ಸತತ ಇಳಿಕೆಯಾದ ಬೆಲೆ, 70ರು ನೊಳಗೆ ಪೆಟ್ರೋಲ್, ಡೀಸೆಲ್
ನವದೆಹಲಿ, ಡಿಸೆಂಬರ್ 26: ವರ್ಷಾಂತ್ಯದ ವೇಳೆಗೆ ವಾಹನ ಸವಾರರಿಗೆ ಖುಷಿ ಸುದ್ದಿ ಸಿಗುತ್ತಿದೆ. ಸತತ ಎರಡು ದಿನಗಳ ಕಾಲ ಇಂಧನ ಬೆಲೆಯಲ್ಲಿ ಕುಸಿತ ಕಂಡಿದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಈಗ ಪ್ರತಿ ಲೀಟರ್ ಗೆ 70 ರು ನೊಳಗೆ ಸಿಗುವಂತಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕಚ್ಚಾ ತೈಲ ಬೆಲೆ ಶೇ 40ರಷ್ಟು ಇಳಿಕೆಯಾಗಿದೆ. ಹೀಗಾಗಿ, ಪೆಟ್ರೋಲ್-ಡಿಸೇಲ್ ಬೆಲೆ ಇನ್ನಷ್ಟು ಇಳಿಕೆಯಾಗುವ ಸೂಚನೆ ಸಿಕ್ಕಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 21 ಪೈಸೆ ಹಾಗೂ ಡಿಸೇಲ್ ಬೆಲೆ 19 ಪೈಸೆ ಇಳಿಕೆ ಕಂಡು ಬಂದಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 69.79ರು ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 63.83ರು ನಷ್ಟಿದೆ.
ಎರಡು ತಿಂಗಳಿನಿಂದಲೂ ಇಳಿಕೆ ಕಾಣುತ್ತಲೇ ಸಾಗಿದ್ದ ಇಂಧನ ಬೆಲೆಯು ಕಳೆದ ಎರಡು ದಿನಗಳಲ್ಲಿ ಕೊಂಚ ಏರಿಕೆ ಕಂಡಿತ್ತು. ಬೇಡಿಕೆ ಕಡಿಮೆಯಾಗಿ ಉತ್ಪಾದನೆ ಹೆಚ್ಚಾಗಿದ್ದು ಮುಖ್ಯ ಕಾರಣವಾಗಿತ್ತು. ಇದಾದ ಬಳಿಕ, ತೈಲ ತಯಾರಿಕಾ ಕಂಪನಿಗಳು ತೈಲ ಉತ್ಪಾದನೆ ಪ್ರಮಾಣದಲ್ಲಿ ಇಳಿಕೆ ಮಾಡಿವೆ. ದಿನಕ್ಕೆ 1.2 ಮಿಲಿಯನ್ ಬ್ಯಾರಲ್ ಉತ್ಪಾದನೆ ಕಡಿಮೆ ಮಾಡುವ ನಿರ್ಧಾರ ಕೈಗೊಂಡಿವೆ.

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.
ಬುಧವಾರ(ಡಿ.26)ದಂದು ಪೆಟ್ರೋಲ್ 70.35 ರು(---)
ಮಂಗಳವಾರದಂದು ಪೆಟ್ರೋಲ್ 70.35 ರು(0.07 ಪೈಸೆ ಇಳಿಕೆ)
ಸೋಮವಾರದಂದು ಪೆಟ್ರೋಲ್ 70.42ರು (22ಪೈಸೆ ಕಡಿತ)
ಡೀಸೆಲ್ ಬೆಲೆ
ಬುಧವಾರ(ಡಿ.26)ದಂದು ಡೀಸೆಲ್ 64.18 ರು (---) ಮಂಗಳವಾರದಂದು ಡೀಸೆಲ್ 64.18 ರು(----)
ಸೋಮವಾರದಂದು ಡೀಸೆಲ್ 64.18ರು (18 ಪೈಸೆ ಇಳಿಕೆ)

ಚೆನ್ನೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಪೆಟ್ರೋಲ್ ದರ
ಬುಧವಾರ(ಡಿ.26)ದಂದು ಪೆಟ್ರೋಲ್ 72.41 ರು(---)
ಮಂಗಳವಾರದಂದು ಪೆಟ್ರೋಲ್ 70.41 ರು(0.07 ಪೈಸೆ ಇಳಿಕೆ)
ಸೋಮವಾರದಂದು ಪೆಟ್ರೋಲ್ 72.48ರು (22ಪೈಸೆ ಕಡಿತ)
ಡೀಸೆಲ್ ಬೆಲೆ
ಬುಧವಾರ(ಡಿ.26)ದಂದು ಡೀಸೆಲ್ 67.38 ರು (---)
ಮಂಗಳವಾರದಂದು ಡೀಸೆಲ್ 67.38 ರು(----)
ಸೋಮವಾರದಂದು ಡೀಸೆಲ್ 64.38ರು (20 ಪೈಸೆ ಇಳಿಕೆ)

ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್ ದರ
ಬುಧವಾರ(ಡಿ.26)ದಂದು ಪೆಟ್ರೋಲ್ 75.41 ರು(---)
ಮಂಗಳವಾರದಂದು ಪೆಟ್ರೋಲ್ 75.41 ರು(0.07 ಪೈಸೆ ಇಳಿಕೆ)
ಸೋಮವಾರದಂದು ಪೆಟ್ರೋಲ್ 75.48ರು (21ಪೈಸೆ ಕಡಿತ)
ಡೀಸೆಲ್ ಬೆಲೆ
ಬುಧವಾರ(ಡಿ.26)ದಂದು ಡೀಸೆಲ್ 64.79 ರು (---) ಮಂಗಳವಾರದಂದು ಡೀಸೆಲ್ 66.79 ರು(----)
ಸೋಮವಾರದಂದು ಡೀಸೆಲ್ 6679ರು (19 ಪೈಸೆ ಇಳಿಕೆ)

ಕೋಲ್ಕತಾದಲ್ಲಿ ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್
ಬುಧವಾರ(ಡಿ.26)ದಂದು ಪೆಟ್ರೋಲ್ 71.89 ರು(---)
ಮಂಗಳವಾರದಂದು ಪೆಟ್ರೋಲ್ 71.89 ರು(0.07 ಪೈಸೆ ಇಳಿಕೆ)
ಸೋಮವಾರದಂದು ಪೆಟ್ರೋಲ್ 71.96ರು (20ಪೈಸೆ ಕಡಿತ)
ಡೀಸೆಲ್ ಬೆಲೆ
ಬುಧವಾರ(ಡಿ.26)ದಂದು ಡೀಸೆಲ್ 65.59 ರು (---)
ಮಂಗಳವಾರದಂದು ಡೀಸೆಲ್ 65.59 ರು(----)
ಸೋಮವಾರದಂದು ಡೀಸೆಲ್ 65.59ರು (18 ಪೈಸೆ ಇಳಿಕೆ)












Click it and Unblock the Notifications