ಪೇಟಿಎಂ ವ್ಯವಹಾರ ಸ್ಥಗಿತಗೊಳ್ಳುವ ವದಂತಿ ಸುಳ್ಳು

Posted By: Chethan
Subscribe to Oneindia Kannada

ನವದೆಹಲಿ, ಜ. 10: ಡಿಜಿಟಲ್ ಪಾವತಿಯ ಸೇವಾದಾರ ಕಂಪನಿಗಳಲ್ಲೊಂದಾದ ಪೇಟಿಎಂ, ಇದೇ ತಿಂಗಳ 15ರಿಂದ ಸ್ಥಗಿತಗೊಳ್ಳಲಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸುಳ್ಳು ಎಂದು ಕಂಪನಿ ಸ್ಪಷ್ಟಪಡಿಸಿದೆ.

Paytm to stop working from January 15 is a hoax

ಪೇಟಿಎಂ ವ್ಯವಹಾರವು ಸ್ಥಗಿತಗೊಳ್ಳುವುದರಿಂದ ಅದರಲ್ಲಿ ಮೊದಲೇ ಹಣ ತುಂಬಿರುವವರು, ಅದರಲ್ಲಿನ್ನೂ ಬಾಕಿ ಉಳಿಸಿಕೊಂಡಿದ್ದರೆ, ಜನವರಿ 15ರೊಳಗೆ ಖರ್ಚು ಮಾಡಬೇಕು ಇಲ್ಲವಾದರೆ, ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಸಿಕೊಳ್ಳಬೇಕು. ಜನವರಿ 15ರ ನಂತರ ಪೇಟಿಎಂ ಪೇಮೆಂಟ್ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳಲಿರುವುದರಿಂದ ಅಲ್ಲಿರುವ ಗ್ರಾಹಕರ ಹಣ ಪುನಃ ಬಳಕೆಗೆ ಲಭ್ಯವಾಗದು ಎಂಬ ಸಂದೇಶಗಳು ಹರಿದಾಡಿದ್ದವು.

Paytm to stop working from January 15 is a hoax

ಈ ಹಿನ್ನೆಲೆಯಲ್ಲಿ, ಸ್ಪಷ್ಟನೆ ನೀಡಿರುವ ಕಂಪನಿಯು, "ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ತಪ್ಪು. ನಿಮ್ಮ ಹಣ ಎಲ್ಲಿಗೂ ಹೋಗುವುದಿಲ್ಲ. ಮತ್ಯಾವುದೇ ರೀತಿಯಲ್ಲಿ ಪರಿವರ್ತನೆಗೊಳ್ಳುವುದಿಲ್ಲ. ಅದು ಯಥಾ ಪ್ರಕಾರ ಪೇಟಿಎಂ ವ್ಯಾಲೆಟ್ ನಲ್ಲೇ ಇರಲಿದ್ದು, ಗ್ರಾಹಕರು ಎಂದಿನಂತೆ ಉಪಯೋಗಿಸಬಹುದು'' ಎಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A rumour spreading around on social network and chat platforms about Paytm to stop working from January 15, 2017 is a hoax said company
Please Wait while comments are loading...