ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.17ರಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

|
Google Oneindia Kannada News

ನವದೆಹಲಿ, ಏಪ್ರಿಲ್‌ 17: ಉಕ್ರೇನ್ ಹಾಗೂ ರಷ್ಯಾದ ಯುದ್ಧದ ನಡುವೆ ಭಾರತದಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಇಂದು (ಏಪ್ರಿಲ್‌ 17,2022) ಪೆಟ್ರೋಲ್, ಡೀಸೆಲ್ ಸ್ಥಿರವಾಗಿದೆ. ಇದಕ್ಕೂ ಮುನ್ನ ಕಳೆದ 17 ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆ 14ನೇ ಬಾರಿ ಹೆಚ್ಚಳವಾಗಿದೆ. ಕಳೆದ 11 ದಿನಗಳಿಂದ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರದಿದ್ದರೂ ಅದಕ್ಕೂ ಹಿಂದಿನ ವಾರ ಬೆಲೆ ಏರಿಕೆ ಆರಂಭವಾದಗಿನಿಂದ ಇಂಧನ ದರ ಒಟ್ಟು 10 ರೂಪಾಯಿ ಏರಿಕೆ ಆಗಿದೆ.

ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಏಪ್ರಿಲ್‌ 17ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಿಲ್ಲ, ಇಂಧನ ದರ ಸ್ಥಿರವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ರೂ. 105.41 ಆಗಿದೆ. ಮಂಗಳವಾರ ದೆಹಲಿಯಲ್ಲಿ ಪೆಟ್ರೋಲ್‌ಗೆ 104.61 ರೂ. ಆಗಿತ್ತು. ಬುಧವಾರ ಪರಿಷ್ಕರಣೆಯ ಬಳಿಕ ಪೆಟ್ರೋಲ್ ಬೆಲೆ ರೂ. 105.41 ಕ್ಕೆ ಏರಿಕೆ ಆಗಿತ್ತು.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಮಾರ್ಚ್ 22ರಂದು ಸುಮಾರು ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್ ದರ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

ಬೆಂಗಳೂರಿನಲ್ಲಿ ಪೆಟ್ರೋಲ್ ದರ

ಬೆಂಗಳೂರಿನಲ್ಲಿ ಪೆಟ್ರೋಲ್ ದರ

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 11 ದಿನಗಳ ಹಿಂದೆ ಪೆಟ್ರೋಲ್ ದರ 7 ಪೈಸೆ ಇಳಿಕೆ ಹೊಂದಿ, 111.09 ರೂಪಾಯಿ ಆಗಿದ್ದು ಇಂದು (ಏ.17) ದರ ಬದಲಾಗಿಲ್ಲ. ಇನ್ನು ಡೀಸೆಲ್ ಬೆಲೆಯು ಏ.7ರಂದು 7 ಪೈಸೆ ಇಳಿಕೆಯಾಗಿ 94.79 ರೂ ತಲುಪಿದ್ದು, ಇನ್ನು ದರ ಬದಲಾಗಿಲ್ಲ ಚೆನ್ನೈನಲ್ಲಿ ಪೆಟ್ರೋಲ್ ದರ ರವಿವಾರ110.85 ರೂಪಾಯಿ, ಡೀಸೆಲ್ ದರ 100.94 ರೂ ಆಗಿದೆ. ಇನ್ನು ಹೈದರಾಬಾದ್‌ನಲ್ಲಿ ಪೆಟ್ರೋಲ್ ದರ 119.49 ರೂಪಾಯಿ ಆಗಿದ್ದರೆ, ಡೀಸೆಲ್ ದರ 105.49 ರೂಪಾಯಿ ಆಗಿದೆ.

ಪೆಟ್ರೋಲ್ ಬೆಲೆ ಸ್ಥಿರತೆ

ಪೆಟ್ರೋಲ್ ಬೆಲೆ ಸ್ಥಿರತೆ

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ರೂ. 120.51 ಆಗಿದೆ. ಡೀಸೆಲ್ ಬೆಲೆ ಸ್ಥಿರವಾಗಿದ್ದು ರೂ. 104.77 ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 115.12 ರೂಪಾಯಿ, ಡೀಸೆಲ್ ದರ 99.83 ರೂಪಾಯಿ ಆಗಿದೆ. ಚಂಡೀಗಢದಲ್ಲಿ ಅತೀ ಕಡಿಮೆ ಡೀಸೆಲ್ ದರವಿದೆ. ಪ್ರತಿ ಲೀಟರ್‌ಗೆ 90.83 ರೂಪಾಯಿ ಆಗಿದೆ. ಇನ್ನು ಪೆಟ್ರೋಲ್‌ ದರವು ಕೂಡಾ ಚಂಡೀಗಢದಲ್ಲಿ ಕಡಿಮೆ ಇದೆ. 104.74 ರೂಪಾಯಿ ಆಗಿದೆ.

ಪೆಟ್ರೋಲ್‌ ಬೆಲೆಯು ನೂರರ ಗಡಿ ದಾಟಿದೆ

ಪೆಟ್ರೋಲ್‌ ಬೆಲೆಯು ನೂರರ ಗಡಿ ದಾಟಿದೆ

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಬೆಲೆಯು ನೂರರ ಗಡಿ ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ದರವು 104 ರೂಪಾಯಿಯಿಂದ 120 ರೂಪಾಯಿ ಆಸುಪಾಸಿನಲ್ಲಿದೆ. ಇನ್ನು ಡೀಸೆಲ್ ದರವು ದೇಶದ ಕೆಲವು ಪ್ರಮುಖ ನಗರದಲ್ಲಿ ನೂರರ ಗಡಿಯನ್ನು ದಾಟಿದೆ. ಹೈದರಾಬಾದ್‌, ಮುಂಬೈ, ತಿರುವನಂತಪುರ, ಭುವನೇಶ್ವರ, ಚೆನ್ನೈ, ಜೈಪುರ, ಪಾಟ್ನಾದಲ್ಲಿ ಡೀಸೆಲ್ ದರವು ನೂರರ ಗಡಿಯನ್ನು ದಾಟಿದೆ. ಉಳಿದಂತೆ ಇತರೆ ನಗರಗಳಲ್ಲಿ 90 ರೂಪಾಯಿ ಆಸುಪಾಸಿನಲ್ಲಿದೆ.

ಪ್ರತಿನಿತ್ಯ ಹೊಸ ದರ ಪಟ್ಟಿ

ಪ್ರತಿನಿತ್ಯ ಹೊಸ ದರ ಪಟ್ಟಿ

ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 111.7 ಯುಎಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಈ ಹಿಂದೆ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕಡಿತ ಮಾಡಿದ್ದವು, ಈಗ ಇಂಧನ ದರ ಏರಿಕೆಯ ನಡುವೆ ಮತ್ತೆ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

English summary
Petrol And Diesel Price Unchanged On 17th April In India: Check Rate in Your City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X