ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ವಾಹನ ಸವಾರರಿಗೆ ದಸರಾ ಹಬ್ಬದ ನಂತರ ನಿರಂತರವಾಗಿ ನೆಮ್ಮದಿಯ ಸುದ್ದಿ ಸಿಗುತ್ತಿದೆ. ಸತತ ನಾಲ್ಕನೇ ದಿನವೂ ಇಂಧನ ದರದಲ್ಲಿ ಇಳಿಕೆ ಕಂಡು ಬಂದಿದೆ.

ಭಾನುವಾರದಂದು (ಅಕ್ಟೋಬರ್ 21) ದೇಶದಾದ್ಯಂತ ಪ್ರತಿ ಲೀಟರ್‌ ಪೆಟ್ರೋಲ್‌ಗೆ 25 ಪೈಸೆ ಮತ್ತು ಡೀಸೆಲ್‌ ಬೆಲೆಯಲ್ಲಿ 17 ಪೈಸೆಯಷ್ಟು ಕಡಿಮೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ 1.09 ರುಪಾಯಿ ಹಾಗೂ ಡೀಸೆಲ್ ಬೆಲೆ 50 ಪೈಸೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಬೆಲೆ ಪೆಟ್ರೋಲ್​ ದರ 82.44 ರೂ. ಮತ್ತು ಡೀಸೆಲ್​ ದರ 75.63 ರೂ.ಗಳಷ್ಟಿದೆ. ಶನಿವಾರದಂದು ಪೆಟ್ರೋಲ್‌ ಪ್ರತಿ ಲೀಟರ್‌ಗೆ 39 ಪೈಸೆ ಮತ್ತು ಡೀಸೆಲ್‌ 12 ಪೈಸೆ ಇಳಿಕೆ ಕಂಡಿತ್ತು.

ಹಬ್ಬದ ಸಂಭ್ರಮಕ್ಕೆ ತೈಲಬೆಲೆ ಉಡುಗೊರೆ: ಸತತ ಎರಡನೆಯ ದಿನವೂ ದರ ಇಳಿಕೆಹಬ್ಬದ ಸಂಭ್ರಮಕ್ಕೆ ತೈಲಬೆಲೆ ಉಡುಗೊರೆ: ಸತತ ಎರಡನೆಯ ದಿನವೂ ದರ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರಿಂದ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿದ್ದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆಯಾಗಿತ್ತು.

ಆಯುಧ ಪೂಜೆ ದಿನದಂದು ಶುಭ ಸುದ್ದಿ: ಇಂಧನ ಬೆಲೆ ಇಳಿಕೆ ಆಯುಧ ಪೂಜೆ ದಿನದಂದು ಶುಭ ಸುದ್ದಿ: ಇಂಧನ ಬೆಲೆ ಇಳಿಕೆ

ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದ್ದು, ವಿರೋಧಪಕ್ಷಗಳ ಪ್ರತಿಭಟನೆಯ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಎಂಬುದನ್ನು ತಿಳಿಯಲು ಮುಂದೆ ಓದಿ...

ದೆಹಲಿಯಲ್ಲಿ ತೈಲ ಬೆಲೆ ಎಷ್ಟಿದೆ?

ದೆಹಲಿಯಲ್ಲಿ ತೈಲ ಬೆಲೆ ಎಷ್ಟಿದೆ?

ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 81.74ರೂ. ಇದೆ. ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 75.19 ರೂ. ನಷ್ಟಾಗಿದೆ. ಶನಿವಾರದದಂದು ಈ ದರ ಪ್ರತಿ ಲೀ. 81.99 ರೂ.ಗಳಷ್ಟಾಗಿದ್ದರೆ, ಡೀಸೆಲ್ ದರ 75.58 ರು ಪ್ರತಿ ಲೀಟರ್‌ಗೆ ಇಳಿಕೆಯಾಗಿತ್ತು.

ಮುಂಬೈನಲ್ಲಿ ಇಂಧನ ಇಳಿಕೆ

ಮುಂಬೈನಲ್ಲಿ ಇಂಧನ ಇಳಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 25 ಪೈಸೆ ಇಳಿಕೆಯಾಗಿ 87.21 ರು ನಷ್ಟಿದೆ. ಡೀಸೆಲ್ ಬೆಲೆ 78.82 ರೂ.ಗಳಷ್ಟಿತ್ತು. ಶನಿವಾರದಂದು ಪೆಟ್ರೋಲ್ ಬೆಲೆ 87.46ರೂ.ಗೆ ಇಳಿದಿದೆ. ಡೀಸೆಲ್ ಬೆಲೆ 11 ಪೈಸೆಗಳಷ್ಟು ಇಳಿಕೆಯಾಗಿದ್ದು, ಲೀಟರ್‌ಗೆ 79 ರೂ.ಗೆ ಮಾರಾಟವಾಗಿತ್ತು.

ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಬೆಲೆ

ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಬೆಲೆ

ಕೋಲ್ಕತಾ ನಗರದಲ್ಲಿ ಪೆಟ್ರೋಲ್ ಬೆಲೆ 83.58 ರೂ. ಇದ್ದರೆ, ಡೀಸೆಲ್ ದರ 77.04 ರೂ.ಗೆ ಮಾರಾಟ ಆಗುತ್ತಿದೆ.

ಚೆನ್ನೈನಲ್ಲಿ ಪೆಟ್ರೋಲ್ 84.96 ರೂ.ನಷ್ಟಿದ್ದರೆ, ಡೀಸೆಲ್ ದರ ಲೀಟರ್‌ಗೆ 79.51 ರೂ. ಇದೆ. ಶನಿವಾರದಂದು ಕೋಲ್ಕತಾದಲ್ಲಿ ಪ್ರತಿ ಲೀ. ಪೆಟ್ರೋಲ್‌ 83.83 ರೂ. ಮತ್ತು ಡೀಸೆಲ್‌ 77.21 ರೂ. ನಷ್ಟಿತ್ತು. ಚೆನ್ನೈನಲ್ಲಿ ಪೆಟ್ರೋಲ್‌ ಪ್ರತಿ ಲೀ.ಗೆ 85.22ರೂ. ಮತ್ತು ಡೀಸೆಲ್ 79.69 ರೂ.ನಷ್ಟಿತ್ತು.

ಹೈದಾರಾಬಾದಿನಲ್ಲಿ ತೈಲ ಬೆಲೆ

ಹೈದಾರಾಬಾದಿನಲ್ಲಿ ತೈಲ ಬೆಲೆ

ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 86.66 ರು ನಷ್ಟಿದೆ. ಶನಿವಾರದಂದು ಪ್ರತಿ ಲೀಟರ್ 86.92 ರು ನಷ್ಟಿತ್ತು. ಪ್ರತಿ ಲೀಟರ್ ಡೀಸೆಲ್ ಪ್ರತಿ ಲೀಟರ್ 81.79 ರು ನಷ್ಟಿದೆ. ಶನಿವಾರದಂದು ಪ್ರತಿ ಲೀಟರ್ ಡೀಸೆಲ್ 81.97ರು ನಷ್ಟಿತ್ತು.

English summary
Fuel prices have been slashed in India for the fourth consecutive day. As of Sunday October 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X