ಅತಿ ಹೆಚ್ಚು ಕುಡುಕರಿರುವ ಸಾಮ್ರಾಜ್ಯ ಇನ್ನಿಲ್ಲ

ತಿರುವನಂತಪುರಂ, ಅ.30: ಭಾರತದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯ ಎನಿಸಿರುವ ಕೇರಳದ ಕುಡುಕರಿಗೆ ಆಘಾತಕಾರಿ ಸುದ್ದಿ ಬಂದಿದೆ. ರಾಜ್ಯದ ಎಲ್ಲಾ ಬಾರ್ ಗಳನ್ನು ಮುಚ್ಚುವಂತೆ ಕೇರಳ ಸರ್ಕಾರ ನೀಡಿದ್ದ ಆದೇಶವನ್ನು ಇಲ್ಲಿನ ಹೈಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ಕೇರಳದ ಉಮ್ಮನ್ ಚಾಂಡಿ ಸರ್ಕಾರ ಮದ್ಯ ನಿಷೇಧ ಕಾಯಿದೆ ಜಾರಿಗೊಂಡರೆ 700ಕ್ಕೂ ಅಧಿಕ ಬಾರ್ ಗಳು ಮುಚ್ಚಬೇಕಾಗುತ್ತದೆ.

ಹೈಕೋರ್ಟ್ ಆದೇಶದ ನಂತರ ಅತಿ ಹೆಚ್ಚು ಮದ್ಯ ಮಾರಾಟ ರಾಜ್ಯ ಎಂಬ ಕುಖ್ಯಾತಿಯಿಂದ ಕೇರಳ ಪಾರಾಗಲಿದೆ.ಅದರೆ, ಅತಿ ಹೆಚ್ಚು ಕುಡುಕರನ್ನು ಹೊಂದಿರುವ ರಾಜ್ಯ ಎಂಬ ಟ್ಯಾಗ್ ಕಳಚುವುದೋ ಇಲ್ಲವೋ ಹೇಳಲುಬರುವುದಿಲ್ಲ. ಕೇರಳ ಹೈಕೋರ್ಟಿನ ಅದೇಶದಿಂದ ಬಾರ್ ಮಾಲೀಕರಿಗೆ ಭಾರಿ ಹಿನ್ನಡೆಯುಂಟಾಗಿದೆ. ಅದರೆ, ನ್ಯಾಯಾಲಯದ ಆದೇಶದಲ್ಲೂ ಕುಡುಕರಿಗೆ ಸ್ವಲ್ಪ ಆಶಾದಾಯಕ ಅಂಶವಿದೆ. [ಮದ್ಯಪಾನ ನಿಷೇಧಕ್ಕೆ 'ಸುಪ್ರೀಂ' ಬ್ರೇಕ್]

No more alcohol in Kerala

ಫೈವ್ ಸ್ಟಾರ್ ಹೋಟೆಲ್ ಗಳಲ್ಲದೆ 4 ಸ್ಟಾರ್ ಹಾಗೂ ಹೆರಿಟೇಜ್ ಹೋಟೆಲ್ ಗಳ ಬಾರ್ ಮಾನ್ಯತೆಗಳನ್ನು ರದ್ದು ಮಾಡದಂತೆ ಸೂಚಿಸಲಾಗಿದೆ. ಹೀಗಾಗಿ 21 ಫೈವ್ ಸ್ಟಾರ್ ಹೋಟೆಲ್, 44 ಫೋರ್ ಸ್ಟಾರ್ ಹಾಗೂ 8 ಹೆರಿಟೇಜ್ ಹೋಟೆಲ್ ಗಳಿಗೆ ಮಾನ್ಯತೆ ಸಿಕ್ಕಿದೆ. [ಹೈವೇ ರಸ್ತೆ ಮಧ್ಯೆ ಮದ್ಯ ಸಿಗೋಲ್ಲಾರೀ]

'ಹೈಕೋರ್ಟ್ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ' ಎಂದು ಕೇರಳದ ಹೋಟೆಲ್ ಸಂಘದ ಅಧ್ಯಕ್ಷ ಜಿ ಸುಧೇಶ್ ಕುಮಾರ್ ತಿಳಿಸಿದ್ದಾರೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾರ್ ಮಾಲೀಕರು ಹೈಕೋರ್ಟಿನಲ್ಲಿ ಸುಮಾರು 82 ಅರ್ಜಿ ಹಾಕಿದ್ದರು. [ದೇವರ ನಾಡಿನ ಮೇಲೆ ಮೋದಿ ಕಣ್ಣು]

ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವನ್ನು ಕೊಟ್ಟಿದ್ದ ರಾಜ್ಯಸರ್ಕಾರ, ಅವುಗಳೂ ಕೂಡ ಭಾನುವಾರ ಮಧ್ಯ ಮಾರದೆ ಒಣ ದಿನವನ್ನು ಅನುಸರಿಸಬೇಕು ಎಂದು ತಾಕೀತು ಮಾಡಿತ್ತು. ಮದ್ಯ ಮಾರಾಟ ನಿಷೇಧದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 6000 ಕೋಟಿ ರು ನಷ್ಟವಾಗಲಿದೆ. [ಮುನ್ನಾರ್ ಗೆ ಹಿನ್ನಡೆ, ನಮ್ಮ ಕೊಡಗು ಈಗ ನಂ 1]

ಸರ್ಕಾರದ ನಿರ್ಣಯದ ವಿರುದ್ಧ ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸೆ.30 ವರೆಗೆ ಈ ಆದೇಶವನ್ನು ತಡೆ ಹಿಡಿದು, ಫೈವ್ ಸ್ಟಾರ್ ಹೋಟೆಲ್ ಗಳಿಗೆ ಕೊಟ್ಟಿರುವ ಅವಕಾಶ ತರ್ಕಹೀನ ಎಂದಿತ್ತು. ಈಗ ಹೈಕೋರ್ಟ್ ಬಾರ್ ಮಾಲೀಕರಿಗೆ ಕಹಿ ಸುದ್ದಿ ನೀಡಿದೆ. ಒಟ್ಟಾರೆ, ಕೇರಳದಲ್ಲಿ ಬಾರ್ ಬಂದ್ ಆದ ಮೇಲೆ ಗಡಿಭಾಗದ ಕಾಸರಗೋಡಿನಲ್ಲಿ ಮದ್ಯ ಮಾರಾಟಗಾರರಿಗೆ ಬಂಪರ್ ಲಾಟರಿ ಹೊಡೆಯುವುದು ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+