ಆನ್ ಲೈನ್ ಬ್ಯಾಂಕಿಂಗ್ ನಿಂದ ಭೌತಿಕ ಬ್ಯಾಂಕ್ ಗೆ ಎಳ್ಳು-ನೀರು
ನವದೆಹಲಿ, ಜೂನ್ 8: ಈ ಸುದ್ದಿ ಬಹಳ ಆಸಕ್ತಿಕರವಾಗಿದೆ. ಏಕೆಂದರೆ ನೀತಿ ಆಯೋಗದ ಮುಖ್ಯ ಕಾರ್ಯದರ್ಶಿ ಅಮಿತಾಬ್ ಕಾಂತ್ ರ ಮಾತು ಕೇಳಿದರೆ. ಹ್ಞಾಂ, ಹಾಗಾ ಎಂದು ಹುಬ್ಬೇರಿಸದಿದ್ದರೆ ಹೇಳಿ. ಅಷ್ಟಕ್ಕೂ ಅವರು ಹೇಳಿದ್ದು ಏನು? ಇನ್ನು ಐದು ವರ್ಷದಲ್ಲಿ ನೀವೀಗ ನೋಡುತ್ತಿರುವ ರೀತಿಯ ಬ್ಯಾಂಕಿಂಗ್ ವ್ಯವಸ್ಥೆಯೇ ಅಸ್ತಿತ್ವದಲ್ಲಿ ಇರುವುದಿಲ್ಲವಂತೆ.
ಹೌದು. ಕಡಿಮೆ ಆಗುತ್ತಿರುವ ಬಡ್ಡಿ ದರ, ಆಧುನಿಕ ತಂತ್ರಜ್ಞಾನದ ಕಾರಣಕ್ಕೆ ಈಗ ನಡೆಯುತ್ತಿರುವ ರೀತಿಯ ಬ್ಯಾಂಕಿಂಗ್ ವಹಿವಾಟೇ ಅವಸಾನ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಗುರುವಾರ ಐಐಎಂಎಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೇರ ಬ್ಯಾಂಕಿಂಗ್ ವ್ಯವಸ್ಥೆ ಅನ್ನೋದೇ ಇರುವುದಿಲ್ಲ. ಆ ಸ್ಥಳವನ್ನು ಆನ್ ಲೈನ್ ಬ್ಯಾಂಕ್ ವ್ಯವಸ್ಥೆ ಆವರಿಸಿರುತ್ತದೆ ಅಂತ ಹೇಳಿದ್ದಾರೆ.[ಸ್ಟೇಟ್ ಬ್ಯಾಂಕ್ ಸೇವಾ ಶುಲ್ಕ ಪರಿಷ್ಕರಣೆ, ನೂತನ ದರಗಳು ಇಲ್ಲಿವೆ]

ಬ್ಯಾಂಕ್ ಗಳ ನಿರ್ವಹಣೆ ವೆಚ್ಚವೇ ಹೆಚ್ಚಾಗುತ್ತಿರುವ ಕಾರಣಕ್ಕೆ ಈಗ ನಾವೆಲ್ಲ ನೋಡುತ್ತಿರುವ, ವ್ಯವಹಾರ ನಡೆಸುತ್ತಿರುವ ಮಾದರಿಯ ಬ್ಯಾಂಕ್ ಗಳು ಬದುಕುವುದಿಲ್ಲ ಎಂದಿದ್ದಾರೆ ಅವರು. ಮೊಬೈಲ್ ಬ್ಯಾಂಕಿಂಗ್, ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಹಾರಗಳು ಹೆಚ್ಚಾಗುತ್ತವೆ. ಅವುಗಳ ಸೇವೆ ವಿಸ್ತರಣೆ ಆಗುತ್ತಲೇ ಎಲ್ಲ ರೀತಿ ಬ್ಯಾಂಕಿಂಗ್ ವ್ಯವಹಾರವೂ ಸಲೀಸಾಗುತ್ತದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.












Click it and Unblock the Notifications