ಸತತ ಮೂರನೇ ದಿನ ಪೆಟ್ರೋಲ್ ಬೆಲೆ ಮತ್ತೆ ಏರಿಕೆ

ನವದೆಹಲಿ, ಆ. 18: ಸುಮಾರು 47 ದಿನಗಳ ಬಳಿಕ ಪೆಟ್ರೋಲ್ ದರ ಏರಿಕೆ ಮಾಡಲಾಗಿತ್ತು. ಭಾನುವಾರದಿಂದ ಮೊದಲುಗೊಂಡು ಮತ್ತೆ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಸತತ ಮೂರನೇ ದಿನ ಏರಿಕೆಯಾಗಿದೆ. ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ

Recommended Video

      Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

      ದೆಹಲಿಯಲ್ಲಿ ಭಾನುವಾರದಂದು 14 ಪೈಸೆ ಏರಿಕೆ ಕಂಡ ಪೆಟ್ರೋಲ್ ಪ್ರತಿ ಲೀಟರ್ 80.57 ರು ನಷ್ಟಿತ್ತು. ಸೋಮವಾರ 80.73ರು ಆಗಿತ್ತು. ಈಗ 17ಪೈಸೆ ಏರಿಕೆ ಕಂಡು 80.90ರು ಆಗಿದೆ. ಜೂನ್ 29ರಿಂದ 80. 43 ಬೆಲೆ ಇತ್ತು. ಆದರೆ, ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.

      ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 45 ಯುಎಸ್ ಡಾಲರ್ ನಷ್ಟಿತ್ತು.

      Petrol Prices Hiked For Third Consecutive Day on August 18

      ಬೆಲೆ ಏರಿಕೆಗೂ ಮುನ್ನ ಮುಂಬೈನಲ್ಲಿ ಪೆಟ್ರೋಲ್ ದರ 87.31ರು, ಚೆನ್ನೈ-83.75 ರು ಹಾಗೂ ಕೋಲ್ಕತಾದಲ್ಲಿ 82.17 ಪ್ರತಿ ಲೀಟರ್ ನಷ್ಟು ಬೆಲೆ ಇತ್ತು.

      ಮಂಗಳವಾರದಂದು ಮುಂಬೈನಲ್ಲಿ ಪೆಟ್ರೋಲ್ 13 ಪೈಸೆ ಏರಿಕೆ ಕಂಡು ಪ್ರತಿ ಲೀಟರ್ 87. 58 ರು ಆಗಿದೆ. ಕೋಲ್ಕತಾದಲ್ಲೂ 13 ಪೈಸೆ ಏರಿಕೆ ಕಂಡು 82.43 ರು ನಷ್ಟಿದೆ. ಚೆನ್ನೈನಲ್ಲಿ 12 ಪೈಸೆ ಏರಿಕೆ ಕಂಡು 83.99 ರು ನಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 14 ಪೈಸೆ ಏರಿಕೆ ಕಂಡು ಪ್ರತಿ ಲೀಟರ್ ಬೆಲೆ 83.52 ರು ನಷ್ಟಿದೆ.

      ಕಳೆದ 16 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. ಪ್ರತಿ ಲೀಟರ್ ಗೆ 73.56 ರು ನಷ್ಟೇ ಇದೆ. ಜುಲೈ 31ರಂದು 8 ರು ಕುಸಿತ ಕಂಡಿತ್ತು. ಕೇಜ್ರಿವಾಲ್ ಸರ್ಕಾರ ವ್ಯಾಟ್ ಇಳಿಸಿದ್ದರ ಪರಿಣಾಮವಿದು. ಉಳಿದಂತೆ ಮುಂಬೈ, ಚೆನ್ನೈ ಹಾಗೂ ಕೋಲ್ಕತಾದಲ್ಲಿ ಕ್ರಮವಾಗಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 80.11ರು, 78.86 ರು ಹಾಗೂ 77.06 ರು ನಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ 77. 88 ರು ನಷ್ಟಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+