ಫೆ.23ರಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಯಾವ ನಗರದಲ್ಲಿ ಎಷ್ಟು?
ನವದೆಹಲಿ, ಫೆಬ್ರವರಿ 23: . ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಸರಿ ಸುಮಾರು 23-25 ಪೈಸೆಯಂತೆ ಪೆಟ್ರೋಲ್ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 24-26 ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಕಂಡಿದೆ. ಒಟ್ಟಾರೆ ಈ ತಿಂಗಳಲ್ಲಿ ಪೆಟ್ರೋಲ್ ಒಟ್ಟು 4.63 ಪ್ರತಿ ಲೀಟರ್ ಹಾಗೂ ಡೀಸೆಲ್ 4.84 ಪ್ರತಿ ಲೀಟರ್ ನಷ್ಟು ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 63 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ.
ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!
ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 25 ಪೈಸೆ ಏರಿಕೆಯಾಗಿ 90.83ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆ ಕಂಡು 81.32 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆಗೆ ಅನೇಕ ಕಾರಣಗಳಿದ್ದರೂ ಸದ್ಯಕ್ಕೆ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ. ದೆಹಲಿಯಲ್ಲಿ 19 ರು ಪ್ರತಿ ಲೀಟರ್ ವ್ಯಾಟ್, ಡೀಲರ್ ಕಮಿಷನ್ 3.67 ರು ಪ್ರತಿ ಲೀಟರ್ ಸೇರಿ ಬೆಲೆ ಇನ್ನಷ್ಟು ಏರಿಕೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 23: 93.98 (37 ಪೈಸೆ ಏರಿಕೆ)
ಫೆಬ್ರವರಿ 22: 93.61 (---)
ಫೆಬ್ರವರಿ 21: 93.61 (---)
ಫೆಬ್ರವರಿ 20: 93.61 (40 ಪೈಸೆ)
++++
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 23: 86.21 (37 ಪೈಸೆ ಏರಿಕೆ)
ಫೆಬ್ರವರಿ 22: 85.84 (---)
ಫೆಬ್ರವರಿ 21: 85.84 (---)
ಫೆಬ್ರವರಿ 20: 85.84 (40 ಪೈಸೆ)

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 23: 90.93 (35 ಪೈಸೆ ಏರಿಕೆ)
ಫೆಬ್ರವರಿ 22: 90.58 (---)
ಫೆಬ್ರವರಿ 21: 90.58 (39 ಪೈಸೆ)
ಫೆಬ್ರವರಿ 20: 90.19 (31 ಪೈಸೆ)
++++
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 23: 81.32 (35 ಪೈಸೆ ಏರಿಕೆ)
ಫೆಬ್ರವರಿ 22: 80.97 (---)
ಫೆಬ್ರವರಿ 21: 80.97 (37 ಪೈಸೆ)
ಫೆಬ್ರವರಿ 20: 80.60 (33 ಪೈಸೆ)

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 23: 92.94 (30 ಪೈಸೆ ಏರಿಕೆ)
ಫೆಬ್ರವರಿ 22: 92.54
ಫೆಬ್ರವರಿ 21: 92.28
ಫೆಬ್ರವರಿ 20: 91.97
++++
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 23: 88.44 (38 ಪೈಸೆ ಏರಿಕೆ)
ಫೆಬ್ರವರಿ 22: 88.06 (---)
ಫೆಬ್ರವರಿ 21: 88.06 (39 ಪೈಸೆ)
ಫೆಬ್ರವರಿ 20: 87.67 (35 ಪೈಸೆ)

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 23: 92.90 (31 ಪೈಸೆ ಏರಿಕೆ)
ಫೆಬ್ರವರಿ 22: 92.59
ಫೆಬ್ರವರಿ 21: 92.59 (31 ಪೈಸೆ)
ಫೆಬ್ರವರಿ 20: 92.25 (25 ಪೈಸೆ)
++++
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 23: 86.31 (33 ಪೈಸೆ ಏರಿಕೆ)
ಫೆಬ್ರವರಿ 22: 85.98 (---)
ಫೆಬ್ರವರಿ 21: 85.98
ಫೆಬ್ರವರಿ 20: 85.63 (32 ಪೈಸೆ)