ಪೆಟ್ರೋಲ್ ದರ 15 ಪೈಸೆ ಇಳಿಕೆ, ಯಾವ ನಗರದಲ್ಲಿ ಎಷ್ಟು ದರ?

ನವದೆಹಲಿ, ನವೆಂಬರ್ 09: ದೀಪಾವಳಿ ಹಬ್ಬದ ನಂತರವೂ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ ಸಿಗುವ ಸೂಚನೆ ಸಿಕ್ಕಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶುಕ್ರವಾರ (ನವೆಂಬರ್ 09) ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ. ಸೋಮವಾರದಂದು ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 15 ಪೈಸೆ ಇಳಿಕೆಯಾಗಿದೆ.

ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ತೈಲ ಬೆಲೆ ಮೇಲೆ ನಿಯಂತ್ರಣ ಸಿಗದ ಕಾರಣ ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ ಎಂದು ವಿರೋಧಪಕ್ಷಗಳ ಪ್ರತಿಭಟನೆ ನಡೆಸಿ, ತೀವ್ರ ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಬೆಲೆ ಸತತವಾಗಿ ಕುಸಿಯುತ್ತಿದೆ.

ಪೆಟ್ರೋಲ್ ದರ 21 ದಿನಗಳಲ್ಲಿ 4.63 ರೂ ನಷ್ಟು ಇಳಿಕೆಯಾಗಿದೆ. ಡೀಸೆಲ್ 2.80 ರೂ ನಷ್ಟು ಇಳಿಕೆ ಕಂಡಿದೆ. ಅಮೇರಿಕವು ಇರಾನ್‌ನಿಂದ ತೈಲವನ್ನು ಆಮದುಮಾಡಿಕೊಳ್ಳುವ ಕುರಿತು ತೆಗೆದುಕೊಂಡ ನಿರ್ಧಾರದಿಂದ ಚೀನಾ, ಜಪಾನ್ ಸೇರಿ 8 ದೇಶಗಳಲ್ಲಿ ಕರೀದಿ ಕಡಿಮೆಯಾಗಿದೆ ಹಾಗಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿದಿದೆ.

ದೆಹಲಿಯಲ್ಲಿ ತೈಲ ಬಂಧನ

ದೆಹಲಿಯಲ್ಲಿ ತೈಲ ಬಂಧನ

ಪೆಟ್ರೋಲ್ ದರ 21 ದಿನಗಳಲ್ಲಿ 4.63 ರೂ ನಷ್ಟು ಇಳಿಕೆಯಾಗಿದೆ. ಡೀಸೆಲ್ 2.80 ರೂ ನಷ್ಟು ಇಳಿಕೆ ಕಂಡಿದೆ.

ನವದೆಹಲಿಯಲ್ಲಿ ಶುಕ್ರವಾರದಂದು ಪೆಟ್ರೋಲ್ 15 ಪೈಸೆ ಹಾಗೂ ಡಿಸೇಲ್ 15 ಪೈಸೆ ದರ ಕಡಿತವಾಗಿದೆ. ಶುಕ್ರವಾರದಂದು ದೆಹಲಿಯಲ್ಲಿ 78.06ರು(ನಿನ್ನೆ 78.21ರು) ಹಾಗೂ ಡಿಸೇಲ್ 72.74ರು(72.89 ರು)

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ ಬೇರೆ ನಗರಗಳಿಗೆ ಹೋಲಿಸಿದರೆ ಯಾವಾಗಲೂ ಅಧಿಕವಾಗಿರುತ್ತದೆ. ಇದಕ್ಕೆ ಜಿಎಸ್ ಟಿ ಹೇರಿಕೆಯೇ ಕಾರಣವಾಗಿದೆ.

ಆದರೆ, ಮುಂಬೈ ನಗರದಲ್ಲಿ ಶುಕ್ರವಾರದಂದು ಪೆಟ್ರೋಲ್ ದರ 15ಪೈಸೆ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 83.57ರು(ನಿನ್ನೆ 83.72ರು) ನಷ್ಟಿದ್ದರೆ, ಡೀಸೆಲ್ ಬೆಲೆ 76.22ರು(76.38ರು)ನಷ್ಟಿದೆ.

ಬೆಂಗಳೂರಿನಲ್ಲಿ ತೈಲ ಬೆಲೆ

ಬೆಂಗಳೂರಿನಲ್ಲಿ ತೈಲ ಬೆಲೆ

ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಯಾಗಿದೆ. ಶುಕ್ರವಾರದಂದು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಬೆಲೆ ಯಥಾಸ್ಥಿತಿಯಲ್ಲಿದೆ 79.05(79.21ರು)ರು ನಷ್ಟಿದೆ. ಡೀಸೆಲ್ ಬೆಲೆ ಕಡಿಮೆಯಾಗಿದ್ದು, 73.46ರು ನಷ್ಟಿದೆ.( 73.76ರು)

ಕೋಲ್ಕತ್ತಾ, ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತ್ತಾ, ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತಾ ನಗರದಲ್ಲಿ ಶುಕ್ರವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 79.98(80.13ರು) ಹಾಗೂ ಡೀಸೆಲ್ ಬೆಲೆ 74.60(75.22ರು) ನಷ್ಟಿದೆ. ಗುರುವಾರದಂದು ಪೆಟ್ರೋಲ್ ಬೆಲೆ 80.13 ರೂ.ಇತ್ತು

ಚೆನ್ನೈನಲ್ಲಿ ಶುಕ್ರವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 81.08ರು(81.23 ರು) ಹಾಗೂ ಡೀಸೆಲ್ ಬೆಲೆ 76.89(77.05ರು) ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+