ಸುಂಕ ಇಳಿಕೆ ಪರಿಣಾಮ ತಗ್ಗಿದ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ, ನವೆಂಬರ್ 10: ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಪರಿಣಾಮ ಭಾರತದ ಬಹುತೇಕ ರಾಜ್ಯಗಳಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿದೆ. ಆದರೆ, ಕಳೆದ ಆರು ದಿನಗಳಿಂದ ಪ್ರಮುಖ ನಗರಗಳಲ್ಲಿ ಸತತವಾಗಿ ಬೆಲೆ ಸ್ಥಿರವಾಗಿದೆ.

ಸತತವಾಗಿ ಸರಾಸರಿ 35-40 ಪೈಸೆ ಪ್ರತಿ ಲೀಟರ್‌ನಂತೆ ಇಂಧನ ದರ ಏರಿಕೆ ಕಂಡಿತ್ತು. ನಂತರ ಕೇಂದ್ರ ಸರ್ಕಾರ ತೆರಿಗೆ ತಗ್ಗಿಸಿದ ಬಳಿಕ ಸುಮಾರು 25ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಕೆಯಾಗಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಮಾತ್ರ ಇಂಧನದ ಮೇಲಿನ ವ್ಯಾಟ್, ಸೆಸ್ ತಗ್ಗಿಸಿಲ್ಲ.

ಮೆಟ್ರೋ ನಗರಗಳಲ್ಲಿ ಇಂದು (ನ.10) ದಂದು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿಲ್ಲ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ.

ಜಾಗತಿಕವಾಗಿ ಕಚ್ಚಾತೈಲ ಬೆಲೆ ತೀವ್ರ ಏರಿಳಿತ ನಡುವೆಯೂ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲಿಲ್ಲ. ಪ್ರತಿ ಬ್ಯಾರೆಲ್ ಬೆಲೆ 66 ಯುಎಸ್ ಡಾಲರ್‌ಗಿಂತಲೂ ಕಡಿಮೆ ಮೊತ್ತಕ್ಕೂ ಕುಸಿದಿತ್ತು. ಆದರೆ, ನಂತರ ಚೇತರಿಸಿಕೊಂಡು 85 ಪ್ಲಸ್ ಡಾಲರ್ ಮೇಲಕ್ಕೇರಿತ್ತು. ವಿವಿಧ ನಗರಗಳ ಬೆಲೆ ವಿವರ ಮುಂದಿದೆ..

ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕ

ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕ

ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 101 ರು ಗಿಂತ ತಗ್ಗಿರಲಿಲ್ಲ. ಈಗ 23 ರಾಜ್ಯಗಳಲ್ಲಿ ಈಗ ಬೆಲೆ ಇಳಿಕೆಯಾಗಿದೆ. ಚಂಡೀಗಢ, ನೋಯ್ಡಾದಲ್ಲಿ ಬೆಲೆ 100 ರು ಗಿಂತ ಕೆಳಗಿದೆ.

ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 56 ಬಾರಿ ಹಾಗೂ ಡೀಸೆಲ್ 51 ಬಾರಿ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ 13 ರು ಪ್ರತಿ ಲೀಟರ್ ಹಾಗೂ ಡೀಸೆಲ್ 11 ರು ಪ್ರತಿ ಲೀಟರ್ ಆಗಿದೆ.

ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 110 ರು ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.

ದೆಹಲಿಯಲ್ಲಿ ದರ ಬುಧವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 103.97 ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 86.67ರು ಆಗಿದೆ. ದೇಶದ ವಿವಿಧ ನಗರಗಳ ದರ ಪಟ್ಟಿ ವಿವರ ಮುಂದಿದೆ...

ಕಚ್ಚಾತೈಲ ಬೆಲೆ ಹೇಗೆ ನಿರ್ಧರಿತವಾಗುತ್ತದೆ?

