• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

250 ದಶಲಕ್ಷಕ್ಕೂ ಅಧಿಕ ಮಂದಿ ಜೀವನೋಪಾಯಕ್ಕೆ ಅಪಾಯ

|

ಬೆಂಗಳೂರು, ಮೇ 12: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗ ನೀಡುತ್ತಿರುವ ಕ್ಷೇತ್ರವಾದ ರೀಟೇಲ್ ಕ್ಷೇತ್ರ ಸಂಕಷ್ಟಕ್ಕೆ ಒಳಗಾಗಿದೆ. ಇಲ್ಲಿ 46 ದಶಲಕ್ಷ ಭಾರತೀಯರು ಉದ್ಯೋಗ ಪಡೆದಿದ್ದಾರೆ. ಈ ಸಂಕಷ್ಟದಿಂದಾಗಿ 250 ದಶಲಕ್ಷಕ್ಕೂ ಅಧಿಕ ಜನರ ಜೀವನೋಪಾಯಕ್ಕೆ ಅಪಾಯ ಬಂದೊದಗಿದೆ.

ಒಂದು ವೇಳೆ ರೀಟೇಲ್ ಕ್ಷೇತ್ರವು ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸದಿದ್ದರೆ ಜನಸಾಮಾನ್ಯರು ಹೇಗೆ ಅಗತ್ಯ ವಸ್ತುಗಳನ್ನು ಪಡೆಯುವುದಾದರೂ ಹೇಗೆ? ರೀಟೇಲ್ ಕ್ಷೇತ್ರವು ಪುನರಾರಂಭವಾಗದಿದ್ದರೆ ಉತ್ಪಾದನಾ ವಲಯ ಹೇಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ? ರೀಟೇಲ್ ಕ್ಷೇತ್ರವು ಪುನರಾರಂಭವಾಗದಿದ್ದರೆ ಉತ್ಪಾದನಾ ಆರ್ಥಿಕತೆಯ ಭಾರತ ಉಳಿಯುವುದಾದರೂ ಹೇಗೆ?

ಚೀನಾದಿಂದ ಹೊರಬರುವ ಕಂಪನಿಗಳನ್ನು ಸೆಳೆಯೋದು ಹೇಗೆ?

ಅಸಂಘಟಿತ ಕ್ಷೇತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತಿದೆ. ಹಾಗಾದರೆ ಇದು ಸಂಘಟಿತವಾಗಿರುವ ರೀಟೇಲ್ ಕ್ಷೇತ್ರದ ಅವಕಾಶವನ್ನು ನಾವು ಕಡೆಗಣಿಸುತ್ತಿದ್ದೇವೆಯೇ? ಇದಕ್ಕೆಲ್ಲಾ ಉತ್ತರ ಶಾಪಿಂಗ್ ಮಾಲ್.

ಕೊರೊನಾ ಪರಿಣಾಮ: ಹಲವು ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಏರಿಕೆ

ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್ ಸಿಎಐ) ಪ್ರಕಾರ, ಶಾಪಿಂಗ್ ಸೆಂಟರ್ ಉದ್ಯಮವು 12,000,000 ನಾಗರಿಕರ ಜೀವನೋಪಾಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗುತ್ತಿದೆ. ಮನೋರಂಜನೆ, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಎಫ್ಎಂಸಿಜಿ, ಸರ್ವೀಸಸ್, ಸಿನೆಮಾ ಮತ್ತು ಆಹಾರ ಹಾಗೂ ಪಾನೀಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಇವರೆಲ್ಲಾ ಉದ್ಯೋಗ ಪಡೆದಿದ್ದಾರೆ. ಸಾರ್ವಜನಿಕ ಆರೋಗ್ಯ ಸಂಬಂಧಿತವಾದ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ ಮತ್ತು ಏಕರೂಪವಾಗಿ ಜಾರಿಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಉತ್ತಮವಾಗಿ ಸಜ್ಜುಗೊಂಡಿದೆ.

