ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ದಿನಕ್ಕೂ ಮುನ್ನ ಪೆಟ್ರೋಲ್, ಡೀಸೆಲ್ ದರ

|
Google Oneindia Kannada News

ನವದೆಹಲಿ, ಜನವರಿ 31: ಪೆಟ್ರೋಲ್, ಡೀಸೆಲ್ ದರ ದಾಖಲೆಯ ಏರಿಕೆ ಕಂಡ ಬಳಿಕ ಕಳೆದ ನಾಲ್ಕು ದಿನಗಳಿಂದ ಪ್ರಮುಖ ನಗರಗಳಲ್ಲಿ ಸ್ಥಿರತೆ ಕಂಡಿದೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮುನ್ನಾದಿನವಾದ ಭಾನುವಾರದಂದು ಇಂಧನ ಬೆಲೆ ಸ್ಥಿರತೆ ಕಂಡುಕೊಂಡಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ 86.30 ರು ನಷ್ಟಿದೆ. ಮಂಬೈ, ಚೆನ್ನೈ ಹಾಗೂ ಕೋಲ್ಕತಾಗಳಲ್ಲಿ ಕ್ರಮವಾಗಿ 92.86 ರು, 88.82 ರು ಹಾಗೂ 87.69 ರು ನಷ್ಟಿವೆ.

ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ

ಇದೇ ವೇಳೆ ಡೀಸೆಲ್ ಬೆಲೆ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತಾದಲ್ಲಿ ಕ್ರಮವಾಗಿ 76.48 ರು, 83.30 ರು, 81.71 ರು ಹಾಗೂ 80.08 ರು ಆಗಿದೆ.

2018ರಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 84ರು ಮುಟ್ಟಿತ್ತು. ಇದೇ ರೀತಿ ಡೀಸೆಲ್ ಕೂಡಾ 75.45 ರು ದಾಟಿದ್ದೇ ದಾಖಲೆಯಾಗಿತ್ತು. ಇದರ ಬೆನ್ನಲ್ಲೇ ಮುಂಬೈ ಸೇರಿದಂತೆ ಕೆಲ ಮೆಟ್ರೋಗಳಲ್ಲಿ 100 ರು ಗಡಿ ದಾಟಿತ್ತು. ರಾಜಸ್ಥಾನದಲ್ಲಿ 100 ಗಡಿ ದಾಟುತ್ತಿದ್ದಂತೆ ಅಲ್ಲಿನ ಸರ್ಕಾರ ವ್ಯಾಟ್ ದರ ಇಳಿಕೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಜಾಗತಿಕವಾಗಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 52.14 ಯುಎಸ್ ಡಾಲರ್ ನಷ್ಟಾಗಿದೆ.

 ಬಜೆಟ್ ಪರಿಣಾಮ ಇಂಧನ ದರದಲ್ಲಿ ಸ್ಥಿರತೆ

ಬಜೆಟ್ ಪರಿಣಾಮ ಇಂಧನ ದರದಲ್ಲಿ ಸ್ಥಿರತೆ

ಬಜೆಟ್ 2021ರಲ್ಲಿ ಇಂಧನಗಳ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿದರೆ ಮುಂದೇನು ಮಾಡುವುದು ಎಂಬ ಚಿಂತೆಗೆ ಬಿದ್ದಿರುವ ತೈಲ ಸಂಸ್ಥೆಗಳು, ರೀಟೇಲ್ ತೈಲ ಬೆಲೆ ತ್ವರಿತ ಗತಿಯಲ್ಲಿ ಏರಿಕೆಯಾಗುವುದನ್ನು ತಡೆಯಲು ಹೆಚ್ಚು ದಾಸ್ತಾನು ಮಾಡಲಾಗಿದೆ ಎಂಬ ಸುದ್ದಿಯಿದೆ. ಜಾಗತಿಕವಾಗಿ ಆರ್ಥಿಕ ಸುಧಾರಣೆ, ಕೊರೊನಾ ಲಸಿಕೆ ವಿತರಣೆ ವೇಗ ಪಡೆದುಕೊಂಡಿರುವುದು, ಯುಎಸ್ ಆಡಳಿತದಲ್ಲಿನ ಬದಲಾವಣೆಗಳು ತೈಲ ಬೆಲೆ ಮೇಲೆ ಪರಿಣಾಮ ಬೀರಿವೆ.

 ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ದೇಶದಲ್ಲಿ ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

 ಅಬಕಾರಿ ಸುಂಕ ಏರಿಕೆ ಬಿಸಿ

ಅಬಕಾರಿ ಸುಂಕ ಏರಿಕೆ ಬಿಸಿ

ಮಾರ್ಚ್ 2020ರಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 13ರು ಹಾಗೂ ಡೀಸೆಲ್ 15 ರು ಏರಿಕೆಗೆ ಕೇಂದ್ರ ಸರ್ಕಾರ ಕಾರಣವಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1.6 ಲಕ್ಷ ಕೋಟಿ ರು ಸಂಗ್ರಹವಾಗಿತ್ತು. ಈಗ ಮತ್ತೊಮ್ಮೆ ಸುಂಕ ಏರಿಕೆ ಮಾಡುವ ಸಾಧ್ಯತೆಯಿಲ್ಲ ಆದರೆ ರಾಜ್ಯಗಳು ಸೆಸ್ ಕಡಿಮೆ ಮಾಡದಿದ್ದರೆ ಅಬಕಾರಿ ಸುಂಕ ಇಳಿಕೆ ಮಾಡುವ ಒತ್ತಡಕ್ಕೆ ಕೇಂದ್ರ ಸರ್ಕಾರ ಬೀಳಲಿದೆ. ಬಜೆಟ್ ನಲ್ಲಿ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಆರ್ಥಿಕ ಸುಧಾರಣೆ ಹಾಗೂ ಅನುದಾನ ನಿರೀಕ್ಷಿಸಲಾಗಿದೆ.

 ಇಂಧನ ದರ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ

ಇಂಧನ ದರ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ

ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ ಮೇ 2020ರಿಂದ ಇಲ್ಲಿ ತನಕ ಪೆಟ್ರೋಲ್ ಬೆಲೆ 14. 28 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11.83 ರು ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ. ಆದರೆ, ಈಗ ಸುಂಕ ಇಳಿಸುವಂತೆ ವಾಹನ ಸವಾರರು, ವಿಪಕ್ಷಗಳಿಂದ ಸತತವಾಗಿ ಆಗ್ರಹಿಸುತ್ತಿದ್ದು ಇಂಧನ ಇಲಾಖೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ. ಇಂಧನ ದರದಲ್ಲಿ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಬಜೆಟ್ ನಂತರ ಘೋಷಣೆಯಾಗಬಹುದು.

 ಭಾನುವಾರ (ಜನವರಿ 31)ದ ದರ

ಭಾನುವಾರ (ಜನವರಿ 31)ದ ದರ

ನಗರ-ಪೆಟ್ರೋಲ್-ಡೀಸೆಲ್
* ನವದೆಹಲಿ: ಪೆಟ್ರೋಲ್: 86.30 ರು ಡಿಸೇಲ್: 76.48ರು
* ಮುಂಬೈ: ಪೆಟ್ರೋಲ್: 92.86 ರು ಡಿಸೇಲ್: 83.30ರು
* ಚೆನ್ನೈ: ಪೆಟ್ರೋಲ್: 88.82ರು ಡಿಸೇಲ್: 81.71ರು
* ಕೋಲ್ಕತಾ: ಪೆಟ್ರೋಲ್: 87.69 ರು ಡಿಸೇಲ್: 80.08 ರು
* ಬೆಂಗಳೂರು: ಪೆಟ್ರೋಲ್: 89.21ರು ಡಿಸೇಲ್: 81.10ರು (27ಪೈಸೆ ಏರಿಕೆ)

ದೇಶದ ಇತರೆ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ದರ ತಿಳಿಯಲು ಲಿಂಕ್ ಕ್ಲಿಕ್ ಮಾಡಿ

English summary
Prices of petrol and diesel unchanged on Jan 31 ahead of Budget day (Feb 1) across major metros.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X