ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ : ರಾಜ್ಯಗಳಿಂದ ವಿರೋಧ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 22: ಪೆಟ್ರೋಲ್ ಹಾಗೂ ಡೀಸೆಲ್ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಬಹುತೇಕ ಎಲ್ಲಾ ರಾಜ್ಯಗಳು ವಿರೋಧಿಸಿವೆ. ಹೀಗಾಗಿ ಇಂಧನವನ್ನು ಜಿಎಸ್ಟಿಗೆ ಒಳಪಡುವ ಸಾಧ್ಯತೆ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಜಿಎಸ್ಟಿ ಜಾರಿಗೆ ಬಂದಿತ್ತು. ಆದರೆ, ಪೆಟ್ರೋಲ್, ಡೀಸೆಲ್, ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ವೈಮಾನಿಕ ಇಂಧನವನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ ಹಲವಾರು ಬಾರಿ ಚರ್ಚೆಗಳು ನಡೆದಿವೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೂ ಸಹ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರಬೇಕಿದೆ ಎಂದು ಹೇಳಿದ್ದರು.

ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

ಆದರೆ, ಕಳೆದ ಆಗಸ್ಟ್ 4ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಎಲ್ಲಾ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ಜಿಎಸ್ಟಿ: ಜನ ಸಾಮಾನ್ಯರ 5 ಈಡೇರದ ನಿರೀಕ್ಷೆಗಳುಜಿಎಸ್ಟಿ: ಜನ ಸಾಮಾನ್ಯರ 5 ಈಡೇರದ ನಿರೀಕ್ಷೆಗಳು

ಒಂದು ವೇಳೆ ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್ ಟಿ ಕೆಳಗೆ ತಂದುಬಿಟ್ಟರೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಇದರಿಂದ ಬರುತ್ತಿರುವ ಆದಾಯ ಶೇ 50ರಷ್ಟು ಕುಸಿದು ಹೋಗುತ್ತದೆ. ಜಿಎಸ್ ಟಿ ಅಡಿಯಲ್ಲಿ ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಪ್ರವೇಶ ತೆರಿಗೆ ತೆಗೆದಿರುವುದರಿಂದ ಕರ್ನಾಟಕ ಸರಕಾರಕ್ಕೆ ಬರಬೇಕಾದ 200 ಕೋಟಿ ಆದಾಯ ತಪ್ಪಿದೆ.

 20 ಸಾವಿರ ಕೋಟಿ ರೂ.ಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್

20 ಸಾವಿರ ಕೋಟಿ ರೂ.ಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್

ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂ.ಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನೀಡಬೇಕಾಗುತ್ತದೆ.

ಅಲ್ಲದೇ, ರಾಜ್ಯಗಳು ತುರ್ತು ಪರಿಸ್ಥಿತಿಯಲ್ಲಿ ಇಂಧನದ ಮೇಲೆ ತೆರಿಗೆ ಹೆಚ್ಚಿಸುವ ಆಯ್ಕೆಯನ್ನು ಮುಕ್ತವಾಗಿಟ್ಟುಕೊಳ್ಳಲು ಬಯಸಿವೆ. ಕೇಂದ್ರ ಸರ್ಕಾರ ಪ್ರಸಕ್ತ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 19.48 ರೂ. ಹಾಗೂ ಡೀಸೆಲ್ ಮೇಲೆ 15.33 ರೂ. ತೆರಿಗೆ ವಿಧಿಸುತ್ತಿದೆ. ರಾಜ್ಯಗಳು ವ್ಯಾಟ್ ಹೇರುತ್ತಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎರಡೂ ಇಂಧನಗಳ ಮೇಲಿನ ಮಾರಾಟ ತೆರಿಗೆ
ಅತಿ ಕಡಿಮೆ ಶೇ.6ರಷ್ಟಿದೆ.

ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12

ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12

ಮತ್ತೊಂದೆಡೆ ಮುಂಬೈನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12 ಗಳಷ್ಟಿದೆ. ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇ.26ರ ವ್ಯಾಟ್ ಹೇರಲಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದನ್ನು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸಮರ್ಥಿಸಿಕೊಂಡಿದ್ದು, ಇದರಿಂದ ಬರುವ ಆದಾಯದಿಂದ ಹಿಂದಿನ ಯುಪಿಎ ಸರ್ಕಾರ ಪಾವತಿಸದೇ ಬಾಕಿ ಉಳಿಸಿದ್ದ ತೈಲ ಸಬ್ಸಿಡಿ
ನಿಭಾಯಿಸಲಾಗುತ್ತಿದೆ. ಅಲ್ಲದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಕೆಯಾಗುತ್ತಿದೆ
ಎಂದು ಹೇಳಿವೆ.

ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 38 ರೂಪಾಯಿ

ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 38 ರೂಪಾಯಿ

ಒಂದು ವೇಳೆ ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ ಬಂದ್ರೆ ಈಗ ಸರಾಸರಿ 78 ರು ನಷ್ಟಿರುವ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 38 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದೆ. ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಆದರೆ, ಈ ಎಲ್ಲಾ ಲೆಕ್ಕಾಚಾರ ಗರಿಷ್ಠ ಶೇ 18ರಷ್ಟು ತೆರಿಗೆ ವಿಧಿಸಿದರೆ ಬರುವ ಮೊತ್ತವಾಗಿದೆ. ಆದರೆ, ಜಿಎಸ್ಟಿ ವ್ಯಾಪಿಗೆ ಬಂದರೆ ಶೇ 5 ರಿಂದ ಶೇ 28ರಷ್ಟು ವಿಧಿಸಬಹುದಾಗಿದೆ. ಹೀಗಾಗಿ, ಶೇ 28ರಷ್ಟು ಜಿಎಸ್ಟಿ ಹೇರಿಕೆಯಾದರೆ ಜತೆಗೆ ಆಯಾ ರಾಜ್ಯಗಳ ಮಾರಾಟ ತೆರಿಗೆ, ಸೆಸ್ ಸೇರಿಸಿದರೆ ತೈಲ ಬೆಲೆ ಈಗಿನಷ್ಟೇ ಆಗಲಿದೆ. ಉದಾಹರಣೆಗೆ ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಶೇ 27ರಷ್ಟಿದ್ದರೆ, ಡೀಸೆಲ್ ಮೇಲೆ 17.2ರು ಪ್ರತಿ ಲೀಟರ್ ಗೆ ಪಡೆಯಲಾಗುತ್ತಿದೆ. ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 39.12ರಷ್ಟಿದೆ, ತೆಲಂಗಾಣದಲ್ಲಿ ಶೇ26ರಷ್ಟಿದೆ.

ಇನ್ನು ಅಬಕಾರಿ ಸುಂಕದ ಲೆಕ್ಕಾಚಾರ

ಇನ್ನು ಅಬಕಾರಿ ಸುಂಕದ ಲೆಕ್ಕಾಚಾರ

ಅಬಕಾರಿ ಸುಂಕದ ಲೆಕ್ಕಾಚಾರ: ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48ರು ನಷ್ಟಿದ್ದರೆ, ಡೀಸೆಲ್ ಮೇಲೆ 15.33ರು ಪ್ರತಿ ಲೀಟರ್ ಸುಂಕ ತೆರಬೇಕಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಶೇ6ರಷ್ಟು ಮಾರಾಟ ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ಇಂಧನ ಮೇಲಿನ ಅಬಕಾರಿ ಸುಂಕ ಇಳಿಸುವ ಗೋಜಿಗೆ ಕೇಂದ್ರ ಸರ್ಕಾರ ಹೋಗುತ್ತಿಲ್ಲ. ಅಬಕಾರಿ, ಇಂಧನ ಮುಂತಾದ ಉತ್ಪನ್ನಗಳ ಮೇಲೆ ಸದ್ಯ ಜಿಎಸ್ಟಿ ಜಾರಿಯಾಗಿಲ್ಲ.

ಜಿಎಸ್ಟಿ ಜಾರಿಗೆ ಬಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಾನವಾಗಿ ತೆರಿಗೆ ವಿಧಿಸಲಿದೆ. ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್, ಸೆಸ್ ಕೂಡಾ ಸೇರಿವೆ. ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

English summary
Petrol and diesel will not come under the purview of Goods and Services Tax (GST) in the immediate future as neither the Central government nor any of the states is in favour on fears of heavy revenue loss, a top source said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X