ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಸೇರಿ ಕ್ರಿಪ್ಟೋಕರೆನ್ಸಿ ಮೌಲ್ಯ ಕುಸಿತ

|
Google Oneindia Kannada News

ಬೆಂಗಳೂರು, ಮೇ 20: ಕೊರೊನಾ ಸಂಕಷ್ಟದ ಕಾಲದಲ್ಲಿ ಡಿಜಿಟಲ್ ದುಡ್ಡಿನ ಮೇಲೆ ಹೂಡಿಕೆ ಮಾಡಲು ಅನೇಕ ಉದ್ಯಮಿಗಳು ಮುಂದಾಗಿದ್ದರು. ಆದರೆ, ಇತ್ತೀಚೆಗೆ ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಸೇರಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಸತತ ಕುಸಿತಗೊಂಡಿದ್ದು, ಹೂಡಿಕೆದಾರರು ಒಂದು ಹೆಜ್ಜೆ ಹಿಂದೆ ಇಡುವಂತೆ ಮಾಡಿದೆ.

ಉದ್ಯಮಿ ಇಲಾನ್ ಮಾಸ್ಕ್ ಹೇಳಿಕೆ ಬೆನ್ನಲ್ಲೇ ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಚೀನಾದಲ್ಲಿ ವಿಧಿಸಲಾಗಿರುವ ನಿರ್ಬಂಧದಿಂದಾಗಿ ಕಳೆದ ಎರಡು ದಿನಗಳಿಂದ ಬಿಟ್ ಕಾಯಿನ್, ಇಥೆರಿಯಂ, ಡೊಜ್ ಕಾಯಿನ್ ಮೌಲ್ಯ ಕುಸಿತ ಕಂಡಿದೆ.

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆಯಾಗಿ ಬಹುಕಾಲವಾಗಿದೆ. ಬಿಟ್ ಕಾಯಿನ್ ಈ ಹಿಂದಿನ $61,222 ಮೌಲ್ಯ ದಾಖಲೆ ಮುರಿದು ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು.

Popular cryptocurrencies Bitcoin, Etherium Market cap dropped

ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಒಟ್ಟಾರೆ ಈ ಸಮಯಕ್ಕೆ ಕುಸಿತ ಕಂಡು 1,705,633,229,091 ಟ್ರಿಲಿಯನ್ ಡಾಲರ್ ಆಗಿದೆ. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ.

ಮೇ 20ರಂದು ಈ ಸಮಯ(11:32)ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $39,512.13
ಒಟ್ಟಾರೆ ಮಾರುಕಟ್ಟೆ ಮೌಲ್ಯ: $747,805,127,556
ಒಂದು ಬಿಟ್ ಕಾಯಿನ್ ಬೆಲೆ = 29,05,263.89
(1 USD=73.14 ರುಪಾಯಿ)

ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 0.19ರಷ್ಟು ಕುಸಿತ ಕಂಡಿದೆ. ಈ ವಾರ ಶೇ 22.76ರಷ್ಟು ಇಳಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 11.87ರಷ್ಟು ಕುಸಿತ ಕಂಡು 2,622.16ಡಾಲರ್ ಮೌಲ್ಯ ಪಡೆದಿದೆ. ಈ ವಾರದಲ್ಲಿ 34.54% ಇಳಿಕೆಯಾಗಿ ಒಟ್ಟಾರೆ $307,775,268,364 ಮೌಲ್ಯ ಹೊಂದಿದೆ.

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
News agency Reuters reported that Bitcoin fell to a 3-1/2 month low on Wednesday after China banned financial payment institutions from providing cryptocurrency services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X