ಸಹಕಾರ ಸಂಸ್ಥೆಗಳ ಸಾಲ ಪಾವತಿ ಅವಧಿ ವಿಸ್ತರಣೆ

Written By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್. 29 : ಸಹಕಾರ ಸಂಸ್ಥೆಗಳ ಮೂಲಕ ರಿಯಾಯ್ತಿ ಬಡ್ಡಿ ದರದಲ್ಲಿ ವಿತರಿಸಿದ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವದಿ ಕೃಷಿಸಾಲ, ಸ್ವಸಹಾಯ ಗುಂಪುಗಳ ಸಾಲಕ್ಕೆ ಸಂಬಂಧಿಸಿದಂತೆ ನವೆಂಬರ್ 1ರಿಂದ ಡಿಸೆಂಬರ್ 31ರವರೆಗೆ ಮಾಡಿದ್ದ ಅವಧಿಯನ್ನು 60ದಿನಗಳ ವರೆಗೆ ವಿಸ್ತರಿಸಲಾಗಿದೆ ಎಂದು ಸಹಕಾರ ಸಚಿವ ಮಹದೇವ ಪ್ರಸಾದ್ ತಿಳಿಸಿದರು.

ವಿಸ್ತರಿಸಿದ ಅವಧಿಯಲ್ಲಿ ಮರು ಪಾವತಿಸುವ ಸಾಲಗಳಿಗೆ ಸಾಲ ಮರುಪಾವತಿಸಿದ ದಿನಾಂಕದವರೆಗೆ ಈಗಾಗಲೇ ಜಾರಿಯಲ್ಲಿರುವ ಬಡ್ಡಿ ಸಹಾಯ ಧನ ಅವಕಾಶ ದೊರೆಯಲಿದೆ ಎಂದು ಹೇಳಿದರು.

payment period of cooperative banks loan is extended

ನೋಟುಗಳ ಅಮಾನ್ಯದ ಹಿನ್ನೆಲೆಯಲ್ಲಿ ರೈತರು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ವಿಸ್ತರಿಸಿದ ಅವಧಿಗೆ ಸಂಬಂಧಿಸಿದಂತೆ ಬಡ್ಡಿ ಸಹಾಯ ಧನವನ್ನು ಈಗಿನ ಮೂರು ತಿಂಗಳ ಅವಧಿಗೆ ಬದಲಾಗಿ ಪ್ರತೀ ತಿಂಗಳು ಕ್ಲೇಮ್ ಮಾಡುವುದು. ಈ ಬಗ್ಗೆ ಸಹಕಾರ ಸಂಘಗಳ ನಿಬಂಧಕರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Extension of the payment period of cooperative banks loan is extended by another 60 said Karnataka Cooperative minister H S Mahadeva Prasad.
Please Wait while comments are loading...