ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.9ರಂದು ಪೆಟ್ರೋಲ್ ದರ ದಾಖಲೆ ದರ ಮುಟ್ಟಿದ್ದೇಕೆ?

|
Google Oneindia Kannada News

ನವದೆಹಲಿ, ಫೆಬ್ರವರಿ 9: ಕಳೆದ ಗುರುವಾರದಂದು ಏರಿಕೆ ಕಂಡಿದ್ದ ಇಂಧನ ದರ ನಂತರ ಸ್ಥಿರತೆ ಕಂಡಿತ್ತು. ಕಳೆದ ಎರಡು ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಆದರೆ, ಮಂಗಳವಾರದಂದು ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆಯಾಗಿದೆ. ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 60 ಯುಎಸ್ ಡಾಲರ್ ನಷ್ಟಾಗಿದೆ. ಇಂಧನ ಬೇಡಿಕೆ ಸುಧಾರಣೆಯ ನಿರೀಕ್ಷೆಯಲ್ಲಿ ತೈಲ ಸಂಸ್ಥೆಗಳು ಪೂರೈಕೆ ತಡೆ ಹಿಡಿದಿರುವುದು ಜಾಗತಿಕವಾಗಿ ತೈಲ ಬೆಲೆಯಲ್ಲಿ ಭಾರಿ ವ್ಯತ್ಯಾಸಕ್ಕೆ ಕಾರಣವಾಗಿದೆ.

ಪೆಟ್ರೋಲ್ ದರ 35 ಪೈಸೆ ಹೆಚ್ಚಳ ಮಾಡಿದ್ದು, ಪ್ರತಿ ಲೀಟರ್ ಬೆಲೆ ರು. 87.30ರಲ್ಲಿ ಇದೆ. ಇನ್ನು ಡೀಸೆಲ್ ಕೂಡ ಲೀಟರ್ ಗೆ 35 ಪೈಸೆ ಏರಿಕೆ ಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ದರ ಏರಿಕೆ ನಂತರ ದೆಹಲಿಯಲ್ಲಿ ರು. 77.48 ಇದೆ. ಮುಂಬೈನಲ್ಲೂ ಪೆಟ್ರೋಲ್- ಡೀಸೆಲ್ ದರವು ದಾಖಲೆ ಎತ್ತರಕ್ಕೆ ಏರಿದ್ದು, ಪೆಟ್ರೋಲ್ ರು. 93.83 ಮತ್ತು ಡೀಸೆಲ್ ರು. 84.36 ಇದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ರು. 90.22 ಮತ್ತು ಡೀಸೆಲ್ ರು. 82.13 ಇದೆ.

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

Petrol, diesel prices at record high after todays hike: Check out rates in your city

ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ದೇಶದಲ್ಲಿ ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಇಂಧನ ದರ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ ಬಗ್ಗೆ ಮಾಹಿತಿ ಇತ್ತು. ಮೇ 2020ರಿಂದ ಇಲ್ಲಿ ತನಕ ಪೆಟ್ರೋಲ್ ಬೆಲೆ 14. 28 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11.83 ರು ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ. ಆದರೆ, ಈಗ ಸುಂಕ ಇಳಿಸುವಂತೆ ವಾಹನ ಸವಾರರು, ವಿಪಕ್ಷಗಳಿಂದ ಸತತವಾಗಿ ಆಗ್ರಹಿಸುತ್ತಿದ್ದು ಇಂಧನ ಇಲಾಖೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ, ಬಜೆಟ್ ನಲ್ಲಿ ಹೆಚ್ಚಿನೆ ಸೆಸ್ ಹಾಕಲಾಗಿದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೆಸ್ ಹಾಕಲಾಗಿದ್ದು, ಪೆಟ್ರೋಲ್ ಬೆಲೆ 2 ರು ಹಾಗೂ ಡೀಸೆಲ್ 4 ರು ಹೆಚ್ಚಳವಾಗುವ ವರದಿ ಬಂದಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಸೆಸ್ ನಿಂದಾಗಿ ಇಂಧನ ಬೆಲೆ ಏರಿಕೆಯಾಗುವುದಿಲ್ಲ ಎಂದರು.

English summary
The price of petrol at record high on Feb 9. Petrol and diesel retailed at a record high in Mumbai as well, at ₹93.83 a litre and ₹84.36 a litre respectively. according to Indian Oil Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X