ಲಾಕ್ಡೌನ್ 5.0: ಜೂನ್ 1 ರಿಂದ ವಾಹನ ಸವಾರರಿಗೆ ಕಹಿ ಸುದ್ದಿ ಕಾದಿದೆ

ನವದೆಹಲಿ, ಮೇ 30: ಹಲವು ವಿನಾಯತಿ ನಡುವೆ ಲಾಕ್ಡೌನ್ 5.0 ಜಾರಿಗೆ ಬರುತ್ತಿದೆ. ಆದರೆ ಇದರ ಬೆನ್ನಲ್ಲೇ ವಾಹನ ಸವಾರರಿಗೆ ಕಹಿ ಸುದ್ದಿ ಕಾದಿದೆ. ಪ್ರತಿದಿನದ ತೈಲ ಬೆಲೆ ಪರಿಷ್ಕರಣೆ ಜೊತೆಗೆ ತಿಂಗಳ ಮೊದಲ ದಿನ ಬೆಲೆ ಏರಿಕೆ ಬಿಸಿ ಕಾದಿದೆ.

ಜೂನ್ 1ರಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮಾಡಲು ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಮುಂದಾಗಿವೆ. ಇಂಡಿಯನ್ ಆಯಿಲ್ ಪ್ರಕಾರ ಜೂನ್ 1 ರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 5 ರು ಹೆಚ್ಚಳವಾಗುವ ಸಾಧ್ಯತೆಯಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕನಿಷ್ಟ ಲೀಟರ್ ಗೆ 4 ರೂ.ನಿಂದ 5 ರೂ.ಗೆ ಹೆಚ್ಚಳ ಮಾಡಲು ಸರ್ಕಾರಿ ಸ್ವಾಮ್ಯದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಭಾರತ್ ಪೆಟ್ರೋಲಿಯಂಗಳು ಮುಂದಾಗಿವೆ.

Petrol, Diesel Price May Increase By Up to Rs. 5/Ltr In June

ಲಾಕ್ ಡೌನ್ ಹೇರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೇಡಿಕೆ ಕುಸಿತಗೊಂಡಿದ್ದರಿಂದ ಹೆಚ್ಚಿನ ನಷ್ಟ ಅನುಭವಿಸಿದ್ದಾರೆ. ನಷ್ಟವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದಿವೆ.

ಮಾರ್ಚ್ ತಿಂಗಳಿನಲ್ಲಿ ಪೆಟ್ರೋಲ್ ಮೇಲೆ ವಿಶೇಷ ತೆರಿಗೆಯನ್ನು ಲೀಟರ್ ಗೆ 2 ರೂಪಾಯಿಯಿಂದ 8 ರೂಪಾಯಿಗೆ ಹೆಚ್ಚಳ ಮಾಡಿದ್ದು ಡೀಸೆಲ್ ಗೆ ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಿಸಲಾಗಿತ್ತು. ಇದಾದ ಬಳಿಕ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಿನ ಸುಂಕ, ತೆರಿಗೆ ವ್ಯತ್ಯಾಸ ಕಂಡು ಬಂದಿರಲಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಇಂಧನ ಮಾರಾಟದಲ್ಲಿ ಶೇಕಡಾ 50ರಷ್ಟು ಇಳಿಕೆಯಾಗಿತ್ತು.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 73.55 ರು ಹಾಗೂ ಡೀಸೆಲ್ ಬೆಲೆ 65. 96ರು ನಷ್ಟಿದೆ. ನಿಮ್ಮ ಊರಿನ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದರಗಳನ್ನು ತಿಳಿಯಲು ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+