ಕೇಳ್ರಪ್ಪೋ, ಕೇಳಿ...ಮತ್ತೆ 'ಹಲೋ' ಎಂದ ಆರ್ಕುಟ್!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ಗೆ ಸೆಡ್ಡು ಹೊಡೆಯಲು ಆರ್ಕುಟ್ ಹೊಸ ರೂಪದಲ್ಲಿ 'ಹಲೋ' ಎನ್ನುತ್ತಿದೆ. ಸಾಮಾಜಿಕ ಜಾಲತಾಣಗಳ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಆರ್ಕುಟ್ ಹಾಗೂ ಫೇಸ್ ಬುಕ್ ಜಟಾಪಟಿಯಲ್ಲಿ ಆರಂಭವಾಗುವ ದಿನಗಳು ಬರುವ ನಿರೀಕ್ಷಿಸಬಹುದಾಗಿದೆ.

ಫೇಸ್ಬುಕ್ ನಿಂದ ಮಾಹಿತಿ ಸೋರಿಕೆ ವಿವಾದ ಸುದ್ದಿಯಲ್ಲಿರುವ ಸಂದರ್ಭದಲ್ಲೇ ಅರ್ಕುಟ್ ಹೊಸ ರೂಪದಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿರುವುದಾಗಿ ಘೋಷಿಸಿಕೊಂಡಿದೆ.

ವಿಶ್ವದೆಲ್ಲೆಡೆ ಫೇಸ್ ಬುಕ್ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದರೂ, ಭಾರತದಲ್ಲಿ ಆರ್ಕುಟ್ ತನ್ನ ವೆಬ್ ಜಾಲವನ್ನು ಇನ್ನಷ್ಟು ಹರಡುತ್ತಾ ಹೆಚ್ಚೆಚ್ಚು ಜನರಿಗೆ ಹತ್ತಿರವಾಗಿದ್ದ ಕಾಲವೊಂದಿತ್ತು. 2014ರ ತನಕವೂ ಆರ್ಕುಟ್ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. ಆದರೆ, ನಂತರ ಮರೆಯಾಗಿತ್ತು.

ಫೇಸ್ಬುಕ್ಕಿಗೆ ಪರ್ಯಾಯವಾಗಿ ಅಮೇಝ್ವಿಂಗ್

ಯೂಟ್ಯೂಬ್, ಬ್ಲಾಗರ್ ಮತ್ತು ಗೂಗಲ್ ಪ್ಲಸ್ ಸೇವೆಗಳು ಹೆಚ್ಚು ಜನಪ್ರಿಯವಾಗುತ್ತಿದ್ದಂತೆ ಆರ್ಕುಟ್ ಮುಚ್ಚಿ, ಸರ್ಕಲ್ ಸುತ್ತಿದ್ದ ಗೂಗಲ್ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಪ್ರಭುತ್ವ ಕಳೆದುಕೊಂಡಿತ್ತು.

ಫೇಸ್ಬುಕ್ ಗೆ ನೋಟಿಸ್ ಜಾರಿ ಮಾಡಿದ ಭಾರತ

ಆದರೆ, ಈಗ ಭಾರತದಲ್ಲಿ 'ಹಲೋ' ಎಂಬ ಹೊಸ ಸಾಮಾಜಿಕ ಜಾಲತಾಣವನ್ನು ಆರ್ಕುಟ್ ಪರಿಚಯಿಸುತ್ತಿದ್ದೇವೆ. ವಾಸ್ತವ ಜಗತ್ತಿನೊಂದಿಗೆ ಸಂಪರ್ಕ ಏರ್ಪಡಿಸಲು ಇದನ್ನು ಅಭಿವೃದ್ಧಿಪಡಿಸಾಲಾಗಿದೆ ಎಂದು ಆರ್ಕುಟ್ ಬೈಕುಕುಕ್ಟೆನ್ ಹೇಳಿದ್ದಾರೆ. ಸದ್ಯ ಆ್ಯಪಲ್ ಐಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲೋ ಆ್ಯಪ್ ಲಭ್ಯವಿದೆ.

ಹಲೋ ಎನ್ನುತ್ತಿರುವ ಆರ್ಕುಟ್

ಹಲೋ ಎನ್ನುತ್ತಿರುವ ಆರ್ಕುಟ್

ಬ್ರೆಜಿಲ್ ನಲ್ಲಿ ಲಭ್ಯವಿರುವ ಆರ್ಕುಟ್ ರಚಿಸಿರುವ ಹಲೋ ಮೊಬೈಲ್ ಅಪ್ಲಿಕೇಷನ್, ಸುಮಾರು ಒಂದು ಮಿಲಿಯನ್ ಗೂ ಅಧಿಕ ಡೌನ್‌ಲೋಡ್ ಕಂಡಿದೆ. ಭಾರತದಲ್ಲೂ ಸದ್ಯಕ್ಕೆ ಬೀಟಾ ಆವೃತ್ತಿ ಲಭ್ಯವಿದೆ. ಮೊದಲೇ ಹೇಳಿದಂತೆ ಗೂಗಲ್ ಪ್ಲೇ ಸ್ಟೋರಿಗೆ ಹೋಗಿ Hello ಎಂದು ಸರ್ಚ್ ಕೊಡಿ Hello Network, Inc ನಿಂದ ಸಿಗುವ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ

