ಪೆಟ್ರೋಲ್, ಡೀಸೆಲ್ ದರ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ ರೇಟ್?
ನವದೆಹಲಿ, ಜೂನ್ 08: ದೇಶದಲ್ಲಿ ಕೊರೊನಾ ಲಾಕ್‌ಡೌನ್ ಘೋಷಣೆಯಾದ ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸಿರಲಿಲ್ಲ. ಆದರೆ ಜೂನ್ 7ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಭಾನುವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡ ಬಳಿಕ ಸೋಮವಾರ(ಜೂನ್ 8)ರಂದು ತೈಲ ದರ ಮತ್ತಷ್ಟು ಏರಿಕೆ ದಾಖಲಿಸಿದೆ.
Recommended Video
ಭಾನುವಾರ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 71.86 ರುಪಾಯಿ ಇದ್ದ ಪೆಟ್ರೋಲ್ ಬೆಲೆ 60 ಪೈಸೆ ಏರಿಕೆಗೊಂಡು 72.46 ರುಪಾಯಿಗೆ ತಲುಪಿದೆ. ಡೀಸೆಲ್ ಬೆಲೆ ಕೂಡ 60 ಪೈಸೆ ಏರಿಕೆಗೊಂಡು 69.99 ರುಪಾಯಿಯಿಂದ 70.59 ರುಪಾಯಿಗೆ ಏರಿಕೆಯಾಗಿದೆ.

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 08: 74.79 (61 ಪೈಸೆ ಏರಿಕೆ)
ಜೂನ್ 07: 74.18
ಜೂನ್ 06: 73.55
ಜೂನ್ 05: 73.55
ಡೀಸೆಲ್ (ಪ್ರತಿ ಲೀಟರ್)
ಜೂನ್ 08: 67.11 (57 ಪೈಸೆ ಏರಿಕೆ)
ಜೂನ್ 07: 66.54
ಜೂನ್ 06: 65.96
ಜೂನ್ 05: 65.96

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 08: 72.46 (60 ಪೈಸೆ ಏರಿಕೆ)
ಜೂನ್ 07: 71.86
ಜೂನ್ 06: 71.26
ಜೂನ್ 05: 71.26
ಡೀಸೆಲ್ (ಪ್ರತಿ ಲೀಟರ್)
ಜೂನ್ 08: 70.59 (60 ಪೈಸೆ ಏರಿಕೆ)
ಜೂನ್ 07: 69.99
ಜೂನ್ 06: 69.39
ಜೂನ್ 05: 69.39

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 08: 79.49 (58 ಪೈಸೆ ಏರಿಕೆ)
ಜೂನ್ 07: 78.91
ಜೂನ್ 06: 78.32
ಜೂನ್ 05: 78.32
ಡೀಸೆಲ್ (ಪ್ರತಿ ಲೀಟರ್)
ಜೂನ್ 08: 69.37 (58 ಪೈಸೆ ಏರಿಕೆ)
ಜೂನ್ 07: 68.79
ಜೂನ್ 06: 68.21
ಜೂನ್ 05: 68.21

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 08: 76.60 (45 ಪೈಸೆ ಏರಿಕೆ)
ಜೂನ್ 07: 76.15
ಜೂನ್ 06: 75.54
ಜೂನ್ 05: 75.54
ಡೀಸೆಲ್ (ಪ್ರತಿ ಲೀಟರ್)
ಜೂನ್ 08: 69.25 (44 ಪೈಸೆ ಏರಿಕೆ)
ಜೂನ್ 07: 68.81
ಜೂನ್ 06: 68.22
ಜೂನ್ 05: 68.22

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 08: 75.22 (61 ಪೈಸೆ ಏರಿಕೆ)
ಜೂನ್ 07: 74.61
ಜೂನ್ 06: 73.97
ಜೂನ್ 05: 73.97
ಡೀಸೆಲ್ (ಪ್ರತಿ ಲೀಟರ್)
ಜೂನ್ 08: 69.00 (58 ಪೈಸೆ ಏರಿಕೆ)
ಜೂನ್ 07: 68.42
ಜೂನ್ 06: 67.82
ಜೂನ್ 05: 67.82












Click it and Unblock the Notifications