ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ: ಸತತ 17ನೇ ದಿನ ದರ ಏರಿಕೆ
ನವ ದೆಹಲಿ, ಜೂನ್ 23: ಕೊರೊನಾವೈರಸ್ ಸೋಂಕಿನಿಂದಾಗಿ ಕಂಗೆಟ್ಟಿರುವ ಜನರಿಗೆ ತೈಲ ದರ ಏರಿಕೆಯು ಮತ್ತಷ್ಟು ಚಿಂತೆಗೀಡು ಮಾಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ, ದೇಶೀಯವಾಗಿ ಕಚ್ಚಾ ತೈಲ ಬೆಲೆ ಕುಸಿಯುವ ಪ್ರಯೋಜನವನ್ನು ಜನರು ಇದುವರೆಗೂ ಪಡೆಯುತ್ತಿಲ್ಲ.
Recommended Video
ಮಂಗಳವಾರ, ದೇಶದ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಸತತ 17 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಡೀಸೆಲ್ 55 ಪೈಸೆ ಮತ್ತು ಪೆಟ್ರೋಲ್ 20 ಪೈಸೆ ಹೆಚ್ಚಾಗಿದೆ. ಕಳೆದ 17 ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 8.5 ರು. ಮತ್ತು ಡೀಸೆಲ್ ಲೀಟರ್‌ಗೆ 10.01 ರು. ಏರಿಕೆಯಾಗಿದೆ.
ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ 17ನೇ ದಿನ ತೈಲ ಬೆಲೆ ಏರಿಕೆ ಕಂಡಿದೆ.

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 23: 82.35 (20 ಪೈಸೆ ಏರಿಕೆ)
ಜೂನ್ 22: 82.15
ಜೂನ್ 20: 81.44
ಜೂನ್ 19: 80.91
ಡೀಸೆಲ್ (ಪ್ರತಿ ಲೀಟರ್)
ಜೂನ್ 23: 75.51 (53 ಪೈಸೆ ಏರಿಕೆ)
ಜೂನ್ 22: 74.98
ಜೂನ್ 20: 73.86
ಜೂನ್ 19: 73.28

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 23: 79.56 (20 ಪೈಸೆ ಏರಿಕೆ)
ಜೂನ್ 22: 79.40
ಜೂನ್ 20: 78.88
ಜೂನ್ 19: 78.37
ಡೀಸೆಲ್ (ಪ್ರತಿ ಲೀಟರ್)
ಜೂನ್ 23: 79.40 (55 ಪೈಸೆ ಏರಿಕೆ)
ಜೂನ್ 22: 78.85
ಜೂನ್ 20: 77.67
ಜೂನ್ 19: 77.06

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 23: 86.54 (18 ಪೈಸೆ ಏರಿಕೆ)
ಜೂನ್ 22: 86.36
ಜೂನ್ 20: 85.70
ಜೂನ್ 19: 85.21
ಡೀಸೆಲ್ (ಪ್ರತಿ ಲೀಟರ್)
ಜೂನ್ 23: 77.76 (52 ಪೈಸೆ ಏರಿಕೆ)
ಜೂನ್ 22: 77.24
ಜೂನ್ 20: 76.11
ಜೂನ್ 19: 75.53

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 23: 83.04 (17 ಪೈಸೆ ಏರಿಕೆ)
ಜೂನ್ 22: 82.87
ಜೂನ್ 20: 82.27
ಜೂನ್ 19: 81.82
ಡೀಸೆಲ್ (ಪ್ರತಿ ಲೀಟರ್)
ಜೂನ್ 23: 76.77 (47 ಪೈಸೆ ಏರಿಕೆ)
ಜೂನ್ 22: 76.77
ಜೂನ್ 20: 75.29
ಜೂನ್ 19: 74.87

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 23: 82.79 (20 ಪೈಸೆ ಏರಿಕೆ)
ಜೂನ್ 22: 82.59
ಜೂನ್ 20: 81.88
ಜೂನ್ 19: 81.36
ಡೀಸೆಲ್ (ಪ್ರತಿ ಲೀಟರ್)
ಜೂನ್ 23: 77.60 (54 ಪೈಸೆ ಏರಿಕೆ)
ಜೂನ್ 22: 77.06
ಜೂನ್ 20: 75.91
ಜೂನ್ 19: 75.31












Click it and Unblock the Notifications