ಒರೈಯನ್ ಗೆ ವರ್ಷದ ಅತ್ಯುತ್ತಮ ಶಾಪಿಂಗ್ ಮಾಲ್ ಪ್ರಶಸ್ತಿ
ಬೆಂಗಳೂರು, ಮೇ.9: ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಕಟ್ಟಡದ ನಿರ್ಮಾಣದಲ್ಲಿ ಖ್ಯಾತಿ ಪಡೆದಿರುವ ಬ್ರಿಗೇಡ್ ಗ್ರೂಪ್ ಅವರ ಬ್ರಿಗೇಡ್ ಗೇಟ್ ವೇ ಬಳಿ ಇರುವ ಒರೈನ್ ಮಾಲ್ 2ನೇ ಇಂಡಿಯನ್ ರಿಟೇಲ್ ಅವಾರ್ಡ್ 2015 ಅತ್ಯತ್ತಮ ಮಾಲ್ ಎಂಬ ಹೆಗ್ಗಳಿಗೆ ಪ್ರಾಪ್ತವಾಗಿದೆ. ಇದಲ್ಲದೆ ಇತ್ತೀಚೆಗ 4ನೇ ಇಂಡಿಯನ್ ಇ-ರಿಟೇಲ್ ಅವಾರ್ಡ್ 2015 ನ್ನೂ ತನ್ನದಾಗಿಸಿದೆ.
ರಿಟೇಲರ್ಸ್ ಹಾಗೂ ಇ ರಿಟೇಲರ್ಸ್ ವಿಭಾಗದಲ್ಲಿ 2ನೇ ಇಂಡಿಯನ್ ರಿಟೇಲರ್ಸ್ ಅವಾರ್ಡ್ 2015 ಹಾಗೂ 4ನೇ ಇಂಡಯನ್ ಇ-ರಿಟೇಲರ್ಸ್ ಅವಾರ್ಡ್ ಗ ಳು ಏಷ್ಯಾದಲ್ಲೇ ಅತ್ಯಂತ ಘನತೆಯುಳ್ಳ ಪ್ರಶಸ್ತಿಗಳಾಗಿದೆ. ದೇಶದಲ್ಲಿನ ರಿಟೇಲ್ ಹಾಗೂ ಇ-ರಿಟೇಲ್ ವಿಭಾಗದ ವ್ಯಾಪಾರದಲ್ಲಿ ಇನ್ನಷ್ಟು ಬೆಳವಣಿಗೆ ಹಾಗೂ ಸಧೃಢಗೊಳಿಸುವ ಉದ್ದೇಶದೊಂದಿಗೆ ಹಮ್ಮಿಕೊಂಡಿದ್ದ ಅತ್ಯಂತ ದೊಡ್ಡದಾದ ಕೈಗಾರಿಕೋದ್ಯಮ ಕಾರ್ಯಕ್ರಮವಾಗಿದೆ.

ಬೆಂಗಳೂರಿನಲ್ಲಿ ಅತ್ಯಂತ ಅಚ್ಚುಕಟ್ಟಾದ ಮೂಲಸೌಕರ್ಯ ಹೊಂದಿರುವ ಮಾಲ್ ಒರೈಯನ್ ಮಾಲ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಬ್ರ್ಯಾಂಡೆಡ್ ವಸ್ತುಗಳು ಇಲ್ಲಿ ಶಾಂಪಿಂಗ್ ಗೆ ಲಭ್ಯವಿದೆ. ಝóರಾ, ಒನ್ಲಿ, ಮ್ಯಾಂಗೋ, ಸ್ವರೋಸ್ಕಿ, ಜ್ಯಾಕ್ ಎನ್ ಜಾನ್ಸ್ ಇತ್ಯಾದಿ ಎಲ್ಲಾ ವಿಧದ ಬ್ರ್ಯಾಂಡೆಡ್ ವಸ್ತುಗಳು ಒರೈಯನ್ ಮಾಲ್ ನಲ್ಲಿ ಲಭ್ಯವಿದೆ. ಗ್ರಾಹಕರಿಗೆ ಒಂದೇ ಕಡೆಯಲ್ಲಿ ಅಗತ್ಯವಾದ ಎಲ್ಲಾ ವಸ್ತುಗಳು ಲಭಿಸುತ್ತದೆ.
ಒರೈಯನ್ ಮಾಲ್ ಗೆ ಸಂದ ಪ್ರಶಸ್ತಿಗಳು
ಓರೈಯನ್ ಮಾಲ್ ಗೆ ವರ್ಷವೊಂದರಲ್ಲಿ ಸುಮಾರು 17 ಲಕ್ಷ ಮಂದಿ ಭೇಟಿ ನೀಡುತ್ತಿದ್ದು, ಬ್ರಿಗೇಡ್ ಗೇಟ್ ವೇ ಎನ್ ಕ್ಲೇವ್ ನ ಒಂದು ಭಾಗವಾಗಿದೆ. 8 ಚದರಡಿಯ ಅಂತಾರಾಷ್ಟ್ರೀಯ ಮಟ್ಟದ ಶಾಪಿಂಗ್ ಅನುಭವ ಲಭಿಸಲಿದೆ. ಕಳೆದ ಮೂರು ವರ್ಷದಲ್ಲಿ ಒರೈಯನ್ ಮಾಲ್ ಅತ್ಯುತ್ತಮ ಹಾಗೂ ಹೆಚ್ಚಿನ ಘನತೆಯುಳ್ಳ ಪ್ರಶಸ್ತಿಗಳನ್ನು ತನ್ನದಾಗಿಸಿದೆ.












Click it and Unblock the Notifications