ಸೆ.27: ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ
ನವದೆಹಲಿ, ಸೆಪ್ಟೆಂಬರ್ 27: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೋಮವಾರ (ಸೆ.27) ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೇಶದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿ ಇಂದು ಸಹ ಇಂಧನ ದರ ಸ್ಥಿರವಾಗಿಯೇ ಇದೆ.
ನಿನ್ನೆ ಭಾನುವಾರ ಲೀಟರ್ ಡೀಸೆಲ್ ದರದಲ್ಲಿ 25ರಿಂದ 27 ಪೈಸೆ ಹೆಚ್ಚಳ ಮಾಡಲಾಗಿತ್ತು, ಆ ಬಳಿಕ ಡೀಸೆಲ್ ದರದಲ್ಲಿ ಏರಿಕೆ ಕಂಡಿತ್ತು. ಆದರೆ ಸೋಮವಾರ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇನ್ನು ಸತತ ಮೂರು ವಾರಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗದಿರುವುದನ್ನು ಗಮನಿಸಬಹುದು. ಸೆ.5ರಂದು ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ಮಿಕ್ಕಂತೆ ಸತತವಾಗಿ ಕಳೆದ 21 ದಿನಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಏರಿಳಿತ ಕಂಡಿಲ್ಲ.

ಯಾವ್ಯಾವ ನಗರದಲ್ಲಿ ಇಂಧನ ಬೆಲೆ ಎಷ್ಟಿದೆ
ನವದೆಹಲಿ: ಪೆಟ್ರೋಲ್ 101.19 ರೂ - ಡೀಸೆಲ್ 89.07 ರೂ.
ಕೋಲ್ಕತಾ: ಪೆಟ್ರೋಲ್ 101.62 ರೂ - ಡೀಸೆಲ್ 92.17 ರೂ.
ಮುಂಬೈ: ಪೆಟ್ರೋಲ್ 107.26 ರೂ- ಡೀಸೆಲ್ 96.68 ರೂ.
ಚೆನ್ನೈ: ಪೆಟ್ರೋಲ್ 98.96 ರೂ- ಡೀಸೆಲ್ 93.69 ರೂ.
ಬೆಂಗಳೂರು: ಪೆಟ್ರೋಲ್ 104.70 ರೂ - ಡೀಸೆಲ್ 94.53 ರೂ.
ತಿರುವನಂತಪುರಂ: ಪೆಟ್ರೋಲ್ 103.70 ರೂ- ಡೀಸೆಲ್ 96.13 ರೂ.
ಪಾಟ್ನಾ: ಪೆಟ್ರೋಲ್ 103.79 ರೂ- ಡೀಸೆಲ್ 95.10 ರೂ.
ಹೈದರಾಬಾದ್: ಪೆಟ್ರೋಲ್ 105.42 ರೂ- ಡೀಸೆಲ್ 97.35 ರೂ.
ನೋಯ್ಡಾ: ಪೆಟ್ರೋಲ್ 98.49 ರೂ- ಡೀಸೆಲ್ 89.64 ರೂ.
ಜೈಪುರ: ಪೆಟ್ರೋಲ್ 108.13 ರೂ- ಡೀಸೆಲ್ 98.26 ರೂ.

ಸತತ 3 ವಾರಗಳ ಕಾಲ ಸ್ಥಿರವಾದ ಪೆಟ್ರೋಲ್ ದರ
ಕಳೆದ ಶುಕ್ರವಾರ ಲೀಟರ್ ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಯಿತು. ಆ ಬಳಿಕ ಒಂದು ದಿನದ ನಂತರ ನಿನ್ನೆ ಭಾನುವಾರ ಮತ್ತೆ ಲೀಟರ್ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಆ ನಂತರ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಬದಲಾವಣೆಗಳಿಲ್ಲ. ಪೆಟ್ರೋಲ್ ದರ ಸತತ 3 ವಾರಗಳ ಕಾಲ ಸ್ಥಿರವಾಗಿಯೇ ಇದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ಹೊಸ ದರಗಳು ನಿಗದಿಯಾಗುತ್ತವೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಕಚ್ಚಾತೈಲ ಬೆಲೆ ಹೇಗೆ ನಿರ್ಧರಿತವಾಗುತ್ತದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡು 78.09 ಯುಎಸ್ ಡಾಲರ್(1 USD=74.05ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ. ಹಾಗೂ ಡೀಸೆಲ್ ಮೇಲೆ 31.80 ರೂ. ನಷ್ಟಿದೆ.












Click it and Unblock the Notifications