ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಅವಧಿಯಲ್ಲಿ NEFT ಮೂಲಕ ಹಣ ವರ್ಗಾವಣೆ ಸಾಧ್ಯವಿಲ್ಲ: ಆರ್‌ಬಿಐ

|
Google Oneindia Kannada News

ನವದೆಹಲಿ, ಮೇ 17: ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವ ಗ್ರಾಹಕರ ಗಮನಕ್ಕೆ, ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ವ್ಯವಸ್ಥೆ ಮೇ 23ರಂದು 14 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನದ ತನಕ ಎನ್‌ಇಎಫ್‌ಟಿ ಮೂಲಕ ಹಣ ವರ್ಗಾವಣೆ ಸಾಧ್ಯವಿಲ್ಲ, ತಾಂತ್ರಿಕ ಅಪ್ಗ್ರೇಡ್‌ಗೆ ಒಳಪಡುತ್ತಿದೆ. ಮೇ 23 ರ ಮಧ್ಯಾಹ್ನ 14:00 ಗಂಟೆ ನಂತರ ಎಂದಿನಂತೆ ಸೇವೆ ಲಭ್ಯವಾಗಲಿದೆ ಎಂದು ಆರ್‌ಬಿಐ ಸೂಚಿಸಿದೆ.

ಈ ಬಗ್ಗೆ ಗ್ರಾಹಕರಿಗೆ ತಿಳಿಸುವಂತೆ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶಿಸಿದೆ. ಈ ಅವಧಿಯಲ್ಲಿ ಆರ್‌ಟಿಜಿಎಸ್‌ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಆರ್‌ಬಿಐ ತಿಳಿಸಿದೆ.

ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ವ್ಯವಸ್ಥೆ ದಿನದ 24 ಗಂಟೆಗಳ ಕಾಲ, ವರ್ಷದ 365 ದಿನಗಳ ಕಾಲ ಲಭ್ಯವಿರಲಿದೆ.

No NEFT service for 14 hours on May 23 due to technical upgrade

ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ (NEFT) ಎಂಬುದು ಆನ್ ಲೈನ್ ಮೂಲಕ ಹಣ ರವಾನೆ ಮಾಡುವ ವಿಧಾನವಾಗಿದೆ. ಐಎಫ್ ಎಸ್ ಸಿ ಕೋಡ್ ಬಳಸಿ ಹಣ ರವಾನೆ ಮಾಡಬಹುದಾಗಿದ್ದು, ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆಯಾಗುತ್ತದೆ. ಹಣ ರವಾನೆ ಮಾಡುವಾಗ ಫಲಾನುಭವಿಯ ಖಾತೆ ಸಂಖ್ಯೆಯನ್ನು ಸೇರಿಸಬೇಕು. ನಂತರ ವರ್ಗಾವಣೆ ಮಾಡಬೇಕಾದ ಹಣವನ್ನು ನಮೂದಿಸಬೇಕು. ಒಂದು ದಿನಕ್ಕೆ 10 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ.

NEFT ಹಣ ವರ್ಗಾವಣೆಯಲ್ಲಿ ಬದಲಾವಣೆ, ಶುಲ್ಕ? ಮಿತಿ ಎಷ್ಟು?NEFT ಹಣ ವರ್ಗಾವಣೆಯಲ್ಲಿ ಬದಲಾವಣೆ, ಶುಲ್ಕ? ಮಿತಿ ಎಷ್ಟು?

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಗಳು NEFT ಸೌಲಭ್ಯದಿಂದ ಹಣ ವರ್ಗಾವಣೆಗಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ.

ಸಾಮಾನ್ಯವಾಗಿ ಗ್ರಾಹಕರು ಭಾರಿ ಮೊತ್ತದ ಹಣವನ್ನು ವರ್ಗಾವಣೆ ಮಾಡಲು ಆರ್‌ಟಿಜಿಎಸ್‌ ಸೌಲಭ್ಯ ಬಳಸುತ್ತಾರೆ. ಈ ಮುಂಚೆ ಎಸ್‍ಬಿಐ, ನೆಫ್ಟ್ ಗೆ 1 ರಿಂದ 5 ರೂ. ಹಾಗೂ ಆರ್‌ಟಿಜಿಎಸ್‌ ಗೆ 5ರಿಂದ 50 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿತ್ತು.ಆದರೆ, ಆರ್ ಬಿಐ ಸೂಚನೆ ಮೇರೆಗೆ ಶುಲ್ಕ ತೆಗೆದು ಹಾಕಲಾಗಿದೆ.

English summary
National Electronic Funds Transfer (NEFT) system for online transfer of funds will remain unavailable for 14 hours from Saturday mid-night till Sunday afternoon due technical upgrade, the Reserve Bank of India said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X