ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ, ನಿಮ್ಮ ನಗರದಲ್ಲಿ ಎಷ್ಟು?
ಬೆಂಗಳೂರು, ಜೂನ್ 25: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ 15ನೇ ದಿನದಂದು ಇಳಿಕೆಯಾಗಿದೆ. ಸೋಮವಾರದಂದು 6 ರಿಂದ 14 ಪೈಸೆ ತನಕ ಇಳಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಯನ್ನು 14 ಪೈಸೆ ಇಳಿಕೆ ಮಾಡಿವೆ. ಡಿಸೇಲ್ 10 ಪೈಸೆ ಪ್ರತಿ ಲೀಟರ್ ಗೆ ಇಳಿಕೆಯಾಗಿದೆ.
ಸತತ 27 ನೇ ದಿನ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಮೇ.30 ರಿಂದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಈ ನಡುವೆ 2-3 ದಿನ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಒಟ್ಟು 27 ದಿನಗಳಲ್ಲಿ ಪೆಟ್ರೋಲ್ ಬೆಲೆ 3 ರೂಪಾಯಿ ಇಳಿಕೆಯಾಗಿದೆ. ಡಿಸೇಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾದ ಕಾರಣ ಹಿಂದಿನ ತಿಂಗಳು ಕೆಲ ನಗರಗಳ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 80 ರೂಪಾಯಿಯಾಗಿತ್ತು. ಈಗ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಸುಮಾರು 6 ಡಾಲರ್ ಪ್ರತಿ ಬ್ಯಾರಲ್ ಗೆ ಕಡಿಮೆಯಾಗಿದೆ ಎನ್ನಲಾಗ್ತಿದೆ. ಸದ್ಯ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 74.10 ಡಾಲರ್.
ಪೆಟ್ರೋಲ್
ದೆಹಲಿ: 75.79
ಕೋಲ್ಕತ್ತಾ: 78.47
ಮುಂಬೈ : 83.44
ಚೆನ್ನೈ : 78.55
ಬೆಂಗಳೂರು : 76.91
ಡೀಸೆಲ್
ದೆಹಲಿ : 67.48
ಕೋಲ್ಕತ್ತಾ : 70.03
ಮುಂಬೈ : 71.66
ಚೆನ್ನೈ : 71.22
ಬೆಂಗಳೂರು : 68.35












Click it and Unblock the Notifications