ಉಬರ್ ಈಟ್ಸ್ ಗೆ ಸೆಡ್ಡು ಹೊಡೆಯಲು ಫುಡ್ ಪಾಂಡಾವನ್ನು ಖರೀದಿಸಿದ ಓಲಾ
ಬೆಂಗಳೂರು, ಡಿಸೆಂಬರ್ 19: ಜರ್ಮನಿ ಮೂಲದ ಫುಡ್ ಪಾಂಡಾ ಸಂಸ್ಥೆಯ ಭಾರತ ವಿಭಾಗವನ್ನು ಓಲಾ ಸಂಸ್ಥೆ ಖರೀದಿಸಿದೆ. ಇದಲ್ಲದೆ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿ ನವೋದ್ಯಮ ಸ್ಥಾಪನೆಗೆ ಓಲಾ ಮುಂದಾಗಿದೆ.
ಎಎನ್ಐ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್ ಒಡೆತನದ ಓಲಾ ಹಾಗೂ ಜರ್ಮನಿಯ ಹೀರೋ ಎಜಿಯ ಸ್ಟಾರ್ ಅಪ್ ಕಂಪನಿ ಫುಡ್ ಪಾಂಡಾ, ಇಂಡಿಯಾವನ್ನು ಖರೀದಿಸಿದೆ.
ಫುಡ್ ಪಾಂಡಾ ಸಂಸ್ಥೆಯ ಸಮಸ್ತ ವ್ಯವಹಾರ, ಷೇರುಗಳು ಎಲ್ಲವೂ ಓಲಾ ಪಾಲಾಗಲಿದೆ. ಈ ಮೂಲಕ ಆನ್ ಲೈನ್ ಫುಡ್ ಡೆಲಿವರಿ ಕ್ಷೇತ್ರಕ್ಕೆ ಓಲಾ ಅಧಿಕೃತವಾಗಿ ಕಾಲಿಡುತ್ತಿದೆ.

ಈಗಾಗಲೇ ಜೊಮಾಟೋ, ಸ್ವಿಗಿ ಹಾಗೂ ಓಲಾದ ದೊಡ್ಡ ಪ್ರತಿಸ್ಪರ್ಧಿ ಉಬರ್ ಸಂಸ್ಥೆಯ ಉಬರ್ ಈಟ್ಸ್ ಜತೆ ಓಲಾ ಪೈಪೋಟಿ ನಡೆಸಬೇಕಿದೆ. ಈ ಹಿಂದೆ 2014ರಲ್ಲಿ ಓಲಾ ಕೆಫೆ ಆರಂಭಿಸಿ ಕೈಸುಟ್ಟುಕೊಂಡಿತ್ತು.
ಈಗ ಆನ್ ಲೈನ್ ಫುಡ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಫುಡ್ ಪಾಂಡಾ ಜತೆ ಕೈಜೋಡಿಸುವ ಮೂಲಕ ಉತ್ತಮ ಸೇವೆ ನೀಡುತ್ತೇವೆ ಎಂದು ಓಲಾ ಸಿಇಒ ಭವಿಶ್ ಅಗರವಾಲ್ ಹೇಳಿದ್ದಾರೆ.
ಬೆಂಗಳೂರು ಮೂಲದ ಓಲಾ ಕಂಪನಿ ಇತ್ತೀಚೆಗೆ ಸಾಫ್ಟ್ ಬ್ಯಾಂಕ್ ಗ್ರೂಪ್ ಹಾಗೂ ಟೆಂಸೆಂಟ್ ಹೋಲ್ಡಿಂಗ್ಸ್ ನಿಂದ 1.1 ಬಿಲಿಯನ್ ಡಾಲರ್ ಪಡೆದು ಹೂಡಿಕೆ ಮಾಡಿದೆ.











Click it and Unblock the Notifications