ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಂತರವಾಗಿ ಇಂಧನ ದರ ಇಳಿಕೆ, ಸಂತಸಗೊಂಡ ವಾಹನ ಸವಾರರು

|
Google Oneindia Kannada News

ನವದೆಹಲಿ, ನವೆಂಬರ್ 13: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ 22ನೇ ದಿನವೂ ಇಳಿಕೆ ಕಂಡು ಬಂದಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಂಗಳವಾರ (ನವೆಂಬರ್ 13)ದಂದು ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ. ನಿರಂತರವಾಗಿ ಏರಿಕೆ ಕಾಣುತ್ತಿದ್ದ ಇಂಧನ ದರ ಈಗ ಇಳಿಕೆಯಾಗುತ್ತಿದ್ದು, ವಾಹನ ಸವಾರರಿಗೆ ಸಂತಸ ತಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 70 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ(ಪ್ರತಿ 1 ಡಾಲರ್ =72.54 ರುಪಾಯಿ) ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ಇಳಿಮುಖಗೊಂಡ ಪೆಟ್ರೋಲ್ ದರ, ಪ್ರಮುಖ ನಗರಗಳಲ್ಲಿ ಎಷ್ಟು? ಇಳಿಮುಖಗೊಂಡ ಪೆಟ್ರೋಲ್ ದರ, ಪ್ರಮುಖ ನಗರಗಳಲ್ಲಿ ಎಷ್ಟು?

ದೆಹಲಿಯಲ್ಲಿ ಸೋಮವಾರ (ನವೆಂಬರ್ 12)ದಂದು ಪೆಟ್ರೋಲ್ ಬೆಲೆ 17 ಪೈಸೆ ಹಾಗೂ ಡೀಸೆಲ್ ಬೆಲೆ 15 ಪೈಸೆ ಇಳಿಕೆಯಾಗಿತ್ತು. ಇಂದು(ನ.13) 12-13ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ಪೆಟ್ರೋಲ್, ಡೀಸೆಲ್ ಯಾವ ನಗರದಲ್ಲಿ ಎಷ್ಟು ದರವಿದೆ. ಕೇಂದ್ರ ಸರ್ಕಾರ ತೆರಿಗೆ ಇಳಿಸಿದ್ದು ಯಾವಾಗ ಇನ್ನಿತರ ಮಾಹಿತಿ ಮುಂದಿದೆ.

ತೈಲ ಬೆಲೆ ಮೇಲೆ ನಿಯಂತ್ರಣ

ತೈಲ ಬೆಲೆ ಮೇಲೆ ನಿಯಂತ್ರಣ

ತೈಲ ಬೆಲೆ ಮೇಲೆ ನಿಯಂತ್ರಣ ಸಿಗದ ಕಾರಣ ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ ಎಂದು ವಿರೋಧಪಕ್ಷಗಳ ಪ್ರತಿಭಟನೆ ನಡೆಸಿ, ತೀವ್ರ ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಬೆಲೆ ಸತತವಾಗಿ ಕುಸಿಯುತ್ತಿದೆ.

ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ

ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ

ನವದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ
ಮಂಗಳವಾರ(ನ.13)ದಂದು ಪೆಟ್ರೋಲ್ 77.43 ರು(13ಪೈಸೆ ಇಳಿಕೆ)
ಸೋಮವಾರದಂದು ಪೆಟ್ರೋಲ್ 77.56 ರು(17ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 77.73ರು (16 ಪೈಸೆ ಕಡಿತ)

***
ಡೀಸೆಲ್ ಬೆಲೆ ಇಳಿಕೆ
ಮಂಗಳವಾರದಂದು ಡೀಸೆಲ್ ಬೆಲೆ 72.19 ರು (13 ಪೈಸೆ ಇಳಿಕೆ)
ಸೋಮವಾರದಂದು ಡೀಸೆಲ್ 72.31 ರು (15ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 72.46ರು (12 ಪೈಸೆ ಕಡಿತ)

346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ 346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ

ಬೆಂಗಳೂರಿನಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ

ಬೆಂಗಳೂರಿನಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ಮಂಗಳವಾರ ನ.13ರಂದು ಪೆಟ್ರೋಲ್ 78.08 ರು (15 ಪೈಸೆ ಇಳಿಕೆ)
ನ. 12 ಸೋಮವಾರದಂದು ಪೆಟ್ರೋಲ್ 78.21 ರು(14ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 77.35ರು (16 ಪೈಸೆ ಕಡಿತ)

***
ಡೀಸೆಲ್ ಬೆಲೆ ಇಳಿಕೆ
ಮಂಗಳವಾರ(ನ.13)ದಂದು ಡೀಸೆಲ್ ಬೆಲೆ 72.60(14 ಪೈಸೆ ಇಳಿಕೆ)
ಸೋಮವಾರದಂದು ಡೀಸೆಲ್ 72.72 ರು (13ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 72.85ರು (12 ಪೈಸೆ ಕಡಿತ)
ಮುಂಬೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ

ಮುಂಬೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ

ಮುಂಬೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ಮಂಗಳವಾರ(ನ.13)ದಂದು ಪೆಟ್ರೋಲ್ 82.94 ರು (13 ಪೈಸೆ)
ಸೋಮವಾರದಂದು ಪೆಟ್ರೋಲ್ 83.07ರು(17ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 83.24ರು (16 ಪೈಸೆ ಕಡಿತ)

***
ಡೀಸೆಲ್ ಬೆಲೆ ಇಳಿಕೆ

ಮಂಗಳವಾರ(ನ.13)ದಂದು ಡೀಸೆಲ್ ಬೆಲೆ 75.64(12ಪೈಸೆ ಇಳಿಕೆ)
ಸೋಮವಾರದಂದು ಡೀಸೆಲ್ 75.76 ರು (16 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 75.92ರು (13 ಪೈಸೆ ಕಡಿತ)

ಸತತವಾಗಿ 11ನೇ ದಿನ ಇಂಧನ ದರ ಕುಸಿತ, ಪೆಟ್ರೋಲ್ ಬೆಲೆ ಎಷ್ಟು?ಸತತವಾಗಿ 11ನೇ ದಿನ ಇಂಧನ ದರ ಕುಸಿತ, ಪೆಟ್ರೋಲ್ ಬೆಲೆ ಎಷ್ಟು?

ಚೆನ್ನೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ

ಚೆನ್ನೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ

ಚೆನ್ನೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ಮಂಗಳವಾರ(ನ.13)ದಂದು ಪೆಟ್ರೋಲ್ ದರ 80.43(13 ಪೈಸೆ)

ಸೋಮವಾರದಂದು ಪೆಟ್ರೋಲ್ 80.56ರು(17ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 80.73 ರು (17 ಪೈಸೆ ಕಡಿತ)

***
ಡೀಸೆಲ್ ಬೆಲೆ ಇಳಿಕೆ

ಮಂಗಳವಾರ(ನ.13)ದಂದು 76.31(12 ಪೈಸೆ)
ಸೋಮವಾರದಂದು ಡೀಸೆಲ್ 76.43 ರು (16 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 76.59ರು (13 ಪೈಸೆ ಕಡಿತ)

English summary
Petrol, diesel prices were cut for the sixth straight day on Tuesday as international crude oil prices continued its downward trend. After Tuesday's correction, petrol became cheaper by 13 paise while diesel became cheaper by 12-13 paise per litre across all the major cities of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X