ನೀರವ್ ಮೋದಿಗೆ ಸೇರಿದ 523 ಕೋಟಿ ಆಸ್ತಿ ಜಪ್ತಿ, ಕೌಂಟಿಂಗ್

ಬೆಂಗಳೂರು, ಫೆಬ್ರವರಿ 24: ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಬಹು ಕೋಟಿ ವಂಚನೆ ಪ್ರಕರಣದ ಆರೋಪಿ, ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ ನೀರವ್ ಮೋದಿ (47) ಅವರ ಆಸ್ತಿ ಬಗೆದಷ್ಟು ಸಿಗುತ್ತಲೇ ಇದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿಗೆ ಸೇರಿರುವ 523 ಕೋಟಿ ರು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಹಣಕಾಸು ಚಟುವಟಿಕೆ ತಡೆ ಕಾಯ್ದೆ(PMLA) ಅನ್ವಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಸಿಗುತ್ತಿದ್ದಂತೆ, 'ನೀರವ್ ಮೋದಿ ಮತ್ತು ಅವರ ಒಡೆತನದ ಕಂಪೆನಿಗೆ ಸೇರಿದ, 523.72 ಕೋಟಿ ರು ಮೌಲ್ಯದ 21 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

PNB scam: ED attaches Nirav Modi's immovable assets worth Rs 523 crore

ನೀರವ್‌ ಗೆ ಸೇರಿದ 81.16 ಕೋಟಿ ರು ಮೌಲ್ಯದ ಭವ್ಯವಾದ ಬಂಗಲೆ ಮತ್ತು ಮುಂಬೈನ ವರ್ಲಿ ಪ್ರದೇಶದಲ್ಲಿರುವ 15.45 ಕೋಟಿ ಮೌಲ್ಯದ 'ಸಮುದ್ರ ಮಹಲ್' ಅಪಾರ್ಟ್‌ಮೆಂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪೈಕಿ 6 ವಸತಿ ಕಟ್ಟಡಗಳು, 10 ಕಚೇರಿಗಳು, ಪುಣೆಯಲ್ಲಿನ ಎರಡು ಫ್ಲ್ಯಾಟ್‌ಗಳು, ಒಂದು ಸೌರವಿದ್ಯುತ್ ಘಟಕ, ಅಲಿಬಾಗ್‌ನ ಫಾರ್ಮ್‌ಹೌಸ್ ಮತ್ತು ಅಹಮದಾನಗರ್ ಜಿಲ್ಲೆಯ ಕರ್‌ಜತ್‌ನಲ್ಲಿರುವ 135 ಎಕರೆ ಭೂಮಿ ಸೇರಿದೆ' ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಇದಲ್ಲದೆ, ಗೀತಾಂಜಲಿ ಗ್ರೂಪ್‌ ಉದ್ಯಮಿ ಮೆಹುಲ್‌ ಚೋಕ್ಸಿ ಮತ್ತು ನೀರವ್ ಮೋದಿಗೆ ಸಂಬಂಧಿಸಿದ 100 ಕೋಟಿ ರು ಮೌಲ್ಯದ ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಾರತದಿಂದ ಪರಾರಿಯಾಗಿರುವ ನೀರವ್ ಅವರು ಯುಎಸ್ ನಲ್ಲಿರುವ ಶಂಕೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+