ನೀರವ್ ಮೋದಿಗೆ ಸೇರಿರುವ 9 ಐಷಾರಾಮಿ ಕಾರುಗಳು ಜಪ್ತಿ

ನವದೆಹಲಿ, ಫೆಬ್ರವರಿ 22: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸಾವಿರಾರು ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರಿಗೆ ಮತ್ತೆ ಆಘಾತ ಎದುರಾಗಿದೆ.

ನೀರವ್ ಅವರಿಗೆ ಸೇರಿದ ಕೋಟ್ಯಂತರ ರುಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೀರವ್ ಮೋದಿ ಮತ್ತು ಅವರ ಕಂಪನಿಗಳಿಗೆ ಸೇರಿದ 9 ಐಷಾರಾಮಿ ಕಾರುಗಳನ್ನು ಇಡಿ ವಶಪಡಿಸಿಕೊಂಡಿದೆ.

PNB scam: ED seizes shares, 9 luxury cars of Nirav Modi

ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡ ಕಾರುಗಳ ಪೈಕಿ, 1 ರೋಲ್ಸ್​ ರಾಯ್ಸ್​ ಘೋಸ್ಟ್​, 1 ಪೋರ್ಶೆ ಪನಮೆರಾ, 2 ಮರ್ಸಿಡಿಸ್​ ಬೆನ್ಜ್​ ಜಿಎಲ್ 350 ಸಿಡಿಐಎಸ್​, 3 ಹೋಂಡಾ ಕಾರುಗಳು, 1 ಟೊಯೋಟಾ ಫಾರ್ಚುನರ್​ ಮತ್ತು 1 ಟೊಯೋಟಾ ಇನ್ನೋವಾ ಕಾರಗಳಿವೆ.

ಇದಲ್ಲದೆ, ನೀರವ್​ ಮೋದಿಗೆ ಸೇರಿರುವ 7.8 ಕೋಟಿ ರೂ. ಮೌಲ್ಯದ ಮ್ಯೂಚುವಲ್​ ಫಂಡ್ಸ್​ ಮತ್ತು ಷೇರುಗಳನ್ನು ವಶಕ್ಕೆ ಪಡೆಯಲಾಗಿದೆ. ನೀರವ್​ ಮೋದಿ ಅವರ ಮಾವ ಮೆಹುಲ್​ ಚೋಕ್ಸಿಗೆ ಸೇರಿದ 86.72 ಕೋಟಿ ರೂ. ಮೌಲ್ಯದ ಷೇರುಗಳನ್ನೂ ವಶಕ್ಕೆ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+