ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಪ್ರಕರಣ ಹೆಚ್ಚಳ, ವರ್ಕ್ ಫ್ರಂ ಹೋಂ ವಿಸ್ತರಣೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 22: ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಐಟಿ ಕಂಪನಿಗಳು 2022ರವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವ ಕುರಿತು ಚಿಂತನೆ ನಡೆಸಿವೆ. ಈ ಮೊದಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್ ಸೇರಿದಂತೆ ಹಲವು ಐಟಿ ಕಂಪನಿಗಳು ವಾಪಸಾಗುವಂತೆ ಉದ್ಯೋಗಿಗಳಿಗೆ ಸೂಚಿಸಿದ್ದವು, ಆದರೆ ಇದೀಗ ವರ್ಕ್ ಫ್ರಂ ಹೊಂ ವಿಸ್ತರಿಸಲು ಮುಂದಾಗಿವೆ. ಆದರೆ ಈವರೆಗೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಆದರೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಹಲವು ಸಾಫ್ಟ್‌ವೇರ್ ಕಂಪನಿಗಳು ಉದ್ಯೋಗಿಗಳಿಗೆ ವಾಪಸ್ ಮರಳುವಂತೆ ತಿಳಿಸಿದ್ದಾರೆ, ಆದರೆ ದೇಶದಲ್ಲಿ ಒಟ್ಟು 200 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ, ಅವುಗಳಲ್ಲಿ ದೆಹಲಿಯೊಂದರಲ್ಲೇ 57 ಪ್ರಕರಣಗಳಿವೆ.

ವರ್ಕ್‌ ಫ್ರಂ ಹೋಂ: ಹೊಸ ಕಾನೂನು ಚೌಕಟ್ಟು ನಿರ್ಮಿಸಲು ಸರ್ಕಾರ ಸಿದ್ಧತೆವರ್ಕ್‌ ಫ್ರಂ ಹೋಂ: ಹೊಸ ಕಾನೂನು ಚೌಕಟ್ಟು ನಿರ್ಮಿಸಲು ಸರ್ಕಾರ ಸಿದ್ಧತೆ

ಕಳೆದ ತಿಂಗಳು ಕೊರೊನಾ ಪ್ರಕರಣಗಳು ಕಡಿಮೆಯಿದ್ದ ಕಾರಣ ಟಿಸಿಎಸ್ ತನ್ನ ಉದ್ಯೋಗಿಗಳಿಗೆ ಕಚೇರಿಗೆ ಬರುವಂತೆ ತಿಳಿಸಿತ್ತು, ಆದರೆ ಇದೀಗ ಎಕನಾಮಿಕ್ ಟೈಮ್ಸ್ ನೀಡಿರುವ ವರದಿಯಂತೆ, ಶೇ.10ರಷ್ಟು ಮಂದಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Omicron Threat: Work From Home To Continue Till New Year 2022?

ಇನ್ಫೋಸಿಸ್ ಬದಲಾಗುತ್ತಿರುವ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯ ವಿಧಾನವನ್ನು ಅಳವಡಿಸಿಕೊಂಡಿದೆ. ಮತ್ತೊಂದೆಡೆ ಎಚ್‌ಸಿಎಲ್ ಟೆಕ್ನಾಲಜೀಸ್ ಉದ್ಯೋಗಿಗಳನ್ನು ಮಿತಗೊಳಿಸಿದೆ. ಹೊಸ ರೂಪಾಂತರಿ ಕುರಿತು ಮೇಲ್ವಿಚಾರಣೆ ಮಾಡುತ್ತಿದೆ.

2021ರ ಅಂತ್ಯದ ವೇಳೆ ತನ್ನ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳುವುದಾಗಿ ಹೇಳಿತ್ತು, ಆದರೆ ಇದೀಗ ಶೇ.5ರಷ್ಟು ಮಂದಿ ಮಾತ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

'ವರ್ಕ್ ಫ್ರಮ್‌ ಹೋಮ್‌' ಪದ್ಧತಿಯನ್ನು ಕಾಯಂ ಆಗಿ ಅನುಸರಿಸಲು ಬಯಸುವ ಉದ್ಯೋಗಿಗಳ ವೇತನದ ಸ್ವರೂಪದಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಕಂಪನಿಗಳಿಗೆ ಕಾರ್ಮಿಕ ಸಚಿವಾಲಯವು ಶೀಘ್ರದಲ್ಲೇ ಅನುಮತಿ ನೀಡುವ ಸಾಧ್ಯತೆ ಇದೆ.