ಆರ್ಕುಟ್ ಕನಸು ನನಸಾಯಿತು

ಆರ್ಕುಟ್ ಕನಸು ನನಸಾಯಿತು

ಟರ್ಕಿಷ್ ಸಾಫ್ಟ್ ವೇರ್ ಇಂಜಿನಿಯರ್ ಆರ್ಕುಟ್ ಅವರು 2002ರಲ್ಲಿ ಇನ್ ಸರ್ಕಲ್ ಎಂಬ ಸೋಷಿಯಲ್ ನೆಟ್ವರ್ಕ್ ಆರಂಭಿಸಿ ಸ್ಟಾನ್ ಫೋರ್ಡ್ ವಿವಿಯ ಅಲುಮ್ನಿ ಕ್ಯಾಂಪಸ್ ಸಮೂಹ ಬಳಕೆಗೆ ಬಿಟ್ಟಿದ್ದರು. ನಂತರ ಅಫಿನಿಟಿ ಇಂಜಿನ್ಸ್ ಎಂಬ ಸಂಸ್ಥೆ ಸ್ಥಾಪಿಸಿ ಇನ್ ಸರ್ಕಲ್ ಹಾಗೂ ಕ್ಲಬ್ ನೆಕ್ಸಸ್ ನ ವಾಣಿಜ್ಯ ರೂಪ ಹೊರ ತರಲು ಯತ್ನಿಸಿದರು. ಅಫಿನಿಟಿ ಇಂಜಿನ್ಸ್ ತೊರೆದು ಗೂಗಲ್ ಸೇರಿದ ಬಳಿಕ ರಚಿಸಿದ್ದೇ ಆರ್ಕುಟ್.ಕಾಂ ಎಂಬ ಸಾಮಾಜಿಕ ಜಾಲ ತಾಣ.

ಗೂಗಲ್ ತೊರೆದ ಬಳಿಕ ಹಲೋ

ಗೂಗಲ್ ತೊರೆದ ಬಳಿಕ ಹಲೋ

ಆರ್ಕುಟ್ ರಚಿಸಿದ ಹೊಸ ಜಾಲ ತಾಣಕ್ಕೆ ಆತನ ಹೆಸರು ಇಡಲು ಗೂಗಲ್ ನಿರ್ಧರಿಸಿತ್ತು. ಆದರೆ, ಅಫಿನಿಟಿ ಇಂಜಿನ್ಸ್ 2004ರಲ್ಲಿ ಗೂಗಲ್ ಹಾಗೂ ಆರ್ಕುಟ್ ವಿರುದ್ಧ ತಂತ್ರಾಂಶ ಕದ್ದ ಆರೋಪ ಹೊರೆಸಿತ್ತು. 2006ರಲ್ಲಿ ಈ ಕೇಸು ಇತ್ಯರ್ಥವಾಯಿತು. 2016ರಲ್ಲಿ ಅರ್ಕುಟ್ ಆರಂಭಿಸಿದ ಹೊಸ ಜಾಲ ತಾಣವೇ ಹಲೋ.. ಅಂದಿನಿಂದ ಇಂದಿನವರೆಗೂ ಹಲವು ಬದಲಾವಣೆ ಹಾಗೂ ಬೀಟಾ ಆವೃತ್ತಿಗಳಲ್ಲಿ ಇದರ ಪರೀಕ್ಷೆ ನಡೆಸಲಾಗಿದ್ದು, ಫೇಸ್ಬುಕ್ ಗಿಂತಲೂ ಸುರಕ್ಷಿತ ಎನ್ನಲಾಗಿದೆ.

ಹಲೋದಲ್ಲಿ ಏನೇನಿದೆ?

ಹಲೋದಲ್ಲಿ ಏನೇನಿದೆ?

ನಿಮ್ಮ ಪ್ರೊಫೈಲ್ ನಿಮ್ಮ ಇಚ್ಛೆ, ಹವ್ಯಾಸಕ್ಕೆ ತಕ್ಕಂತೆ ರೂಪಿಸಿಕೊಳ್ಳಬಹುದಾಗಿದೆ. ಮೆಸೇಜ್ ಮಾಡುವುದು, ಕಮ್ಯೂನಿಟಿ ರಚಿಸುವುದು, Jot, ಪ್ರತಿ ಪೋಸ್ಟ್ ಅಪ್ಡೇಟ್ ಹೇಗೆ ಮಾಡುವುದು ಎಂಬುದರ ಬಗ್ಗೆ ಸಹಾಯ ಸಿಗಲಿದೆ. ಇಂಗ್ಲೀಷ್ ಅಲ್ಲದೆ ಹಿಂದಿಯಲ್ಲೂ ಹಲೋ ಲಭ್ಯವಿದೆ. ಮುಂದಿನ ದಿನಗಳಲ್ಲಿ ಭಾರತದ ಪ್ರಮುಖ ಭಾಷೆಗಳಲ್ಲಿ ಲಭ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A new social networking platform 'hello', set up by the founder of the once-popular Orkut, has announced its entry into the Indian market. hello has been set up by Orkut Buyukkokten, who was the founder of Orkut that once was a leading social networking site in India and Brazil.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