ಕಚ್ಚಾತೈಲ ಬೆಲೆ ಹೇಗೆ ನಿರ್ಧರಿತವಾಗುತ್ತದೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 10ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 85.12 ಯುಎಸ್ ಡಾಲರ್(1 USD=74.14ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ನಂತರ ಸರಾಸರಿ 80-85 ಪ್ಲಸ್ ಡಾಲರ್‌ನಂತೆ ಮುಂದುವರೆದಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ

ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ

ನವದೆಹಲಿ: ಪೆಟ್ರೋಲ್ 103.97ರೂ- ಡೀಸೆಲ್ 86.67 ರೂ
ಕೋಲ್ಕತಾ: ಪೆಟ್ರೋಲ್ 104.67 ರೂ- ಡೀಸೆಲ್ 89.79ರೂ
ಮುಂಬೈ: ಪೆಟ್ರೋಲ್ 109.98 ರೂ- ಡೀಸೆಲ್ 94.14 ರೂ
ಚೆನ್ನೈ: ಪೆಟ್ರೋಲ್ 101.40 ರೂ- ಡೀಸೆಲ್ 91.43 ರೂ
ಬೆಂಗಳೂರು: ಪೆಟ್ರೋಲ್ 100.58 ರೂ- ಡೀಸೆಲ್ 85.01 ರೂ
ತಿರುವನಂತಪುರಂ: ಪೆಟ್ರೋಲ್ 106.36 ರೂ- ಡೀಸೆಲ್ 93.47ರೂ
ಪಾಟ್ನಾ: ಪೆಟ್ರೋಲ್ 105.90 ರೂ- ಡೀಸೆಲ್ 91.09ರೂ
ಹೈದರಾಬಾದ್: ಪೆಟ್ರೋಲ್ 108.20 ರೂ- ಡೀಸೆಲ್ 94.62 ರೂ
ನೋಯ್ಡಾ: ಪೆಟ್ರೋಲ್ 95.30 ರೂ- ಡೀಸೆಲ್ 86.81 ರೂ
ಜೈಪುರ: ಪೆಟ್ರೋಲ್ 111.19 ರೂ- ಡೀಸೆಲ್ 95.79 ರೂ
(ಮಾಹಿತಿ ಕೃಪೆ: ಗುಡ್ ರಿಟರ್ನ್ಸ್ .ಇನ್)

ವ್ಯಾಟ್, ಸೆಸ್ ಇಳಿಸಿರುವ ರಾಜ್ಯಗಳು

ವ್ಯಾಟ್, ಸೆಸ್ ಇಳಿಸಿರುವ ರಾಜ್ಯಗಳು

ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲಿ ಇಂಧನ ದರ ದುಬಾರಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 115.52 ರೂ ನಷ್ಟಿದೆ, ಡೀಸೆಲ್ ಬೆಲೆ 99.77ರೂ ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 110 ರೂ ಗಡಿ ದಾಟಿದೆ.

ವ್ಯಾಟ್ ದರ ತಗ್ಗಿಸದ ರಾಜ್ಯಗಳು

ವ್ಯಾಟ್ ದರ ತಗ್ಗಿಸದ ರಾಜ್ಯಗಳು

ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್ ಗಢ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್, ಜಾರ್ಖಂಡ್ ರಾಜ್ಯಗಳಲ್ಲಿ ವ್ಯಾಟ್, ಸೆಸ್ ಬೆಲೆ ತಗ್ಗಿಸಲಾಗಿಲ್ಲ. ಕೇಂದ್ರ ತಗ್ಗಿಸದ ದರದಂತೆ ಬೆಲೆ ಪರಿಷ್ಕರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕಳೆದ ಬುಧವಾರ ಪೆಟ್ರೋಲ್ ಬೆಲೆ 5 ರು ಹಾಗೂ ಡೀಸೆಲ್ ಬೆಲೆ 10 ರು ಪ್ರತಿ ಲೀಟರ್ ತಗ್ಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Recommended Video

      ತಾಲಿಬಾನ್ ಗೆ ಬಿಸಿ ಮುಟ್ಟಿಸಲು ನಡೆಸಿದ ಸಭೆಯಲ್ಲಿ ಚೀನಾ,ಪಾಕಿಸ್ತಾನ‌ಕ್ಕೆ‌ ಜಾಗ‌ ಇಲ್ಲ ಯಾಕೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+