ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ ನೇಷನ್ ಒನ್ ನಂಬರ್ ಫುಲ್ ಪೋರ್ಟ್​ಬಿಲಿಟಿ

By Mahesh
|
Google Oneindia Kannada News

ಬೆಂಗಳೂರು, ಜು.03: ದೇಶದೆಲ್ಲೆಡೆ ಜು.3ರಿಂದ ಮೊಬೈಲ್ ಸಂಖ್ಯೆ ಪೋರ್ಟ್​ಬಿಲಿಟಿ ವ್ಯವಸ್ಥೆ ಜಾರಿಗೆ ಬಂದಿದೆ. ಮೊಬೈಲ್ ಸೇವೆ ಪೂರೈಕೆದಾರ ಕಂಪನಿಗಳಾದ ಏರ್​ಟೆಲ್, ವೊಡಾಫೋನ್, ಐಡಿಯಾ, ರಿಲಯನ್ಸ್, ಬಿಎಸ್​ಎನ್​ಎಲ್ ಹಾಗೂ ಎಂಟಿಎನ್​ಎಲ್ ಶುಕ್ರವಾರದಿಂದ ಪೂರ್ಣಪ್ರಮಾಣದಲ್ಲಿ ಎಂಎನ್ ಪಿ ನೀಡುವುದಾಗಿ ಘೋಷಿಸಿವೆ.

ಸದ್ಯಕ್ಕೆ ಜಾರಿಯಲ್ಲಿರುವ ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ನಿಯಮದ ಪ್ರಕಾರ ಬಳಕೆದಾರರು ಒಂದು ಟೆಲಿಕಾಮ್ ವೃತ್ತದೊಳಗೆ (ಒಂದು ಟೆಲಿಕಾಂ ವೃತ್ತ ಎಂದರೆ ಒಂದು ರಾಜ್ಯ ಅಥವಾ ನಗರಗಳಿಗೆ ಸೀಮಿತ) ಹಳೆಯ ಸಂಖ್ಯೆಗಳನ್ನು ಉಳಿಸಿಕೊಂಡು ಮೊಬೈಲ್ ಸೇವಾ ಪೂರೈಕೆದಾರರನ್ನು ಬದಲಾಯಿಸಲು ಸಾಧ್ಯ. ಹೋಂ ಟೆಲಿಕಾಂ ಸರ್ಕಲ್ ದಾಟಿದರೆ ರೋಮಿಂಗ್ ಚಾರ್ಜ್ ಹಾಗೂ ಹೆಚ್ಚುವರಿ ಎಸ್ ಟಿಡಿ ಕರೆ ದರ ನೀಡಬೇಕಾಗುತ್ತದೆ.

Nationwide Mobile Number Portability

ಸದ್ಯ ಬೇರೆ ಟೆಲಿಕಾಂ ಸರ್ಕಲ್​ನ ಸಂಖ್ಯೆಯನ್ನು ಉಪಯೋಗಿಸಿದರೆ ರೋಮಿಂಗ್ ಶುಲ್ಕ ತೆರಬೇಕಿದೆ. ಈಗ ಅಸ್ತಿತ್ವದಲ್ಲಿರುವ ಪೋರ್ಟಬಿಲಿಟಿ ಸೌಲಭ್ಯದಿಂದ ಕೇವಲ ಒಂದು ಸರ್ಕಲ್​ನಲ್ಲಿ ಮೊಬೈಲ್ ಸೇವಾ ಪೂರೈಕೆದಾರ ಕಂಪನಿಯನ್ನು ಬದಲಿಸಿಕೊಳ್ಳುವ ಅವಕಾಶವಿತ್ತು. [ಏನಿದು ನಂಬರ್ ಪೊರ್ಟೆಬಿಲಿಟಿ?]

ಈಗ ಮೊಬೈಲ್ ಸೇವಾದಾರ ಕಂಪನಿಗಳು ನೀಡುವ ಆಫರ್ ಗಳು ಒಂದಕ್ಕಿಂತ ಒಂದು ಅತ್ಯುತ್ತಮವಾಗಿವೆ. ಬೇರೊಂದು ಕಂಪನಿಯ ಆಫರ್ ನೋಡಿ ಛೇ ಆ ಸಿಮ್ ನನ್ನಲ್ಲಿರುತ್ತಿದ್ದರೆ? ಎಂಬ ಬಯಕೆ ನಿಮಗಿರಬಹುದು. ಅಥವಾ ಇಂತಹ ಆಫರ್ ಗಳಿಂದಾಗಿ ನೀವು ಹಲವು ಸಿಮ್ ಗಳ ಒಡೆಯರಾಗಿರಬಹುದು. ಇನ್ನು ಮುಂದೆ ಹಳೆಯ ನಂಬರ್ ಉಳಿಸಿಕೊಂಡೇ ನಿಮಗಿಷ್ಟವಾದ ಯಾವುದೇ ಕಂಪನಿಯ ಸಿಮ್ ಖರೀದಿಸಬಹುದು. (ಒನ್ ಇಂಡಿಯಾ ಸುದ್ದಿ)

English summary
One Nation, One Number: Bharti Airtel, Vodafone, Reliance and other service providers said they are launching full mobile number portability (MNP) from July 3. MNP allows mobile subscribers to retain their existing mobile phone number even when they change service provider.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X