ರೀಟೇಲ್ ಕ್ರಿಯಾಯೋಜನೆಯು ಸಿದ್ಧ

ರೀಟೇಲ್ ಕ್ರಿಯಾಯೋಜನೆಯು ಸಿದ್ಧ

ಸರ್ಕಾರದ ಆರ್ಥಿಕತೆಯ ಬೆಳವಣಿಗೆಗೆ ಮತ್ತು ವೇಗ ತುಂಬಲು ರೀಟೇಲ್ ಕ್ರಿಯಾಯೋಜನೆಯು ಸಿದ್ಧವಾಗಿದೆ. ಶಾಪಿಂಗ್ ಮಾಲ್ ಗಳು ವೈವಿಧ್ಯತೆ ಮತ್ತು ಸುರಕ್ಷಿತವಾದ ಶಾಪಿಂಗ್ ವ್ಯವಸ್ಥೆಯನ್ನು ಕಲ್ಪಿಸಲಿವೆ. ಇಲ್ಲಿ ಗ್ರಾಹಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಸರ್ಕಾರಗಳು ಹೊರಡಿಸಿರುವ ಎಲ್ಲಾ ಆರೋಗ್ಯ ಮತ್ತು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ಶಾಪಿಂಗ್ ಮಾಲ್ ಗಳು ಅಗತ್ಯ ಮೂಲಸೌಕರ್ಯಗಳು, ಸಾಕಷ್ಟು ಸ್ಥಳಾವಕಾಶ ಮತ್ತು ಅಗತ್ಯ ಸಿಬ್ಬಂದಿಯನ್ನು ಹೊಂದಿವೆ.

ಪುನರಾರಂಭಿಸಿದರೆ ಆರ್ಥಿಕ ಪುನಶ್ಚೇತನ

ಪುನರಾರಂಭಿಸಿದರೆ ಆರ್ಥಿಕ ಪುನಶ್ಚೇತನ

ಎಲ್ಲಿಯೂ ಇಲ್ಲದ ರೀತಿಯಲ್ಲಿ ನೈರ್ಮಲ್ಯ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಿವೆ. ಈ ಎಲ್ಲಾ ಕ್ರಮಗಳ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಿಂದ ಹೊರ ಬಂದು ಸುರಕ್ಷಿತ ಶಾಪಿಂಗ್ ವಾತಾವರಣದಲ್ಲಿ ಶಾಪಿಂಗ್ ಮಾಡಬಹುದಾಗಿದೆ. ಶಾಪಿಂಗ್ ಮಾಲ್ ಗಳನ್ನು ಪುನರಾರಂಭಿಸಿದರೆ ಆರ್ಥಿಕ ಪುನಶ್ಚೇತನಕ್ಕೆ ನೆರವಾಗಲಿದೆ. ಇಷ್ಟೇ ಅಲ್ಲದೇ, ಲಕ್ಷಾಂತರ ಕಾರ್ಮಿಕರಿಗೆ ಮತ್ತು ಅವರು ಅವಲಂಬಿಸಿರುವ ವ್ಯವಹಾರಗಳನ್ನು ಮುಂದುವರಿಸಿ ಆರ್ಥಿಕವಾಗಿ ಸುಧಾರಣೆ ಕಾಣಬಹುದಾಗಿದೆ. ಈ ಮೂಲಕ ಅವರ ಜೀವನೋಪಾಯ ಸುಧಾರಣೆ ಕಾಣಲಿದೆ. ಇದಲ್ಲದೇ, ಮಾಲ್ ಗಳು ಆರಂಭವಾದರೆ ಪಾವತಿ ವ್ಯವಸ್ಥೆಗಳು, ಬ್ಯಾಂಕಿಂಗ್ ಸಂಸ್ಥೆಗಳು ತಮಗಾಗಿರುವ ಆರ್ಥಿಕ ಆದಾಯದ ಕೊರತೆಯಿಂದ ಹೊರ ಬರಬಹುದಾಗಿದೆ.