ಇದರ ಪರಿಣಾಮ ಕಂಪನಿಗಳು ಕಾಯಂ ಆಗಿ ಮನೆಯಿಂದಲೇ ಕೆಲಸ ಮಾಲು ಬಯಸುವ ಉದ್ಯೋಗಿಗಳಿಗೆ ನೀಡುವ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಕಡಿಮೆ ಮಾಡಿ, ಮೂಲ ಸೌಕರ್ಯ ವೆಚ್ಚದಲ್ಲಿ ಏರಿಕೆ ಮಾಡಲು ಅನುಮತಿ ನೀಡುವ ಸಾಧ್ಯತೆ ಇದೆ.

ಮೆಟ್ರೋ ನಗರ ಹೊರತುಪಡಿಸಿ ಇತರ ನಗರ ಅಥವಾ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸುವ ಉದ್ಯೋಗಿಗಳಿಗೆ ಎಚ್‌ಆರ್‌ಎ ಇಳಿಕೆಯಾಗುವ ಹಾಗೂ ಅದರ ಬದಲಿಗೆ ಇತರ ಅನುಕೂಲ ಕಲ್ಪಿಸುವ ಸಾಧ್ಯತೆ ಇದೆ. ಇದರಿಂದ ಬೆಂಗಳೂರು ಸೇರಿದಂತೆ ಪ್ರಮುಖ ಮೆಟ್ರೊ ನಗರಗಳಲ್ಲಿ ದುಡಿಯುವ ಟೆಕ್ಕಿಗಳ ವೇತನ ಪ್ಯಾಕೇಜ್‌ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಕೋವಿಡ್‌-19 ಬಂದ ನಂತರ ಮೆಟ್ರೋ ನಗರಗಳ ತಂತ್ರಜ್ಞಾನ ಕಂಪನಿಗಳಲ್ಲಿ ವರ್ಕ್ ಫ್ರಮ್‌ ಹೋಮ್‌ ಹಿಂದಿಗಿಂತ ಹೆಚ್ಚು ವ್ಯಾಪಕವಾಗಿತ್ತು. ಅನೇಕ ಮಂದಿ ಉದ್ಯೋಗಿಗಳು ತಮ್ಮ ಹುಟ್ಟೂರಿಗೆ ಮರಳಿದ್ದರು. ಹಲವು ಐಟಿ ಕಂಪನಿಗಳು ಇದನ್ನೇ ಮುಂದುವರಿಸಲು ನಿರ್ಧರಿಸಿವೆ.

ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವ ಸಂದರ್ಭ ಕೆಲವೊಂದು ಮೂಲಸೌಕರ್ಯ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಉದಾಹರಣೆಗೆ ವಿದ್ಯುತ್‌ ಮತ್ತು ವೈಫೈ ವೆಚ್ಚ ಇರುತ್ತದೆ. ಇದು ಕೂಡ ಭತ್ಯೆಗಳ ಭಾಗವಾಗಬೇಕಾಗುತ್ತದೆ.

ಉದ್ಯೋಗದಾತರ ದೃಷ್ಟಿಯಿಂದ ಉದ್ಯೋಗಿಯೊಬ್ಬ ಕಚೇರಿಯಿಂದ ದೂರವಿರುವ ಪಟ್ಟಣ, ಗ್ರಾಮಾಂತರ ಪ್ರದೇಶಗಳಿಗೆ ತೆರಳಿದರೆ, ಅಲ್ಲಿನ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ವೇತನ ಪ್ಯಾಕೇಜ್‌ನಲ್ಲಿ ಬದಲಾವಣೆ ಅವಶ್ಯಕವಾಗಬಹುದು. ಆದ್ದರಿಂದ ಸರಕಾರ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಯಂ ಆಗಿ ವರ್ಕ್ ಫ್ರಮ್‌ ಹೋಮ್‌ ಪದ್ಧತಿ ಆಯ್ಕೆ ಮಾಡುವ ಉದ್ಯೋಗಿಗಳಿಗೆ ಎಚ್‌ಆರ್‌ಎ ಮತ್ತು ವೃತ್ತಿ ತೆರಿಗೆಯಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ ಎಂದು ಟೀಮ್‌ಲೀಸ್‌ನ ಉಪಾಧ್ಯಕ್ಷ ಪ್ರಶಾಂತ್‌ ಸಿಂಗ್‌ ತಿಳಿಸಿದ್ದಾರೆ.

Recommended Video

ಸುಳ್ಳು ಸುದ್ದಿ ಹರಡುತ್ತಿದ್ದ ಪಾಕ್ ಚಾನೆಲ್ ಗಳ ಮೇಲೆ ಭಾರತ ಸರ್ಕಾರದ ಸರ್ಜಿಕಲ್ ಸ್ಟ್ರೈಕ್ | Oneindia Kannada

English summary
Owing to the rise in Omicron cases, major IT firms —Tata Consultancy Services (TCS), Infosys may backtrack on their previously announced ‘return to office’ plan. Though nothing has been confirmed as yet, a report published in a leading business portal said that the top software experts are now apprehensive of calling employees back to the office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X