ಮೋದಿಯಿಂದ ಮೇಕ್ ಇನ್ ಇಂಡಿಯಾ ಅಭಿಯಾನ

ನವದೆಹಲಿ, ಸೆ.19: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಪ್ರಚಾರ 25ರಿಂದ ಪ್ರಾರಂಭಿಸಲಿದ್ದಾರೆ. ನವದೆಹಲಿಯಲ್ಲಿ ಜಾಗತಿಕ ಮತ್ತು ಸ್ಥಳೀಯ ಉದ್ಯಮಿಗಳ ಬೃಹತ್ ಸಮಾವೇಶ ನಡೆಸುವ ಮೂಲಕ ಮೇಕ್ ಇನ್ ಇಂಡಿಯಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ದಿನದಂದು ಮೋದಿ ಅವರು ಕೆಂಪುಕೋಟೆ ಮುಂದೆ ನಿಂತು ಭಾಷಣ ಮಾಡುತ್ತಾ' ಮೇಕ್ ಇನ್ ಇಂಡಿಯಾ' ಅಭಿಯಾನದ ಬಗ್ಗೆ ಹೇಳಿದ್ದರು.

ಅಮೆರಿಕ, ಜಪಾನ್, ಕೊರಿಯಾ, ಸ್ವೀಡನ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಚೀನಾ, ಇಟಲಿ, ಜರ್ಮನಿ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳ ವಾಣಿಜ್ಯ ಉದ್ಯಮಿಗಳು ಮತ್ತು ಭಾರತದ ಖ್ಯಾತ ಉದ್ಯಮಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆಂದು ಕೇಂದ್ರದ ಇಂಥನ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

PM Modi to Launch 'Make in India' Campaign; Several Global Companies to Attend

ಈ ಸಂದರ್ಭದಲ್ಲಿ ಮೋದಿ ದೇಶದ ವಿವಿಧೆಡೆ ಉತ್ಪಾದನಾ ವಲಯಗಳಿಗೆ ಪ್ರೋತ್ಸಾಹ ನೀಡುವ ಘಟಕಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಐತಿಹಾಸಿಕ ಕೆಂಪುಕೋಟೆ ಮೇಲೆ ಭಾಷಣ ಮಾಡುವ ಸಂದರ್ಭದಲ್ಲಿ ಪ್ರಧಾನಿ ಮೇಕ್ ಇನ್ ಇಂಡಿಯಾಕ್ಕೆ ಒತ್ತುಕೊಟ್ಟಿದ್ದರು. ದೇಶದ ಯುವ ಜನತೆಗೆ ಈ ಅಭಿಯಾನ ನೆರವಾಗಲಿದೆ. ಯುವ ಇಂಜಿನಿಯರ್ ಗಳು ದೇಶದ ಉತ್ಪಾದನಾ ಕ್ಷೇತ್ರಕ್ಕೆ ಬೆನ್ನಲುಬಾಗಿ ನಿಲ್ಲಬೇಕಿದೆ ಎಂದಿದ್ದರು.[ಪ್ರಧಾನಿ ಮೋದಿ ಭಾಷಣ ಸಾರಾಂಶ]

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ (ಭಾರತದಲ್ಲೇ ಉತ್ಪಾದಿಸುವುದು ಮತ್ತು ಭಾರತದಲ್ಲೇ ತಯಾರಿಸುವುದು) ಪ್ರತಿಯೊಬ್ಬರ ಗುರಿಯಾಗಿರಬೇಕು ಎಂದು ಕರೆ ನೀಡಿದ್ದರು. ದೆಹಲಿ ನಂತರ ಪ್ರಧಾನಿ ಮುಂದಿನ ದಿನಗಳಲ್ಲಿ ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಲ್ಲೂ ಇದರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ಭಾಷಣ ಮಾಡುವ ವೇಳೆ ಇದು ನೇರ ದೇಶ-ವಿದೇಶಗಳಲ್ಲಿ ನೇರ ಪ್ರಸಾರವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+