ಒನ್ ಪ್ಲಸ್ 5 ಸಾಫ್ಟ್ ಗೋಲ್ಡ್ ಮೊಬೈಲ್ ಫೋನ್ ಬಿಡುಗಡೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 24: ಕಳೆದ ವರ್ಷ ಬಿಡುಗಡೆಗೊಂಡ ಒನ್ ಪ್ಲಸ್ 3/3ಟಿ ಸಾಫ್ಟ್ ಗೋಲ್ಡ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಒನ್ ಪ್ಲಸ್, ಸಾಫ್ಟ್ ಗೋಲ್ಡ್ ಒನ್ ಪ್ಲಸ್ 5 ನಿಯಮಿತ ಆವೃತಿ ಬಿಡುಗಡೆಗೆ ನಿರ್ಧರಿಸಿದೆ. ಸಾಫ್ಟ್ ಗೋಲ್ಡ್ ಒನ್‍ಪ್ಲಸ್ 5, ಒನ್‍ ಪ್ಲಸ್ ಸಾಫ್ಟ್ ಗೋಲ್ಡ್ ಗಿಂತ ಶೇ.30ರಷ್ಟು ಅತ್ಯುತ್ತಮವಾಗಿದೆ.

ಹೊಸ ಬಿಡುಗಡೆ ಕುರಿತು ಮಾತನಾಡಿದ ಒನ್ ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‍ವಾಲ್, ಅತ್ಯಂತ ಸುಂದರವಾಗಿ ವಿನ್ಯಾಸಗೊಂಡ ಸ್ಮಾರ್ಟ್‍ಫೋನ್‍ಗಳ ವಿನ್ಯಾಸಕರಾಗಿ ಅತ್ಯಾಧುನಿಕ ಒನ್‍ಪ್ಲಸ್ 5ನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಸಾಫ್ಟ್ ಗೋಲ್ಡ್ ಫಿನಿಷ್‍ನಲ್ಲಿ ಬಿಡುಗಡೆಗೊಳಿಸಲು ಅತ್ಯಂತ ಸಂತಸವಾಗುತ್ತಿದೆ.

OnePlus 5 Limited Edition Soft Gold Variant Launched, Goes on Sale in India

ದಕ್ಷ ಆಯ್ಕೆಗಳು ಮತ್ತು ಸುಂದರ ವಿನ್ಯಾಸದ ಸಮತೋಲಿತ ಮೊಬೈಲ್ ಎದುರುನೋಡುತ್ತಿರುವವರಿಗೆ ಒನ್‍ ಪ್ಲಸ್ 5 ಸಾಫ್ಟ್ ಗೋಲ್ಡ್ ಪರಿಪೂರ್ಣ ಸಾಧನ ಎಂದರು.

6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್‍ನ ಈ ಮೊಬೈಲ್ ಬೆಲೆ 32,999ರೂ. ಭಾರತದಾದ್ಯಂತ ಅಮೇಜಾನ್ ಡಾಟ್ ಇನ್ ಹಾಗೂ ಒನ್‍ ಪ್ಲಸ್‍ ಸ್ಟೋರ್ ಡಾಟ್ ಇನ್‍ಗಳಲ್ಲಿ ಮಾರಾಟವಿರುತ್ತದೆ. ಗ್ರಾಹಕರು ಬೆಂಗಳೂರಿನ ಒನ್‍ಪ್ಲಸ್ ಮಳಿಗೆಯಲ್ಲಿ ಹಾಗೂ ನೋಯ್ಡಾದ ಮಾಲ್ ಆಫ್ ಇಂಡಿಯಾದಲ್ಲಿ ಮತ್ತು ದೆಹಲಿಯ ಆಯ್ದ ಸಿಟಿವಾಕ್‍ನಲ್ಲಿ ಈ ಮೊಬೈಲ್ ಖರೀದಿಸಬಹುದು.

ಕ್ವಾಲ್‍ ಕಾಮ್‍ ಸ್ನಾಪ್‍ ಡ್ರಾಗನ್ 835 ಪ್ರೊಸೆಸರ್, 8 ಜಿಬಿ ಸಾಮರ್ಥ್ಯದವರೆಗಿನ RAMನೊಂದಿಗೆ ಒನ್‍ಪ್ಲಸ್ ಸಾಟಿಯಿಲ್ಲದ ತಾಂತ್ರಿಕ ಅನುಭವ ನೀಡುತ್ತದೆ. ಸ್ನಾಪ್‍ ಡ್ರಾಗನ್ ಪ್ರೊಸೆಸರ್ ಹಾಗೂ ಗರಿಷ್ಠ RAMನೊಂದಿಗಿನ ಭಾರತದ ಏಕೈಕ ಸ್ಮಾರ್ಟ್‍ಫೋನ್ ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
OnePlus finally launched the Soft Gold Limited Edition colour variant of OnePlus 5 smartphone in India.the new colour variant of the smartphone will only be available in limited stocks.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X