ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯಪ್ರಿಯರಿಗೆ ಕಿಕ್ ಕೊಡುವ ಸುದ್ದಿ : ಓಲ್ಡ್ ಮಾಂಕ್ ಅಲೈವ್!

By Mahesh
|
Google Oneindia Kannada News

ಬೆಂಗಳೂರು, ಜುಲೈ15: ಮದ್ಯಪ್ರಿಯರಿಗೆ ಕಿಕ್ ಕೊಡುವ ಸುದ್ದಿ ಬಂದಿದೆ. ಭಾರತದ ಅತ್ಯಂತ ಜನಪ್ರಿಯ ರಮ್ 'ಓಲ್ಡ್ ಮಾಂಕ್' ಕಥೆ ಮುಗಿಯಿತು ಎಂದು ಹಬ್ಬಿದ್ದ 'ರಮ್ ರಾದ್ಧಾಂತ' ಸುದ್ದಿಯನ್ನು ರಮ್ ಉತ್ಪಾದಕರು ಅಲ್ಲಗೆಳೆದಿದ್ದಾರೆ.

ಮದ್ಯಪ್ರಿಯರಿಗೊಂದು ಸಂತಸದ ಸುದ್ದಿ. ಬಹುತೇಕ ಮದ್ಯಾರಾಧಕರ ನೆಚ್ಚಿನ ಪಾನೀಯವಾಗಿದ್ದ ಓಲ್ಡ್ ಮಾಂಕ್ (ಹಳೆ ಸನ್ಯಾಸಿ?) ಎಂಬ ಜನಪ್ರಿಯ ಮದ್ಯವನ್ನು ಅದರ ತಯಾರಿಕಾ ಕಂಪೆನಿ ಮೋಹನ್ ಮಿಕೇನ್ ಲಿ ಎಂಎಂಎಫ್ ಎಲ್ ನಿಷೇಧಿಸಿ, ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ ಎಂಬ ಆಘಾತಕಾರಿ ಸುದ್ದಿಯೊಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. [ಅತಿ ಹೆಚ್ಚು ಕುಡುಕರಿರುವ ಸಾಮ್ರಾಜ್ಯ ಇನ್ನಿಲ್ಲ]

ಮಾರಾಟದಲ್ಲಿ ಇಳಿಮುಖವಾಗಿದ್ದರಿಂದ ಮೋಹನ್ ಮಿಕೇನ್ ಲಿಮಿಟೆಡ್ ಕಂಪೆನಿ ತನ್ನ ಎಲ್ಲ ಓಲ್ಡ್ ಮಾಂಕ್ ಮದ್ಯ ತಯಾರಿಕೆ ಸ್ಥಗಿತಗೊಳಿಸಿ, ಮಾರುಕಟ್ಟೆಯಲ್ಲಿರುವ ಎಲ್ಲ ಸಂಗ್ರಹವನ್ನೂ ಹಿಂದಕ್ಕೆ ಪಡೆಯಲಿದೆ ಎಂದು ಸಾಮಾಜಿಕ ಮಾಧ್ಯಮಗಳು ಮಾಡಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಎಸ್ ಎನ್ ಮೈಂಗಿ ಹೇಳಿದ್ದಾರೆ.[ಆಸ್ಟೇಲಿಯಾದ ಕುಡುಕ ಕ್ರಿಕೆಟರ್ ಗೆ ನಿಷೇಧ]

ಮೋಹನ್ ಮಿಕೇನ್ ಲಿಮಿಟೆಡ್‌ನ ಉಪ ಮಹಾಪ್ರಬಂಧಕ ಎಸ್.ಎನ್.ಮೈಂಗಿ ಅವರೂ ಕೂಡ ತಮ್ಮ ನೆಚ್ಚಿನ ಉತ್ಪಾದನೆ ವಿರುದ್ಧದ ಈ ವರದಿಗಳು ನಮಗೆ ಆತಂಕ ಉಂಟುಮಾಡಿವೆ ಎಂದಿದ್ದಾರೆ. ಓಲ್ಡ್ ಮಾಂಕ್ ನಮ್ಮ ಕಂಪೆನಿಯ ಪ್ರಮುಖ ಉತ್ಪಾದನೆ. ಅದನ್ನು ತಡೆ ಹಿಡಿಯುವ ಪ್ರಶ್ನೆಯೇ ಇಲ್ಲ ಎಂದೂ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳ ಕಿತಾಪತಿ

