ಅನುಪಯುಕ್ತ 1700 ಕಾಯ್ದೆ ರದ್ದು ಮಾಡಲು ಕ್ರಮ: ಮೋದಿ
ಮುಂಬೈ, ಫೆ.15: ಸುಮಾರು 1700 ಅನುಪಯುಕ್ತ ಕಾಯ್ದೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ರದ್ದು ಮಾಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅನುಪಯುಕ್ತ ಕಾನೂನುಗಳನ್ನು ರದ್ದುಪಡಸುವ ಪ್ರಮುಖ ಉದ್ದೇಶವೆಂದರೆ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಇಲ್ಲಿ ಮುಕ್ತ ವಾತಾವರಣ ಕಲ್ಪಿಸಬೇಕಾಗಿದೆ. ಇಡೀ ವಿಶ್ವ ಭಾರತದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಮೋದಿ ತಿಳಿಸಿದ್ದಾರೆ.ಮುಂಬೈಯ ಪಾಶ್ಚಿಮಾತ್ಯ ಭಾರತದ ನ್ಯಾಯವಾದಿಗಳ ಸಂಘಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ಮಾತನಾಡಿದರು.
ಎಫ್ ಡಿಐಗಾಗಿ ನಿಯಮ ಸಡಿಲ: ವಿದೇಶಿ ಕಂಪನಿಗಳ ಉದ್ಯಮಿಗಳು ಇಲ್ಲಿಗೆ ಬಂದು ಬಂಡವಾಳ ಹೂಡಿಕೆ ಮಾಡಲು ಬಯಸಿದಾಗ
ಯಾವುದೇ ರೀತಿಯಲ್ಲೂ ಇಲ್ಲಿನ ನ್ಯಾಯಾಂಗ ಪದ್ಧತಿ ತೊಡಕಾಗಬಾರದು ಎಂಬುದು ಈ ರದ್ಧತಿಯ ಮೂಲ ಉದ್ದೇಶ ಎಂದು ಅವರು ಹೇಳಿದ್ದಾರೆ.

ಹಿಂದೆ ಕಾಯ್ದೆಗಳನ್ನು ಸಿದ್ಧಪಡಿಸಿದ ವೇಳೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟವಾದ ವಿವರಣೆ ಇಲ್ಲ. ಈಗ ಅದನ್ನು ಹೊಸದಾಗಿ ವ್ಯಾಖ್ಯಾನಿಸಬೇಕಾಗಿದೆ. ಹಾಗಾಗಿ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಸರಳವಾದ ಕಾನೂನು ರೂಪಿಸಲು ನ್ಯಾಯವಾದಿಗಳ ಸಂಘಟನೆಗಳು(ಬಾರ್ ಅಸೋಸಿಯೇಷನ್ಸ್) ಪ್ರಮುಖ ಪಾತ್ರ ವಹಿಸಬೇಕು. ಹಿಂದಿನಿಂದಲೂ ವಕೀಲ ಸಮುದಾಯ ಈ ದೇಶದ ಕಾನೂನು ರೂಪಣೆ ಮತ್ತು ಉತ್ತಮ ಸ್ಥಿತಿಗೆ ಮಹತ್ತರವಾದ ಕೊಡುಗೆ ನೀಡಿದೆ ಎಂದು ಮೋದಿ ಶ್ಲಾಘಿಸಿದರು.
Sharing my speech at the Sesquicentennial Function of the Advocates’ Association of Western India. http://t.co/53I1NZFcVN
— Narendra Modi (@narendramodi) February 14, 2015 ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಮುಂಚೂಣೆಯಲ್ಲಿ ನಿಂತು ಹೋರಾಡಿ ದೇಶಕ್ಕೆ ಸ್ವಾತಂತ್ರ್ಯಗಳಿಸಿಕೊಟ್ಟ ಮಹಾನ್ ವ್ಯಕ್ತಿಗಳೆಲ್ಲರೂ ವಕೀಲರೇ ಆಗಿದ್ದರು. ಬಾರ್ ಅಸೋಸಿಯೇಷನಸ್ ಸದಸ್ಯರಾಗಿದ್ದರು. ಅಂಥವರಲ್ಲಿ ಮಹಾತ್ಮಾಗಾಂಧಿ, ಸರದಾರ್ ವಲಭ ಭಾಯಿಪಟೇಲ್ ಮುಂತಾದವರು ಪ್ರಮುಖರು ಎಂದು ಮೋದಿ ಹೇಳಿದರು. ಈ ಸಂಘಟನೆಗೆ 150 ವರ್ಷಗಳ ಇತಿಹಾಸವಿದೆ ಎಂದು ಮೋದಿ ಸ್ಮರಿಸಿದರು.












Click it and Unblock the Notifications