ಫೀನಿಕ್ಸ್ ಮಾಲ್ಸ್ ನ ಅತುಲ್ ರುಯಾ

ಫೀನಿಕ್ಸ್ ಮಾಲ್ಸ್ ನ ಅತುಲ್ ರುಯಾ

ಫೀನಿಕ್ಸ್ ಮಾಲ್ಸ್ ನ ವ್ಯವಸ್ಥಾಪಕ ನಿರ್ದೇಶಕ ಅತುಲ್ ರುಯಾ ಅವರು ಈ ಬಗ್ಗೆ ಮಾತನಾಡಿ, "ಉದ್ಯಮದ ಮುನ್ನೆಲೆ ಕಾರ್ಯಾಚರಣೆ ನಡೆಸದೇ ಹಿನ್ನೆಲೆ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಮಾಲ್ ಗಳಲ್ಲಿ ನಿಯಮಿತವಾದ ಕಾರ್ಯಾಚರಣೆ ಅವಧಿಯನ್ನು ನಿಗದಿಪಡಿಸುವುದು, ಸಾಮಾಜಿಕ ಅಂತರ ಶಿಷ್ಠಾಚಾರಗಳನ್ನು ಜಾರಿಗೆ ತರುವುದು, ಸಿನಿಮಾ ಮಂದಿರಗಳಲ್ಲಿ ಇಬ್ಬರ ನಡುವೆ ಒಂದು ಸೀಟನ್ನು ಖಾಲಿ ಬಿಡುವುದು, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರ ನಡುವೆ ಅಂತರ, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಪ್ರವೇಶ ದ್ವಾರಗಳಲ್ಲಿ ಉಷ್ಣಾಂಶ ಪರೀಕ್ಷೆ ಮಾಡುವುದು, ಎಲ್ಲಾ ರೀಟೇಲ್ ಶಾಪ್ ಗಳಲ್ಲಿ ಸಿಬ್ಬಂದಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಸೇರಿದಂತೆ ಇನ್ನೂ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ'' ಎಂದು ತಿಳಿಸಿದರು.

ವಾರ್ಷಿಕ 1,80,000 ಕೋಟಿ ರೂಪಾಯಿಗಳ ವಹಿವಾಟು

ವಾರ್ಷಿಕ 1,80,000 ಕೋಟಿ ರೂಪಾಯಿಗಳ ವಹಿವಾಟು

ಈ ಪರೀಕ್ಷೆ ಸಂದರ್ಭದಲ್ಲಿ ಶಾಪಿಂಗ್ ಮಾಲ್ ಗಳನ್ನು ಪುನರಾರಂಭಿಸುವುದರಿಂದ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ದೇಶದಲ್ಲಿರುವ 650 ಕ್ಕೂ ಹೆಚ್ಚು ದೊಡ್ಡ ಶಾಪಿಂಗ್ ಸೆಂಟರ್ ಗಳು ವಾರ್ಷಿಕ 1,80,000 ಕೋಟಿ ರೂಪಾಯಿಗಳ ವಹಿವಾಟು ನಡೆಸಿದರೆ, 1000 ಕ್ಕೂ ಅಧಿಕ ಸಣ್ಣ ಪ್ರಮಾಣದ ಶಾಪಿಂಗ್ ಸೆಂಟರ್ ಗಳು ಸುಮಾರು 50,000 ಕೋಟಿ ರೂಪಾಯಿಗಳ ವಹಿವಾಟನ್ನು ನಡೆಸುತ್ತವೆ ಎಂದು ಎಸ್ ಸಿಎಐ ಅಂಕಿಅಂಶ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಶಾಪಿಂಗ್ ಮಾಲ್ ಗಳನ್ನು ಶೀಘ್ರವೇ ಪುನರಾರಂಭ ಮಾಡಿದರೆ ಆರ್ಥಿಕತೆ ಸುಧಾರಣೆಯಾಗಲಿದೆ. ಇದು ಕೋವಿಡ್-19 ನಂತರದ ಜನಜೀವನವನ್ನು ಸಹಜ ಸ್ಥಿತಿಗೆ ತರುವುದಷ್ಟೇ ಅಲ್ಲ, ದೇಶದ ಆರ್ಥಿಕತೆ ಬೆಳವಣಿಗೆಗೂ ನೆರವಾಗುತ್ತದೆ.

English summary
Shopping Centres Association of India (SCAI), the shopping centre industry provides livelihood to over 12,000,000 citizens, directly and indirectly. Opening shopping malls can reboot the Indian economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X