ಸಾಮಾಜಿಕ ಜಾಲತಾಣಗಳ ಕಿತಾಪತಿ

ಓಲ್ಡ್ ಮಾಂಕ್ ಮಾರಾಟದಲ್ಲಿ ವ್ಯತ್ಯಯವಾಗಿರಬಹುದು ಆದರೆ, ಜನಪ್ರಿಯ ಬ್ರ್ಯಾಂಡ್ ಸಾಯಿಸಲು ಯಾವುದೇ ಸಂಸ್ಥೆ ಸುಲಭಕ್ಕೆ ಮುಂದಾಗುವುದಿಲ್ಲ. ಆದರೆ, ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ಓಲ್ಡ್ ಮಾಂಕ್ ಕಥೆ ಮುಗಿಯಿತು ಎಂಬ ಸುದ್ದಿ ಹಬ್ಬುತ್ತಿದ್ದಂತೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರ ಕೃಪೆ: ಓಲ್ಡ್ ಮಾಂಕ್ ವೆಬ್ ಸೈಟ್

ಓಲ್ಡ್ ಮಾಂಕ್ ಭಾರತದ ವಿದೇಶಿ ಮದ್ಯ

ಓಲ್ಡ್ ಮಾಂಕ್ ಭಾರತದ ವಿದೇಶಿ ಮದ್ಯ

ಉತ್ತರಪ್ರದೇಶದ ಗಾಜಿಯಾಬಾದಿನಿಂದ ವಿಶ್ವದ ಅನೇಕ ಕಡೆ ಪ್ರಚಾರಗೊಂಡ ರಮ್ ಬ್ರ್ಯಾಂಡ್. ಶೇ 42.8ರಷ್ಟು ಎಥಾನಾಲ್ ಹೊಂದಿರುವ ರಮ್ ಜೊತೆಗೆ ಥಮ್ಸ್ ಅಪ್ ಚೆನ್ನಾಗಿ ಬಳಸಲಾಗುತ್ತದೆ. ಇಲ್ಲದಿದ್ದರೆ ಗಾಢವಾದ ಕೋಲಾ, ಸೋಡಾ ಅಥವಾ ನೀರು ಬೆರೆಸಿಕೊಂಡು ಕುಡಿಯಬಹುದು. ರುಚಿ ಹೆಚ್ಚಲು ಸ್ವಲ್ಪ ನಿಂಬೆ ರಸ ಬೆರೆಸಬಹುದು.

ಹಳೆ ಸನ್ಯಾಸಿ ಮದ್ಯದ ಬಾಟಲ್‌ ಏನ್ಮಾಡಲಿ

ಹಳೆ ಸನ್ಯಾಸಿ ಮದ್ಯದ ಬಾಟಲ್‌ಗಳನ್ನು ಖರೀದಿಸಿ ಮನೆಗಳಲ್ಲಿ ಶೇಖರಿಸಿಟ್ಟುಕೊಳ್ಳುವ ಪ್ರಯತ್ನಗಳು ನಡೆಯಿತಂತೆ. ಹಳೆ ಬಾಟಲಿಗಳನ್ನು ಏನು ಮಾಡಬೇಕು ಎಂಬುದಕ್ಕೆ ತರಾವರಿ ಸಲಹೆಗಳು ಬಂದಿತ್ತು.

ಸೆಲ್ಫಿ ವಿತ್ ಡಾಟರ್ ಆಯ್ತು ಈಗ ವಿತ್ ರಮ್

ಸೆಲ್ಫಿ ವಿತ್ ಡಾಟರ್ ಆಯ್ತು ಈಗ ವಿತ್ ಓಲ್ಡ್ ಮಾಂಕ್ ರಮ್ ತೆಗೆದುಕೊಳ್ಳುವ ಸಮಯ.

