವುದು ಹೇಗೆ?

ಪಿಒಎಂಐಎಸ್‌(POMIS) ಖಾತೆ ತೆರೆಯುವುದು ಹೇಗೆ?

*ನೀವು ಅಂಚೆ ಕಛೇರಿಯ MIS ಖಾತೆಯನ್ನು ತೆರೆಯಲು ಬಯಸಿದರೆ, ಇದಕ್ಕಾಗಿ ನೀವು ಅಂಚೆ ಕಛೇರಿಯಲ್ಲಿ ಅಂದರೆ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.
*ಅಗತ್ಯವಿರುವ ದಾಖಲೆಗಳಲ್ಲಿ ಅಂದರೆ ಐಡಿ ಪುರಾವೆಯಾಗಿ, ನೀವು ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ಮತದಾರರ ಐಡಿ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ಹೊಂದಿರಬೇಕು.
*ನೀವು 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಹ ಒದಗಿಸಬೇಕಾಗುತ್ತದೆ.
*ವಿಳಾಸ ಪುರಾವೆಗಾಗಿ ಸರ್ಕಾರ ನೀಡಿದ ಗುರುತಿನ ಚೀಟಿ ಅಥವಾ ಯುಟಿಲಿಟಿ ಬಿಲ್ ಮಾನ್ಯವಾಗಿರುತ್ತದೆ.
*ಈ ಎಲ್ಲಾ ದಾಖಲೆಗಳೊಂದಿಗೆ, ನೀವು ಪೋಸ್ಟ್ ಆಫೀಸ್‌ಗೆ ಹೋಗಿ ಮತ್ತು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಫಾರ್ಮ್ ಭರ್ತಿ ಮಾಡಬೇಕು.
*ನೀವು ಬಯಸಿದರೆ ನೀವು ಅದನ್ನು ಆನ್‌ಲೈನ್‌ನಲ್ಲಿ ಸಹ ಡೌನ್‌ಲೋಡ್ ಮಾಡಬಹುದು.
*ಫಾರ್ಮ್‌ನ್ನು ಭರ್ತಿ ಮಾಡುವುದರ ಜೊತೆಗೆ, ಅದರಲ್ಲಿ ನಿಮ್ಮ ನಾಮಿನಿಯ ಹೆಸರನ್ನು ಸಹ ನೀವು ನೀಡಬೇಕು.
*ಈ ಖಾತೆಯನ್ನು ತೆರೆಯಲು ಆರಂಭದಲ್ಲಿ 1,000 ರೂ.ಗಳನ್ನು ನಗದು ಅಥವಾ ಚೆಕ್ ಮೂಲಕ ಠೇವಣಿ ಮಾಡಬೇಕಾಗುತ್ತದೆ.

English summary
Post Office MIS: Post Office Monthly Income Scheme: Interest rate, other details you should know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X