ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಎರಡನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಎರಡನೇ ದಿನ ಕೂಡಾ ಏರಿಕೆ ಕಂಡು ಬಂದಿದೆ. ಮಂಗಳವಾರದಂದು ಪೆಟ್ರೋಲ್ ಬೆಲೆ 10 ಪೈಸೆ ಹಾಗೂ ಡೀಸೆಲ್ ಬೆಲೆ 8 ಪೈಸೆ ಹೆಚ್ಚಳವಾಗಿದೆ.

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 10 ಪೈಸೆ ಏರಿಕೆ ಕಂಡು ಲೀಟರ್ ಗೆ 70.63 ರೂಪಾಯಿಯಾಗಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ 7 ಪೈಸೆ ಹೆಚ್ಚಳ ಕಂಡು ಲೀಟರ್ ಗೆ 64.54 ರೂಪಾಯಿಯಾಗಿದೆ.

Petrol, diesel prices hiked for second day. Check rates here

ಇನ್ನು ಬೆಂಗಳೂರಿನಲ್ಲೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಪೆಟ್ರೋಲ್ 13 ಪೈಸೆ ಹೆಚ್ಚಳ ಕಂಡು ಲೀಟರ್ ಗೆ 71.23 ಪೈಸೆಯಾಗಿದೆ. ಡೀಸೆಲ್ 10 ಪೈಸೆ ಹೆಚ್ಚಳ ಕಂಡು ಲೀಟರ್ ಗೆ 64.92 ರೂಪಾಯಿಯಾಗಿದೆ. ಸೋಮವಾರ ಕೂಡ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿತ್ತು.

ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಅಕ್ಟೋಬರ್ ನಿಂದ ಈವರೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 30ರಷ್ಟು ಇಳಿಕೆ ಕಂಡಿತ್ತು. ಇದಕ್ಕೆ ಬೇಡಿಕೆ ಕಡಿಮೆಯಾಗಿ ಉತ್ಪಾದನೆ ಹೆಚ್ಚಾಗಿದ್ದು ಮುಖ್ಯ ಕಾರಣವಾಗಿತ್ತು.

ತೈಲ ತಯಾರಿಕಾ ಕಂಪನಿಗಳು ತೈಲ ಉತ್ಪಾದನೆ ಪ್ರಮಾಣದಲ್ಲಿ ಇಳಿಕೆ ಮಾಡಿವೆ. ದಿನಕ್ಕೆ 1.2 ಮಿಲಿಯನ್ ಬ್ಯಾರಲ್ ಉತ್ಪಾದನೆ ಕಡಿಮೆ ಮಾಡುವ ನಿರ್ಧಾರ ಕೈಗೊಂಡಿವೆ.

English summary
Petrol, diesel prices were hiked again on Tuesday. Petrol prices rose by 9-10 paise per litre while diesel became costlier by 7-8 paise per litre in major cities of the country. In the national capital Delhi, petrol is sold at Rs 70.63, up 10 paise compared to Monday's price of Rs 70.53.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X