ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 40 ಪೈಸೆ ಇಳಿಕೆ: ಇಂದಿನಿಂದಲೇ ಜಾರಿ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 40 ಪೈಸೆ ಇಳಿಕೆಯಾಗಿದೆ. ಹೊಸ ಬೆಲೆಗಳು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ. ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 96.72 ರೂ., ಕೋಲ್ಕತ್ತಾದಲ್ಲಿ 106.03 ರೂ., ಮುಂಬೈನಲ್ಲಿ 106.31 ರೂ. ಮತ್ತು ಚೆನ್ನೈನಲ್ಲಿ 102.63 ರೂ.ಇತ್ತು.
ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಮತ್ತು ಸ್ವಲ್ಪ ಸಮಯದವರೆಗೆ ಸ್ಥಿರವಾಗಿರುವ ಕಾರಣ ಬೆಲೆಯಲ್ಲಿ ಇಳಿಕೆ ನಿರೀಕ್ಷಿಸಲಾಗಿತ್ತು. ಕಚ್ಚಾ ತೈಲ ಬೆಲೆಯು ಕೆಲವು ಸಮಯದಿಂದ ಪ್ರತಿ ಬ್ಯಾರೆಲ್‌ಗೆ 95 ಡಾಲರ್‌ಗಿಂತ ಕಡಿಮೆಯಾಗಿದೆ. ಆರು ತಿಂಗಳಿಗೂ ಹೆಚ್ಚು ಕಾಲ ಸ್ಥಿರವಾಗಿದ್ದ ಇಂಧನ ಬೆಲೆಯಲ್ಲಿ ಇಳಿಕೆಯಾಗಿದೆ. ಈ ವರ್ಷದ ಏಪ್ರಿಲ್ 7 ರಂದು ಕೊನೆಯ ಬಾರಿಗೆ ಬೆಲೆ ಇಳಿಕೆಯಾಗಿತ್ತು.
ಈ ಮೊದಲು 1 ಲೀಟರ್ ಪೆಟ್ರೋಲ್ ದರ 101.94 ರೂ. ಪೈಸೆ ಇದ್ದರೆ ಡೀಸೆಲ್ ದರ 87.89 ರೂ. ಇತ್ತು. ಈಗ ಪೆಟ್ರೋಲ್ ದರ 101.54 ರೂ. ಡೀಸೆಲ್ ದರ 87.49 ರೂ.ಗೆ ಇಳಿಕೆಯಾಗಿದೆ.
Comments
English summary
Petrol and diesel prices reduced by 40 paise per litre. The new prices will be effective from 6 am on Tuesday.
Story first published: Tuesday, November 1, 2022, 10:19 [IST]