ಪೆಟ್ರೋಲ್ ಬೆಲೆ ಮತ್ತೆ ಏರಿಕೆ, ಅಬಕಾರಿ ಸುಂಕ ಇಳಿಸಲು ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 30: ದೇಶದ ಮೆಟ್ರೋ ಸಿಟಿಗಳಲ್ಲಿ ದೀಪಾವಳಿ ವೇಳೆಗೆ ಪೆಟ್ರೋಲ್ ಬೆಲೆ 100 ರು ಪ್ರತಿ ಲೀಟರ್ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ನಡುವೆ ಎರಡು ದಿನ ಸ್ವಲ್ಪ ತಗ್ಗಿದ್ದ ಪೆಟ್ರೋಲ್ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.
ಸೆಪ್ಟೆಂಬರ್ ತಿಂಗಳ ಮೊದಲಿನಿಂದ ನಾಲ್ಕು ಪ್ರತಿ ಲೀಟರ್ ನಂತೆ ಬೆಲೆ ಏರಿಕೆಯಾಗಿದೆ. ಸದ್ಯ ಸರಾಸರಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 19.48 ರು ನಷ್ಟು ಅಬಕಾರಿ ಸುಂಕವಿದ್ದರೆ, ಡೀಸೆಲ್ ಮೇಲೆ 15.33ರಷ್ಟು ಸುಂಕವಿದೆ. ಈ ಸುಂಕ ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಲಾಗುತ್ತಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ತೆರಿಗೆಯನ್ನೂ ಇಳಿಸಿವೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದು, ಡಾಲರ್ ಎದುರು ರುಪಾಯಿ ಅಪಮೌಲ್ಯ ಎಲ್ಲವೂ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಪ್ರತಿದಿನದಂದು ಇಂಧನ ಬೆಲೆ ಪರಿಷ್ಕರಣೆ ಮಾಡಿದ ಬಳಿಕ ಆಯಾ ರಾಜ್ಯಗಳು ತಮ್ಮ ಆರ್ಥಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ವ್ಯಾಟ್, ಸೆಸ್ ಸೇರಿಸಬಹುದು. ಬೇರೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಾಗಿದೆ.
ಪ್ರಮುಖ ನಗರಗಳಲ್ಲಿ ಭಾನುವಾರ(ಸೆಪ್ಟೆಂಬರ್ 30)ದಂದು ಇಂಧನ ಬೆಲೆ:
(ನಗರ, ರುಪಾಯಿ/ಪ್ರತಿ ಲೀಟರ್ ಬೆಲೆ)
ನವದೆಹಲಿ : ಪೆಟ್ರೋಲ್ 83.40, ಡೀಸೆಲ್ 74.63
ಕೋಲ್ಕತ್ತಾ: ಪೆಟ್ರೋಲ್ 85.21, ಡೀಸೆಲ್ 76.48
ಮುಂಬೈ :ಪೆಟ್ರೋಲ್ 90.75, ಡೀಸೆಲ್ 79.01
ಚೆನ್ನೈ : ಪೆಟ್ರೋಲ್ 86.70, ಡೀಸೆಲ್ 78.91
ಪುಣೆ : ಪೆಟ್ರೋಲ್ 90.52, ಡೀಸೆಲ್ 77.79
ಬೆಂಗಳೂರು : ಪೆಟ್ರೋಲ್ 84.06, ಡೀಸೆಲ್ 75.01
ಅಹಮದಾಬಾದ್ : ಪೆಟ್ರೋಲ್ 82.50, ಡೀಸೆಲ್ -80.09
ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಪ್ರತಿ ಬ್ಯಾರೆಲ್ ಬೆಲೆ 80 ಡಾಲರ್ ದಾಟಿದೆ. ಇದು 100 ಡಾಲರ್ ಪ್ರತಿ ಬ್ಯಾರೆಲ್ ಆಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.












Click it and Unblock the Notifications