ಮುದ್ರಾ ಬ್ಯಾಂಕ್ ಬಂತು, ಸಾಲದ ತಲೆಬಿಸಿ ಹೋಯ್ತು
ನವದೆಹಲಿ , ಏ. 8 : ಸಾಲ ಸಿಗದೆ ಪರದಾಡುತ್ತಿದ್ದ ಸಣ್ಣ ಉದ್ದಿಮೆಗಳಿಗೆ ಸಿಹಿಸುದ್ದಿಯಿದೆ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆಗಳ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಬ್ಯಾಂಕ್ ವೊಂದನ್ನು ಆರಂಭಿಸಿದೆ.
ಬುಧವಾರ ಬೆಳಗ್ಗೆ ನವದೆಹಲಿಯಲ್ಲಿ 'ಮೈಕ್ರೋ ಯುನಿಟ್ಸ್ ಡೆವಲಪ್ವೆುಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ' ಅಥವಾ 'ಮುದ್ರಾ' ಬ್ಯಾಂಕ್ಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಇಲ್ಲದ ಸಣ್ಣ ಉದ್ಯಮಿಗಳಿಗೆ ನೆರವು ನೀಡುವ ಗುರಿ ಮುದ್ರಾ ಬ್ಯಾಂಕ್ ಮೇಲಿದೆ ಎಂದು ಹೇಳಿದರು.[ಪಡಿತರ ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ]

ದೊಡ್ಡ ಕೈಗಾರಿಕೆಗಳು 1.25 ಕೋಟಿ ಜನರಿಗೆ ಉದ್ಯೋಗ ನೀಡಿದರೆ ಸಣ್ಣ ಉದ್ಯಮಿಗಳು ಅಥವಾ ಉದ್ದಿಮೆಗಳು ಸುಮಾರು 12 ಕೋಟಿ ಜನರಿಗೆ ಕೆಲಸ ಒದಗಿಸುವ ಸಾಮರ್ಥ್ಯ ಹೊಂದಿವೆ ಸಣ್ಣ ಉದ್ದಿಮೆಗಳೇ ದೇಶದ ಜೀವನಾಡಿ ಅವುಗಳಿಗೆ ಎಲ್ಲ ರೀತಿಯ ನೆರವು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ 'ಮುದ್ರಾ' ಬ್ಯಾಂಕ್ ಆರಂಭಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಅಕಾಲಿಕ ಮಳೆ ಮತ್ತು ಇನ್ನಿತರ ನೈಸರ್ಗಿಕ ವಿಕೋಪದಿಂದ ಬೆಳೆ ಕಳೆದುಕೊಂಡ ರೈತರಿಗೆ ಸಾಲ ಹೊಂದಾಣಿಕೆ ಮಾಡಲು ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ. ವಿಮಾ ಕಂಪನಿಗಳಿಗೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.[ಸಿಲಿಂಡರ್ ಸಬ್ಸಿಡಿ ತಿರಸ್ಕರಿಸಲು ಏನು ಮಾಡಬೇಕು?]
ಏನಿದು ಮುದ್ರಾ ಬ್ಯಾಂಕ್?
ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ನಿರ್ಮಾಣವಾಗಿರುವ ಬ್ಯಾಂಕ್ 10 ಲಕ್ಷ ರೂಪಾಯಿಗಳವರೆಗೆ ಸಾಲ ಒದಗಿಸಲಿದೆ. ಸಣ್ಣ-ಪುಟ್ಟ ಹಣಕಾಸು ಸಂಸ್ಥೆಗಳ ನಿಯಂತ್ರಕ ಸಂಸ್ಥೆಯಾಗಿಯೂ ಇದು ಕಾರ್ಯನಿರ್ವಹಿಸಲಿದೆ.[ಬೆಂಗಳೂರು ಸಮಾವೇಶದಲ್ಲಿ ಮೋದಿ ಹೇಳಿದ್ದೇನು]
ಹಣಕಾಸು ನೆರವು ನೀಡುವುದಕ್ಕೆ ವಿವಿಧ ಹೆಸರುಗಳನ್ನು ಕೊಡಮಾಡಲಾಗಿದ್ದು 'ಶಿಶು', 'ಕಿಶೋರ' ಮತ್ತು 'ತರುಣ' ಎಂಬ ಹೆಸರಿನಲ್ಲಿ ಸಾಲ ಒದಗಿಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಅಲ್ಲದೇ ಪ್ರಧಾನ ಮಂತ್ರಿ ಜನಧನ ಯೋಜನೆಗೆ ಪೂರಕವಾಗಿಯೂ ಬ್ಯಾಂಕ್ ಕೆಲಸ ಮಾಡಲಿದೆ.
At the launch of the MUDRA Bank. Watch LIVE. http://t.co/vnR2RuaZxe pic.twitter.com/fxtQWVgJhf
— Narendra Modi (@narendramodi) April 8, 2015 











Click it and Unblock the Notifications