ಮೋಹನ್ ಸಂಸ್ಥೆಗೆ ಆಘಾತಕಾರಿಯಾಗಿತು

ಮೋಹನ್ ಸಂಸ್ಥೆಗೆ ಆಘಾತಕಾರಿಯಾಗಿತು

ಮೆಕ್ ಡೋನಾಲ್ಡ್ ನಂ.1 ಸೆಲೆಬ್ರೇಷನ್ ರಮ್ ಮುಂದೆ ಓಲ್ಡ್ ಮಾಂಕ್ ಮಂಕಾದರೂ xxx ರಮ್ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ರಷ್ಯಾ, ಯುಎಸ್ಎ, ಯುಕೆ, ಜಪಾನ್, ಯುಎಇ, ಫಿನ್ ಲ್ಯಾಂಡ್, ನ್ಯೂಜಿಲೆಂಡ್, ಕೆನಡಾದಲ್ಲೂ ಓಲ್ಡ್ ಮಾಂಕ್ ಕಾಲಿಟ್ಟಿದ್ದಾನೆ. ಆದರೆ, ದೇಶದ ಅನೇಕ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಓಲ್ಡ್ ಮಾಂಕ್ ಮದ್ಯದ ವಹಿವಾಟು ಕುಸಿದಿದೆ ಎಂಬ ಸುದ್ದಿ ಮೋಹನ್ ಸಂಸ್ಥೆಗೆ ಆಘಾತಕಾರಿಯಾಗಿ ಪರಿಣಮಿಸಿದೆ.

ಎಲ್ಲರೂ ಶಾಂತರಾಗಿ ಓಲ್ಡ್ ಮಾಂಕ್ ಇನ್ನೂ ಜೀವಂತ

ಎಲ್ಲರೂ ಶಾಂತರಾಗಿ ಓಲ್ಡ್ ಮಾಂಕ್ ಇನ್ನೂ ಜೀವಂತ ಇದ್ದಾನೆ.

ಮ್ಯಾಗಿಯೂ ಓಲ್ಡ್ ಮಾಂಕ್ ಗೂ ವ್ಯತ್ಯಾಸವಿದೆ

ಮ್ಯಾಗಿಯೂ ಓಲ್ಡ್ ಮಾಂಕ್ ಗೂ ವ್ಯತ್ಯಾಸವಿದೆ, ತುಂಬಾ ಭಾವನಾತ್ಮಕ ಸಂಬಂಧವಿದೆ.

ಓಲ್ಡ್ ಮಾಂಕ್ ಉಳಿಸೋಣ ಬನ್ನಿ

ಮಹಾ ನಾಗರಿಕರೇ, ಓಲ್ಡ್ ಮಾಂಕ್ ಉಳಿಸೋಣ ಬನ್ನಿ

ರಾಷ್ಟ್ರೀಯ ಪಾನೀಯಕ್ಕೆ ಈ ಸ್ಥಿತಿಯೇ

ರಾಷ್ಟ್ರೀಯ ಪಾನೀಯಕ್ಕೆ ಈ ಸ್ಥಿತಿಯೇ, ಅಯ್ಯೋ ನಾನು ತಡೆದುಕೊಳ್ಳಲಾರೆ.

ಮುಂದಿನ ಬಾರಿ ನನ್ನ ಗೋತ್ರ ಕೇಳಿದ್ರೆ

ಮುಂದಿನ ಬಾರಿ ದೇಗುಲದಲ್ಲಿ ನನ್ನ ಗೋತ್ರ ಕೇಳಿದ್ರೆ ನಾನು ಓಲ್ಡ್ ಮಾಂಕ್ ಎನ್ನುತ್ತೇನೆ.

ತುಷಾರ್ ಗಾಂಧಿ ಹೇಳಿದ ಮಾತೇ ಇದು

ತುಷಾರ್ ಗಾಂಧಿ ಹೇಳಿದ ಮಾತೇ ಇದು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ.

ಓಲ್ಡ್ ಮಾಂಕ್ ಇಷ್ಟಪಡದೇ ಇರಲು ಸಾಧ್ಯವೇ

ಓಲ್ಡ್ ಮಾಂಕ್ ಇಷ್ಟಪಡದೇ ಇರಲು ಸಾಧ್ಯವೇ, ಅದ್ಭುತ ಅನುಭವ.

English summary
Old Monk not dying confirms Rum Makers Indian Made Foreign Liquor (IMFL) company headed by Mohan Meakin. Old Monk commonly known as 'OMR' is an iconic vatted Indian dark rum, launched in 19th December 1954.It is blended and aged for a minimum of 7 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X